ವಿಮಾನ ಪ್ರಯಾಣಿಕರ ಏರಿಕೆ ನಿರೀಕ್ಷೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ, ಸೇವೆ ಆರಂಭ!

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಕಾರಣದಿಂದ ನೆಲಕಚ್ಚಿದ್ದ ವಿಮಾನ ಪ್ರಯಾಣಿಕರ ಸಂಖ್ಯೆ ಚೇತರಿಸಿಕೊಳ್ಳುತ್ತಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಜೂನ್‌ಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಏರಿಕೆ ಕಂಡಿದೆ. ವಿಮಾನ ಪ್ರಯಾಣಿಕರ ಸಂಖ್ಯೆ ಏರಿಕೆಯು ಆತಿಥ್ಯ ಕ್ಷೇತ್ರ, ಕ್ಯಾಬ್‌, ಟ್ರಾನ್ಸ್‌ಪೋರ್ಟ್‌ ವಲಯಕ್ಕೂ ಚೇತರಿಕೆಯ ಟಾನಿಕ್‌ ನೀಡಿದೆ. ಇದೇ ವೇಳೆ ಅಂತಾರಾಜ್ಯ ಪ್ರಯಾಣಿಕರಿಗೆ ಕ್ವಾರಂಟೈನ್‌, ನಿಯಂತ್ರಣ ಕ್ರಮಗಳನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ತೆಗೆದು ಹಾಕಿದೆ. ಹೀಗಾಗಿ, ಪ್ರಯಾಣಿಕರ ಸಂಖ್ಯೆ ಇನ್ನು ಮುಂದೆ ಮತ್ತಷ್ಟು ಹೆಚ್ಚುವುದು ನಿಚ್ಚಳವಾಗಿದೆ. ದೇಶಿಯ ಮಾರ್ಗದಲ್ಲಿ ಜೂನ್‌ ತಿಂಗಳಲ್ಲಿ 3,69,752 ಇದ್ದ ಪ್ರಯಾಣಿಕರ ಸಂಖ್ಯೆ ಜುಲೈನಲ್ಲಿ 4,18,302ಕ್ಕೆ ಏರಿಕೆಯಾಗಿದೆ. ಕಡ್ಡಾಯ ಕ್ವಾರಂಟೈನ್‌, ಸೇವಾಸಿಂಧು ಆ್ಯಪ್‌ನಲ್ಲಿ ಹೆಸರು ನೋಂದಣಿ, ಕಧಿಡ್ಡಾಯ ತಪಾಸಣೆ ಸೇರಿದಂತೆ ಹಲವು ಕಾರಣಗಳಿಗೆ ಸಾಕಷ್ಟು ಜನ ವಿಮಾನ ಪ್ರಯಾಣಕ್ಕೆ ಹಿಂಜರಿಯುತ್ತಿದ್ದರು. ಆದರೆ, ಎಲ್ಲನಿಯಮಗಳನ್ನು ತೆರವುಗೊಳಿಸಿರುವ ಕಾರಣ ಸೆಪ್ಟೆಂಬರ್‌ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವುದು ನಿಶ್ಚಿತ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಮೂರನೇ ದಟ್ಟಣೆಯ ನಿಲ್ದಾಣವಾಗಿರುವ ಕೆಐಎನಲ್ಲಿ ಕೊರೊನಾ ಲಾಕ್‌ಡೌನ್‌ ಕಾರಣ ಪ್ರಯಾಣಿಕರ ಸಂಖ್ಯೆ ಹಿಂದಿನ ವರ್ಷ ಜುಲೈಗೆ ಹೋಲಿಸಿದರೆ ಶೇ.82ರಷ್ಟು ಕುಸಿತ ಕಂಡಿದೆ. ವಿಶೇಷ, ಒಪ್ಪಂದದ ವಿಮಾನಗಳು ಮಾತ್ರ ಹಾರಾಟ! ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿವೆ. ಅಲ್ಲದೇ ಬಹುತೇಕ ರಾಷ್ಟ್ರಗಳು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿರ್ಬಂಧ ಹೇರಿವೆ. ಹೀಗಾಗಿ, ಕೆಐಎ ಮೂಲಕ ಅಂತಾರಾಷ್ಟ್ರೀಯ ಮಾರ್ಗದಲ್ಲಿ ವಿಶೇಷ ಮತ್ತು ಒಪ್ಪಂದದ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಜುಲೈ ತಿಂಗಳಲ್ಲಿ19,781 ಅಂತಾರಾಷ್ಟ್ರೀಯ ಪ್ರಯಾಣಿಕರು ಕೆಐಎ ಮೂಲಕ ಪ್ರಯಾಣಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.95.2ರಷ್ಟು ಕಡಿಮೆ ಇದೆ. ''ಭಾರತ ಸೇರಿದಂತೆ ಜಗತ್ತಿನ ಎಲ್ಲರಾಷ್ಟ್ರಗಳಲ್ಲಿಸೋಂಕು ನಿಯಂತ್ರಣಕ್ಕೆ ಬರಬೇಕು ಅಥವಾ ಲಸಿಕೆ ಕಂಡು ಹಿಡಿಯಬೇಕು. ಅದಾದ ನಂತರವೇ ಅಂತಾರಾಷ್ಟ್ರೀಯ ವಿಮಾನ ಹಾರಾಟ ಚೇತರಿಸಿಕೊಳ್ಳಬಲ್ಲದು,'' ಎಂದು ವಿಮಾನಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆತಿಥ್ಯ ವಲಯದ ಬೆಳವಣಿಗೆ ಈ ಹಿಂದೆ ಪ್ರತಿನಿತ್ಯ ಸಾವಿರಾರು ಕ್ಯಾಬ್‌ಗಳು ಕೆಐಎಗೆ ಸಂಚರಿಸುತ್ತಿದ್ದವು. ಆದರೆ, ಪ್ರಯಾಣಿಕರ ಕೊರತೆ ಕಾರಣ ಕ್ಯಾಬ್‌ ಚಾಲಕರ ಬದುಕು ಅತಂತ್ರವಾಗಿದೆ. ಆದರೆ, ವಿಮಾನ ಹಾರಾಟ ಚೇತರಿಸಿಕೊಂಡರೆ ಚಾಲನೆ ಮೇಲೆ ಅವಲಂಬಿತ ಸಾವಿರಾರು ಜನರ ಉಪ ಜೀವನ ಹಳಿಗೆ ಮರಳುತ್ತದೆ. ಆದರೆ, ಮೊದಲಿನಂತಾಗಲು ಒಂದು ವರ್ಷ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. 14 ಅಂತಾರಾಷ್ಟ್ರೀಯ ಮಾರ್ಗದಲ್ಲಿವಿಮಾನ ಹಾರಾಟ! ಏರ್‌ಬಬ್ಬಲ್‌, ವಂದೇ ಭಾರತ್‌ ಮತ್ತು ವಿದೇಶದಲ್ಲಿ ಸಿಲುಕಿರುವವರನ್ನು ಕರೆ ತರುವ ಭಾಗವಾಗಿ 14 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೆಐಎನಿಂದ ವಿಮಾನ ಹಾರಾಟ ಆರಂಭವಾಗಲಿದೆ. ಅಬುದಾಬಿ, ಆ್ಯಮ್‌ಸ್ಟರ್‌ಡಂ, ದುಬೈ, ದೋಹಾ, ಫ್ರಾಂಕ್‌ಫರ್ಟ್‌, ಕುವೈಟ್‌, ಕ್ವಾಲಲಾಂಪುರ್‌, ಲಂಡನ್‌, ಮಸ್ಕತ್‌, ನರಿತಾ(ಟೊಕಿಯೊ), ಪ್ಯಾರಿಸ್‌, ರಿಯಾದ್‌ ಮತ್ತು ಸಿಂಗಾಪುರಕ್ಕೆ ವಿಮಾನ ಹಾರಾಟ ಆರಂಭವಾಗಿದೆ.


from India & World News in Kannada | VK Polls https://ift.tt/3gq6Nhz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...