ಉಗ್ರ ಪೋಷಣೆ ಮಾಡುತ್ತಿರುವ ಪಾಕಿಸ್ತಾನ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿ, ಹೇಳಿದ್ದೇನು?

ವಿಶ್ವಸಂಸ್ಥೆ: ಉಗ್ರರನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನವೇ ಗಡಿಯಾಚೆಗಿನ ಭಯೋತ್ಪಾದನೆಯ ಅತಿ ದೊಡ್ಡ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಕಟುವಾಗಿ ಟೀಕಿಸಿದೆ. ಸುಳ್ಳನ್ನು ಸಾವಿರ ಬಾರಿ ಹೇಳಿದರೂ ಅದು ಎಂದಿಗೂ ಸತ್ಯವಾಗುವುದಿಲ್ಲ. ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕ್‌ ಈಗ ತಾನೇ ನೆರೆ ರಾಷ್ಟ್ರದಿಂದ ಉಗ್ರವಾದದ ಸಂಕಷ್ಟ ಎದುರಿಸುತ್ತಿರುವುದಾಗಿ ನಾಟಕವಾಡುತ್ತಿದೆ. ಪಾಕ್‌ನ ಈ ನಾಟಕ ಇಡೀ ಜಗತ್ತಿಗೆ ಗೊತ್ತಿದೆ ಎಂದು ಭಾರತ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಅಂತಾರಾಷ್ಟ್ರೀಯ ಭದ್ರತೆ ಮತ್ತು ಶಾಂತಿ ಕುರಿತು ನಡೆದ ಚರ್ಚೆಯಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್‌, ಗಡಿಯಾಚೆಗಿನ ಭಯೋತ್ಪಾದನೆಯಿಂದ ಪಾಕ್‌ ಸಂಕಷ್ಟ ಅನುಭವಿಸುತ್ತಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ವಿಶ್ವಸಂಸ್ಥೆಯ ಭಾರತೀಯ ರಾಯಭಾರ ಕಚೇರಿಯು, ಭದ್ರತಾ ಮಂಡಳಿಯ ಸದಸ್ಯರಲ್ಲದವರಿಗೆ ಸಭೆಯಲ್ಲಿಅವಕಾಶವೇ ಇರಲಿಲ್ಲ. ಆದರೂ ಪಾಕಿಸ್ತಾನದ ಪ್ರತಿನಿಧಿ ಹೇಳಿಕೆ ನೀಡಿರುವುದು ಪಾಕ್‌ನ ಸುಳ್ಳಿನ ಮುಖವಾಡವನ್ನು ಬಯಲು ಮಾಡಿದೆ,'' ಎಂದು ಹೇಳಿಕೆಯಲ್ಲಿ ಖಂಡಿಸಿದೆ. ಭಾರತದೊಳಗೆ ಉಗ್ರರನ್ನ ನುಸುಳಿಸುವ ಪಾಕಿಸ್ತಾನದ ಗುಪ್ತಚರ ಇಲಾಖೆ ಇಲ್ಲಿ ದುಷ್ಕೃತ್ಯ ನಡೆಸಲು ಪ್ರೇರೆಪಿಸುತ್ತಿದೆ. ಅಲ್ಲದೇ ಅವರೇ ಉಗ್ರರಿಗೆ ಬೇಕಾದ ಹಣ, ಶಸ್ತ್ರಾಸ್ತ್ರಗಳನ್ನ ನೀಡಿ ಕಳುಹಿಸುತ್ತಿದೆ. ಆದರೂ ಇದೀಗ ಸುಮ್ಮನೆ ನಾಟಕವಾಡುವ ಕೆಲಸವನ್ನ ಪಾಕಿಸ್ತಾನ ಮಾಡುತ್ತಿದೆ.


from India & World News in Kannada | VK Polls https://ift.tt/2FSzIyd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...