ಗೌರಿ-ಗಣೇಶ ಹಬ್ಬದ ಸಂಭ್ರಮ: ಬಿಎಸ್‌ವೈ ಸೇರಿದಂತೆ ಗಣ್ಯರಿಂದ ಶುಭಾಶಯ

ಬೆಂಗಳೂರು: ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಕೋವಿಡ್‌ ಸೋಂಕು ಭಯದ ನಡುವೆ ಜನರು ಹಬ್ಬವನ್ನು ಸರಳವಾಗಿ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಹಬ್ಬಕ್ಕೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಶುಭಾಶಯ ಸಲ್ಲಿಸಿದ್ದಾರೆ. ರಾಜ್ಯದ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹೃತ್ಪೂರ್ವಕ ಶುಭಕಾಮನೆಗಳು. ಜಗನ್ಮಾತೆ ಗೌರಿ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯಗಳನ್ನು ಕರುಣಿಸಲಿ, ವರಸಿದ್ದಿ ವಿನಾಯಕನು ಎಲ್ಲರ ಸಂಕಷ್ಟಗಳನ್ನು ಅಭೀಷ್ಟಗಳನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ. ಕೊರೋನಾ ಹಿನ್ನಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಹಬ್ಬವನ್ನು ಆಚರಿಸೋಣ ಎಂದು ಬಿಎಸ್‌ವೈ ಟ್ವೀಟ್ ಮಾಡಿದ್ದಾರೆ. ಜಗನ್ಮಾತೆ ಸರ್ವಮಂಗಳೆ ಶ್ರೀ ಸ್ವರ್ಣಗೌರಿಯ ಹಾಗು ನಿರ್ವಿಘ್ನಕಾರಕ ವಿಘ್ನೇಶ್ವರನ ಕೃಪಾಕಟಾಕ್ಷವು ಎಲ್ಲರಿಗು ಲಭಿಸಲಿ. ಸರ್ವರಿಗೂ ಗೌರಿ - ಗಣೇಶ ಹಬ್ಬದ ಶುಭಾಶಯಗಳು ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಶುಭಕೋರಿದ್ದಾರೆ. ಕೊರೊನಾ ಸೋಂಕು, ಅತಿವೃಷ್ಟಿಯಂತಹ ವಿಪತ್ತುಗಳು ನಿವಾರಣೆಯಾಗಿ ಎಲ್ಲರ ಬದುಕಲ್ಲಿ ಶಾಂತಿ, ಸಂತೃಪ್ತಿ ಮತ್ತು ಸಮೃದ್ಧಿ ನೆಲೆಗೊಳ್ಳಲಿ. ನಾಡಿನ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭ ಕಾಮನೆಗಳು. ಈ ಬಾರಿ ಸರಳವಾಗಿ ಗಣೇಶೋತ್ಸವವನ್ನು ಆಚರಿಸೋಣ. ವಿಘ್ನ ನಿವಾರಕ ಗಣೇಶ ನಿಮ್ಮೆಲ್ಲರ ಅಭಿಲಾಷೆ ಈಡೇರಿಸಲಿ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಶುಭಾಶಯ ಸಲ್ಲಿಸಿದ್ದಾರೆ. ಶ್ರೀ ಗೌರಿ ಎಲ್ಲರಿಗೂ ಉತ್ತಮ ಆರೋಗ್ಯ, ಸುಖ- ಶಾಂತಿ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್‌ ಶುಭಕೋರಿದ್ದಾರೆ. ಹೀಗೆ ಹಲವು ಮಂದಿ ರಾಜಕೀಯ ಮುಖಂಡರು ಗೌರಿ-ಗಣೇಶ ಹಬ್ಬಕ್ಕೆ ಶುಭಾಶಯ ಸಲ್ಲಿಸಿದ್ಧಾರೆ. ಕೋವಿಡ್‌ ಇರುವ ಕಾರಣಕ್ಕಾಗಿ ಹಬ್ಬ ಆಚರಣೆಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದ್ದು ಮಾರ್ಗಸೂಚಿ ಪಾಲನೆ ಮಾಡಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವಂತೆ ರಾಜ್ಯ ಸರ್ಕಾರ ವಿನಂತಿಸಿದೆ.


from India & World News in Kannada | VK Polls https://ift.tt/329cdbK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...