ಅನ್‌ಲಾಕ್‌ 3 ಮಾರ್ಗಸೂಚಿ ಬಿಡುಗಡೆ: ಅಂತರ-ರಾಜ್ಯ ಸಾರಿಗೆ ನಿರ್ಬಂಧ ರದ್ದು, ಪ್ರಯಾಣಕ್ಕೆ ಅಸ್ತು!

ಹೊಸದಿಲ್ಲಿ: ಅನ್‌ಲಾಕ್‌ 3.0 ಮಾರ್ಗಸೂಚಿ ಅಡಿಯಲ್ಲಿ ಕೇಂದ್ರ ಸರಕಾರ ಅಂತರ-ರಾಜ್ಯ, ಅಂತರ-ಜಿಲ್ಲೆ ಸರಕು ಸಾಗಣೆ ಮತ್ತು ಜನರ ಪ್ರಯಾಣಕ್ಕೆ ಇದ್ದ ಎಲ್ಲಾ ನಿರ್ಬಂಧಗಳನ್ನೂ ರದ್ದುಪಡಿಸಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾಅವರು, ಸರಕು ಸಾಗಣೆ ಮತ್ತು ಜನರ ಪ್ರಯಾಣಕ್ಕೆ ಅನಗತ್ಯ ನಿರ್ಬಂಧಗಳನ್ನು ವಿಧಿಸದಂತೆ ನಿರ್ದೇಶನ ನೀಡಿದ್ದಾರೆ. ಅಂತರ ರಾಜ್ಯಗಳ ಪ್ರಯಾಣಕ್ಕೆ ನಿರ್ಬಂಧ ಹೇರಿದರೆ ಅದು ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗದ ಮೇಲೆ ನೇರ ಪರಿಣಾಮ ಬೀರಲಿದೆ ಎಂದಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ, ಅಂತರ ರಾಜ್ಯ ಪ್ರಯಾಣಕ್ಕೆ(ಜನರು) ಸ್ಥಳೀಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಕೂಡ ತಿಳಿಸಿದ್ದಾರೆ. ಕೆಲವೊಂದು ಜಿಲ್ಲೆಗಳು ಹಾಗೂ ರಾಜ್ಯಗಳು ಸರಕು ಸಾಗಾಟ ಹಾಗೂ, ಪ್ರಯಾಣಕ್ಕೆ ನಿರ್ಬಂಧ ಹೇರಿರುವುದರಿಂದ ಈ ರೀತಿಯ ಹೊಸ ಮಾರ್ಗಸೂಚಿಯನ್ನ ಕೇಂದ್ರ ಗೃಹ ಇಲಾಖೆ ಹೊರಡಿಸಿದೆ. ಕೊರೊನಾದೊಂದಿಗೆ ಜೀವನ ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ ನಂತರ ಕೇಂದ್ರ ಸರಕಾರ ಅನ್‌ಲಾಕ್‌ ಮಾರ್ಗಸೂಚಿಗಳನ್ನ ಒಂದೊಂದಾಗಿ ಬಿಡುಗಡೆಗೊಳಿಸುತ್ತಿದೆ.


from India & World News in Kannada | VK Polls https://ift.tt/2CTAha7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...