ಬೆಂಗಳೂರು: ದೇಶದಲ್ಲಿ ಮತ್ತೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಪೆಟ್ರೋಲ್ ದರ ಏರುತ್ತಲೆ ಇದೆ. ಬೆಂಗಳೂರಿನಲ್ಲಿ 85 ರ ಗಡಿ ಬಂದು ನಿಂತರೆ, ದೇಶದ ಉಳಿದ ಮಹಾನಗರಗಳಲ್ಲಿ ದರ 85ರ ಗಡಿ ದಾಟಿದೆ. ಹೀಗಾಗಿ ಸಹಜವಾಗೆ ಜನ ಸಾಮಾನ್ಯರಿಗೆ ತಲೆಬಿಸಿ ಆಗುತ್ತಿದೆ. ಇದೇ ರೀತಿ ಏರುತ್ತಲೆ ಹೋದರೆ ಕೊರೊನಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಇನ್ನೊಂದು ಸಮಸ್ಯೆ ಎದುರಾಗುವ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರಾಜ್ಯಗಳು ಸುಂಕವನ್ನ ಕಡಿತಗೊಳಿಸಿ ಜನರಿಗಾಗುವ ಹೊರೆಯನ್ನ ತಗ್ಗಿಸುವ ಮನವಿಯನ್ನ ಮಾಡುತ್ತಿದ್ದಾರೆ. ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿದ ಹಿನ್ನೆಲೆ ದೇಶದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಹಾಗಾದರೆ ಆಗಸ್ಟ್ 25ರ ಮಂಗಳವಾರ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.ಸಿಲಿಕಾನ್ ಸಿಟಿ ಪೆಟ್ರೋಲ್:84.39 ರೂ. ( ₹0.12 ಪೈಸೆ ಏರಿಕೆ) ಡೀಸೆಲ್: 77.88 ರೂ. (ಬದಲಾವಣೆ ಇಲ್ಲ) ರಾಷ್ಟ್ರ ರಾಜಧಾನಿ ನವದೆಹಲಿ ಪೆಟ್ರೋಲ್: 81.73 ರೂ. ( ₹0.11 ಪೈಸೆ ಏರಿಕೆ) ಡೀಸೆಲ್: 73.56 ರೂ. (ಬದಲಾವಣೆ ಇಲ್ಲ) ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್: 88.39 ರೂ. ( ₹0.11 ಪೈಸೆ ಏರಿಕೆ) ಡೀಸೆಲ್: 80.11 ರೂ. (ಬದಲಾವಣೆ ಇಲ್ಲ) ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್:84.74 ರೂ. (₹0.10 ಪೈಸೆ ಏರಿಕೆ) ಡೀಸೆಲ್: 78.86 ರೂ.(ಬದಲಾವಣೆ ಇಲ್ಲ)
from India & World News in Kannada | VK Polls https://ift.tt/32tfiUq