ಹೊಸ ದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಇನ್‌ಸ್ಟಾ ಗ್ರಾಂ ಅಕೌಂಟ್‌ನಲ್ಲಿ ಒಂದು ಸ್ಪೆಷಲ್ ಪ್ರಕಟಿಸಿದ್ದಾರೆ. ಬೆಳಗಿನ ವ್ಯಾಯಾಮಕ್ಕೂ ಮುನ್ನ ನವಿಲಿನ ಜೊತೆ ಕಾಲ ಕಳೆಯುವ ದೃಶ್ಯ ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿ ಪ್ರತಿದಿನವೂ ಬೆಳಗಿನ ಹೊತ್ತು ನವಿಲಿನ ಜೊತೆ ಕಾಲ ಕಳೆಯುತ್ತಾರಂತೆ. ತಮ್ಮ ಬೆಳಗಿನ ವ್ಯಾಯಾಮ ಹಾಗೂ ತಮ್ಮ ನಿವಾಸದಿಂದ ಕಚೇರಿಗೆ ನಡೆದು ಹೋಗುವ ವೇಳೆ ಅವರಿಗೆ ಸಾಥ್ ನೀಡುತ್ತದೆ. ಆ ಕೆಲವು ದೃಶ್ಯಾವಳಿಗಳನ್ನು ಪ್ರಧಾನಿ ಮೋದಿ ತಮ್ಮ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಪ್ರಧಾನಿ ಅವರ ನಿವಾಸದಲ್ಲಿ ಪಕ್ಷಿಗಳು ಗೂಡು ಕಟ್ಟಲು ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇರುವ ರೀತಿಯಲ್ಲಿ ಪಕ್ಷಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಛಬೂರ್ತಗಳನ್ನ ಇರಿಸಲಾಗಿದೆ. ರಾಜಕೀಯಕ್ಕೆ ಬರುವ ಮುನ್ನ ಹಿಮಾಲಯ ಹಾಗೂ ಉತ್ತರಾಖಂಡಗಳಲ್ಲಿ ಕಾಲ ಕಳೆದಿದ್ದ ಪ್ರಧಾನಿ ಮೋದಿ, ತಮ್ಮ ನಿಸರ್ಗ ಪ್ರೇಮದ ಕುರಿತಾಗಿ 2 ಪುಸ್ತಕಗಳನ್ನೂ ಬರೆದಿದ್ದಾರೆ. ಹವಾಮಾನ ಬದಲಾವಣೆಯ ಸವಾಲಿಗೆ ಗುಜರಾತ್ ಪ್ರತಿಕ್ರಿಯೆ ಹಾಗೂ ಬದಲಾವಣೆ ನಿರಂತರ ಎಂಬ ವಿಚಾರವಾಗಿ ಪ್ರಧಾನಿ ಪುಸ್ತಕಗಳನ್ನು ಬರೆದಿದ್ದಾರೆ. ಇಡೀ ವಿಶ್ವವೇ ಜಾಗತಿಕ ತಾಪಮಾನ ಏರಿಕೆ ಬಗ್ಗೆ ಮಾತನಾಡುವ ವೇಳೆ, ಪ್ರಧಾನಿ ಮೋದಿ ಈ ಸಂಬಂಧ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸುವ ಕುರಿತಾಗಿ ಪುಸ್ತಕ ಬರೆದಿದ್ದರು ಮಾನವೀಯ ಮೌಲ್ಯಗಳು ಹಾಗೂ ಜಾಗತಿಕ ತಾಪಮಾನ ಏರಿಕೆ ವಿರುದ್ಧದ ಹೋರಾಟದ ಕುರಿತಾಗಿ ಅವರು ಪುಸ್ತಕ ಬರೆದಿದ್ದರು. ಅಂತಾರಾಷ್ಟ್ರೀಯ ಸೋಲಾರ್ ಅಲಯನ್ಸ್ ರಚಿಸುವ ಮೂಲಕ ಪ್ರಧಾನಿ ಮೋದಿ ಹೊಸ ಭಾಷ್ಯ ಬರೆದಿರೋದನ್ನು ಸ್ಮರಿಸಬಹುದು.
from India & World News in Kannada | VK Polls https://ift.tt/2YsfqCf