'ಅಮೆರಿಕದ ಕೆಟ್ಟ ಕನಸು ಜೋ ಬಿಡೆನ್‌': ಎದುರಾಳಿ ತವರಲ್ಲಿಯೇ ಡೊನಾಲ್ಡ್‌ ಟ್ರಂಪ್‌ ಕಿಡಿ

ಒಲ್ಡ್‌ ಫೋರ್ಜ್‌: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಕಣ ರಂಗೇರಿದ್ದು, ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕ್‌ ಪಕ್ಷದ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಅದರಲ್ಲೂ ಟ್ರಂಪ್‌ ಮತ್ತು ಬಿಡೆನ್‌ ನಡುವೆ ಆರೋಪ - ಪ್ರತ್ಯಾರೋಪಗಳ ಸುರಿಮಳೆಯೇ ನಡೆಯುತ್ತಿದೆ. ಗುರುವಾರ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್‌ ಡೆಮಾಕ್ರಟಿಕ್‌ ಪಕ್ಷ ಅಧಿಕಾರಕ್ಕೆ ಬಂದರೆ ಅಮೆರಿಕದ ಕಾರ್ಮಿಕರನ್ನು ಮಾರಾಟ ಮಾಡುತ್ತದೆ. ಅವರ ಅಧಿಕಾರ ಅಮೆರಿಕಕ್ಕೆ ಕೆಟ್ಟ ಕನಸಾಗಲಿದೆ ಎಂದು ಹೇಳಿದರು. ಅವರ ಜನ್ಮಸ್ಥಳವಾದ ಪೆನ್ಸಿಲ್ವೇನಿಯಾದಿಂದ ಅಣತಿ ದೂರದಲ್ಲಿರುವ ಓಲ್ಡ್‌ ಫೋರ್ಜ್‌ನಲ್ಲಿಯೇ ಟ್ರಂಪ್‌ ಈ ಮಾತುಗಳನ್ನಾಡಿರುವುದು ವಿಶೇಷ. ಬಿಡೆನ್‌ ಅಮೆರಿಕದ ಕೆಟ್ಟ ಕನಸು ಎಂದು ಓಲ್ಡ್‌ ಫೋರ್ಜ್‌ನಲ್ಲಿರುವ ಪ್ರೇಕ್ಷಕರಿಗೆ ಟ್ರಂಪ್‌ ಹೇಳಿದರು. ಅವರು ಕಳೆದ ಅರ್ಧ ಶತಮಾನವನ್ನು ವಾಷಿಂಗ್ಟನ್‌ನಲ್ಲಿ ಕಳೆದಿದ್ದಾರೆ. ನಮ್ಮ ದೇಶ ಮಾರಿ ನಮ್ಮ ಉದ್ಯೋಗಗಳನ್ನು ಕಸಿದುಕೊಂಡಿದ್ದಾರೆ. ಮತ್ತು ಇತರ ದೇಶಗಳಿಗೆ ನಮ್ಮ ಉದ್ಯೋಗಗಳನ್ನು ಕದಿಯಲು ಅವಕಾಶ ಮಾಡಿಕೊಟ್ಟರು ಎಂದು ಟ್ರಂಪ್ ಕಿಡಿ ಕಾರಿದ್ದಾರೆ. ಜೋ ಬಿಡೆನ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಮೊದಲು ಟ್ರಂಪ್‌ ಈ ಮಾತುಗಳನ್ನಾಡಿದ್ದರು. ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಅಭ್ಯರ್ಥಿಯಾಗಿ ಜೋ ಬಿಡೆನ್‌ ಗುರುವಾರ ನಾಮನಿರ್ದೇಶನ ಸ್ವೀಕರಿಸಿದರು. ಇದಾದ ನಂತರ ಮಾತನಾಡಿದ ಅವರು ಕಗ್ಗತ್ತಲಿನ ಕಾಲ ಮುಗಿಯಲಿದೆ ಎಂದು ಟ್ರಂಪ್ ಆಡಳಿತಕ್ಕೆ ಚಾಟಿ ಬೀಸಿದ್ದರು. ನವೆಂಬರ್‌ 3ರಂದು ಅಮೆರಿಕ ಅಧ್ಯಕ್ಷೀಯ ನಿಗದಿಯಾಗಿದ್ದು, ಚುನಾವಣಾ ಕಣ ರಂಗೇರಿದೆ. ಡೆಮಾಕ್ರಟಿಕ್‌ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಜೋ ಬಿಡೆನ್‌ ಇದ್ದರೆ, ರಿಪಬ್ಲಿಕ್‌ ಪಾರ್ಟಿಯಿಂದ ಹಾಲಿ ಅಧ್ಯಕ್ಷ ಕಣದಲ್ಲಿದ್ದಾರೆ. ಇನ್ನು, ಉಪಾಧ್ಯಕ್ಷ ಅಭ್ಯರ್ಥಿಯಾಗಿ ಡೆಮಾಕ್ರಟಿಕ್‌ನಿಂದ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಕಣದಲ್ಲಿರುವುದು ಜೋ ಬಿಡೆನ್‌ಗೆ ಭಾರತೀಯರ ಬಲ ಸಿಗಲಿದೆ ಎನ್ನಲಾಗುತ್ತಿದೆ.


from India & World News in Kannada | VK Polls https://ift.tt/3ghNOpi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...