ಪುಲ್ವಾಮಾ ದಾಳಿ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ: ಮಸೂದ್ ಅಜರ್ ಹಾಗೂ ಸಹೋದರ ಮಾಸ್ಟರ್‌ಮೈಂಡ್!

ಶ್ರೀನಗರ: ಪುಲ್ವಾಮಾ ಭೀಕರ ಭಯೋತ್ಪಾದನಾ ದಾಳಿ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಚಾರ್ಜ್‌ಶೀಟ್ ಸಲ್ಲಿಸಿದ್ದು, ಪಾಕ್ ಮೂಲದ ಜೈಶ್-ಎ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಹಾಗೂ ಆತನ ಸಹೋದರ ದಾಳಿಯ ರೂವಾರಿ ಎಂದು ಹೇಳಿದೆ. ಜಮ್ಮು ನ್ಯಾಯಾಲಯಕ್ಕೆ ಸುಮಾರು 5 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿರುವ ಎನ್‌ಐಎ, ಮಸೂದ್ ಹಾಗೂ ಆತನ ಸಹೋದರ ರೌಫ್ ಅಸ್ಗರ್ ಪುಲ್ವಾಮಾ ದಾಳಿಯ ಸಂಚು ರೂಪಿಸಿದ್ದರು ಎಂದು ಹೇಳಿದೆ. ಸಿಆರ್‌ಪಿಎಫ್ ವಾಹನದ ಮೇಲೆ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿ ದಾಳಿ ನಡೆಸುವುದರ ಕುರಿತು ಇಬ್ಬರೂ ಸಹೋದರರು‌ ತಂತ್ರ ಹೆಣೆದಿದ್ದರು ಎಂದು ಎನ್‌‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ದಾಳಿಯ ಸಂಪೂರ್ಣ ಮಾಹಿತಿಯನ್ನು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದು, ಇದೊಂದು ವ್ಯವಸ್ಥಿತ ಭಯೋತ್ಪಾದಕ ದಾಳಿ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಅಷ್ಟೇ ಅಲ್ಲದೇ ಚಾರ್ಜ್‌ಶೀಟ್‌ನಲ್ಲಿ ಒಟ್ಟು 20 ಆರೋಪಿಗಳನ್ನು ಹೆಸರಿಸಲಾಗಿದ್ದು, ಇವರಲ್ಲಿ ಬಹುತೇಕರು ಸ್ಥಳೀಯರು ಎಂಬುದು ಗಮನಾರ್ಹ. ಎನ್‌ಐಎ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ದೂರವಾಣಿ ಸಂಭಾಷಣೆ, ವಾಟ್ಸಪ್ ಮೆಸೆಜ್, ಹಾಗೂ ಸ್ಫೋಟಕಗಳ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ. ಜೊತೆಗೆ ಪುಲ್ವಾಮಾ ದಾಳಿಯನ್ನು ಕೊಂಡಾಡಿದ ಮೌಲಾನಾ ಮಸೂದ್ ಅಜರ್‌ನ ವಿಡಿಯೋಗಳನ್ನೂ ನ್ಯಾಯಾಲಯಕ್ಕೆ ಎನ್‌ಐಎ ಹಸ್ತಾಂತರಿಸಿದೆ. ಪುಲ್ವಾಮಾ ದಾಳಿ: 2019, ಫೆಬ್ರವರಿ 14ರಂದು ಅಲಿ ಅಹ್ಮದ್ ದಾರ್ ಎಂಬ ಆತ್ಮಾಹುತಿ ದಾಳಿಕೋರ, ಪುಲ್ವಾಮಾ ಬಳಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನದ ಮೇಲೆ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ನುಗ್ಗಿಸಿ 40 ವೀರ ಯೋಧರನ್ನು ಬಲಿ ಪಡೆದಿದ್ದ. ಈ ದಾಳಿ ಭಾರತದ ರಕ್ಷಣಾ ಪಡೆ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ದಾಳಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು.


from India & World News in Kannada | VK Polls https://ift.tt/2D1FbC0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...