ಕೊರೊನಾ ಅಪ್ಡೇಟ್ಸ್‌: ಒಂದೇ ದಿನ 8 ಲಕ್ಷ ಕೊರೊನಾ ಪರೀಕ್ಷೆ, 29 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ!

ಹೊಸದಿಲ್ಲಿ: ದೇಶದಲ್ಲಿ ದಿನ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಆರುವತ್ತು ಸಾವಿರದ ಗಡಿ ದಾಟುತ್ತಿದೆ. ಇದು ಸರಕಾರವನ್ನ ಕೊಂಚ ಆತಂಕಕ್ಕೆ ದೂಡಿದೆ. ಈ ರೀತಿ ದಿನ ನಿತ್ಯ ಇಷ್ಟು ಹೊಸ ಕೇಸ್‌ ದೃಢಪಟ್ಟರೆ ಮುಂದಿನ ಕೆಲವೇ ದಿನಗಳಲ್ಲಿ ಸಮಸ್ಯೆಯಾಗಬಹುದು ಅನ್ನುವುದು ವೈದ್ಯಕೀಯ ಪರಿಣಿತರ ಅಭಿಪ್ರಾಯ. ಹೀಗಾಗಿ ಸರಕಾರ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನ ಕೈಗೊಂಡಿದೆ. ಈ ಮಧ್ಯೆ ಇದೀಗ ಗುರುವಾರ ಒಂದೇ ದಿನ ದೇಶದಲ್ಲಿ 68,898 ಕೊರೊನಾ ಕೇಸ್‌ಗಳು ದೃಢಪಟ್ಟಿದೆ ಎಂದು ಕೇಂದ್ತ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 60,000ಕ್ಕೂ ಹೆಚ್ಚು ಹೊಸ ಕೇಸ್‌ ದೃಢಪಡುವ ಮೂಲಕ ದೇಶದಲ್ಲಿ ಒಟ್ಟು 29,05,824 ಕೊರೊನಾ ಸೋಂಕಿತರು ಈವರೆಗೆ ಪತ್ತೆಯಾದಂತೆ ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು, ಕಳೆದ 24 ಗಂಟೆಯಲ್ಲಿ ಒಟ್ಟು 983 ಮಂದಿ ಕೊರೊನಾಗೆ ಬಲಿಯಾಗುವ ಮೂಲಕ ಈವರೆಗೆ ಕೊರೊನಾದಿಂದ 54,849 ಮಂದಿ ವೈರಸ್‌ನಿಂದಾಗಿ ಸಾವನಪ್ಪಿದ್ದಾರೆ. ಒಟ್ಟು ದೇಶದಲ್ಲಿ 21,58,947 ಮಂದಿ ಕೊರೊನಾ ರೋಗದಿಂದ ಮುಕ್ತರಾಗಿ ಮನೆಗೆ ತೆರಳಿದ್ದು, ಸದ್ಯ 6,92,028 ಸಕ್ರಿಯ ಪ್ರಕರಣಗಳು ದೇಶದಲ್ಲಿದೆ. ಇನ್ನು ಕೊರೊನಾ ಪರೀಕ್ಷೆ ನಡೆಸುವುದರಲ್ಲಿ ಮುಂಚೂಣಿಯಲ್ಲಿರುವ ಭಾರತ ಗುರುವಾರ ಒಂದೇ ದಿನ ಒಟ್ಟು 8,05,985 ಕೊರೊನಾ ಟೆಸ್ಟ್‌ ನಡೆಸಿದೆ. ಹೀಗಾಗಿ ಆಗಸ್ಟ್‌ 20ರ ವರೆಗೆ ದೇಶದಲ್ಲಿ ಒಟ್ಟು 3,34,67,237 ಮಂದಿಯ ಸ್ಯಾಂಪಲ್ಸ್‌ಗಳನ್ನ ಪಡೆದು ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್‌ ತಿಳಿಸಿದೆ. ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಲು ಅತೀ ಹೆಚ್ಚು ಟೆಸ್ಟ್‌ ಎಂಬ ಅಭಿಪ್ರಾಯವನ್ನ ವೈದ್ಯಕೀಯ ಪರಿಣಿತರು ವ್ಯಕ್ತಪಡಿಸಿದ್ದಾರೆ. ಆದರೆ ದಿನ ನಿತ್ಯದ ಸಂಖ್ಯೆಗೆ ಕಡಿವಾಣ ಹಾಕಬೇಕು ಎನ್ನುವ ಅಭಿಪ್ರಾಯವು ವ್ಯಕ್ತವಾಗಿದೆ.


from India & World News in Kannada | VK Polls https://ift.tt/2ErQgMI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...