ಭಾರತ ನಮ್ಮ ಪಾಲುದಾರ ರಾಷ್ಟ್ರವೇ ಹೊರತು ಪ್ರತಿಸ್ಪರ್ಧಿಯಲ್ಲ: ಚೀನಾ ರಾಯಭಾರಿ!

ನವದೆಹಲಿ: ಚೀನಾ ಯಾವಾಗಲು ಭಾರತವನ್ನು ತನ್ನ ಪಾಲುದಾರ ರಾಷ್ಟ್ರವನ್ನಾಗಿ ಪರಿಗಣಿಸುತ್ತದೆಯೇ ಹೊರತು ಪ್ರತಿಸ್ಪರ್ಧಿ ರಾಷ್ಟ್ರವನ್ನಾಗಿ ಅಲ್ಲ ಎಂದು ಭಾರತಕ್ಕೆ ಚೀನಾದ ರಾಯಭಾರಿ ಹೇಳಿದ್ದಾರೆ. ಚೀನಾ-ಇಂಡಿಯಾ ಯುತ್ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಸುನ್ ವೈಡಾಂಗ್, ಭಾರತವನ್ನು ಸಮಾನ ಅವಕಾಶ ಹೊಂದಿರುವ ರಾಷ್ಟ್ರವನ್ನಾಗಿ ಚೀನಾ ನೋಡುತ್ತದೆಯೇ ಹೊರತು ಅಪಾಯ ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ಮೂಲಕವೇ ಗಡಿ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿರುವ ಸುನ್ ವೈಡಾಂಗ್, ಗಡಿ ಸಮಸ್ಯೆ ಉಭಯ ದೇಶಗಳ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧಗಳಿಗೆ ಧಕ್ಕೆ ತರುವಷ್ಟು ಜಟಿಲವಾಗಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಉಭಯ ದೇಶಗಳ ನಡುವೆ ಎದುರಾಗಿರುವ ಗಡಿ ಬಿಕ್ಕಟ್ಟನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿ, ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಯತ್ನಿಸಬೇಕು ಎಂದು ಸುನ್ ವೈಡಾಂಗ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಗಡಿ ಸಮಸ್ಯೆಗೆ ಕಾರಣವಾಗಿರುವ ಚೀನಾ, ಇದೀಗ ರಾಜತಾಂತ್ರಿಕ ಮಾತುಕತೆಗಳು ಹಾಗೂ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಕುರಿತು ಮಾತನಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಬಹುದು.


from India & World News in Kannada | VK Polls https://ift.tt/2YuGBwj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...