ಹೊಸ : ಶನಿವಾರ ದಿಲ್ಲಿಯಲ್ಲಿ ಬಂಧಿತನಾದ ಉಗ್ರ ಅಬು ಯೂಸುಫ್ನ ತವರೂರು ಉತ್ತರ ಪ್ರದೇಶದ ಬಲರಾಂ ಪುರದಲ್ಲೂ ಭದ್ರತಾ ಪಡೆಗಳ ಶೋಧ ಕಾರ್ಯ ನಡೆದಿದೆ. ಈ ವೇಳೆ, ಭಾರೀ ಪ್ರಮಾಣದ ಸ್ಫೋಟಕಗಳು, ಸ್ಫೋಟಕ ಜಾಕೆಟ್‌ಗಳು ಪತ್ತೆಯಾಗಿವೆ. ಬಲರಾಂ ಪುರದಲ್ಲಿ ಇರುವ ಉಗ್ರನ ಮನೆಯಲ್ಲೇ ಸ್ಫೋಟಕಗಳು ಪತ್ತೆಯಾಗಿವೆ. ಈ ಜಾಕೆಟ್‌ಗಳನ್ನು ಆತ್ಮಾಹುತಿ ದಾಳಿಗೆ ಸಿದ್ದಪಡಿಸಿ ಇಡಲಾಗಿತ್ತು ಎನ್ನಲಾಗಿದೆ. ದಾಳಿ ಬಳಿಕ ಮಾತನಾಡಿದ ಅಬು ಯೂಸುಫ್ ಪತ್ನಿ, ತನ್ನ ಪತಿಯ ದುಷ್ಕೃತ್ಯವನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಮನೆಯಲ್ಲಿ ಗನ್ ಪೌಡರ್ ಸೇರಿದಂತೆ ಹಲವು ಸ್ಫೋಟಕಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಇಂಥಾ ಕೆಲಸಗಳನ್ನು ಮಾಡಬೇಡಿ ಎಂದು ಎಂದು ನಾನು ಅವರಿಗೆ ಹೇಳಿದ್ದೆ. ಆದ್ರೆ, ನನ್ನನ್ನು ತಡೆಯಬೇಡ ಎಂದು ಹೇಳಿದ್ದ ಎಂದು ಮಾಹಿತಿ ನೀಡಿರುವ ಆತನ ಪತ್ನಿ, ಆತನನ್ನು ಕ್ಷಮಿಸಿ, ನಮಗೆ ನಾಲ್ವರು ಮಕ್ಕಳಿದ್ದಾರೆ, ಎಲ್ಲಿಗೆ ಹೋಗಲಿ ಎಂದು ಬೇಡಿಕೊಂಡಿದ್ದಾರೆ. ಉತ್ತರ ಪರದೇಶದ ಬಲರಾಂ ಪುರದಲ್ಲಿ ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿರುವ ಸ್ಫೋಟಕಗಳು ಅಪಾರ ಪ್ರಮಾಣದಲ್ಲಿವೆ. ಈ ಪೈಕಿ, ಕಂದು ಬಣ್ಣದ ಜಾಕೆಟ್‌ನಲ್ಲಿ ಮೂರು ಸ್ಫೋಟಕಗಳು ಇದ್ದವು ಎಂದು ತಿಳಿದುಬಂದಿದೆ. ಇನ್ನು ನೀಲಿ ಬಣ್ಣದ ಜಾಕೆಟ್‌ನಲ್ಲಿ ನಾಲ್ಕು ಸ್ಫೋಟಕಗಳಿದ್ದವು. ಚರ್ಮದ ಬೆಲ್ಟ್ ಒಂದರಲ್ಲಿ 3 ಕೆಜಿ ಸ್ಫೋಟಕಗಳಿದ್ದವು. ಈ ಸಂಬಂಧ ದಿಲ್ಲಿ ಪೊಲೀಸ್ ಆಯುಕ್ತ ಪ್ರಮೋದ್ ಕುಶ್ವಾಹಾ ಮಾಹಿತಿ ನೀಡಿದ್ದಾರೆ. ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳುವ ಮೂಲಕ ಭದ್ರತಾ ಪಡೆಗಳು ಮುಂದಾಗಬಹುದಾಗಿದ್ದ ಅತಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.
from India & World News in Kannada | VK Polls https://ift.tt/2QjQhVL