ನಾಡಿನಾದ್ಯಂತ ಇಂದು ವಿಘ್ನ ನಿವಾರಕ ಗಣೇಶನ ಹಬ್ಬ: ವಿವಿಧೆಡೆ ಪೂಜೆ, ಗಣ್ಯರಿಂದ ಶುಭಾಶಯದ ಸಂದೇಶ!

ಬೆಂಗಳೂರು: ದೇಶದಾದ್ಯಂತ ಇಂದು ವಿಘ್ನ ನಿವಾರಕ ಗಣೇಶನಿಗೆ ಪೂಜೆ ಪುನಸ್ಕಾರಗಳು ಸಲ್ಲುತ್ತಿವೆ. ದೇಶದ ಪ್ರಮುಖ ದೇಗುಲಗಳಲ್ಲಿ ಈಗಾಗಲೇ ಮಹಾ ಪೂಜೆ ಸೇರಿ ವಿವಿಧ ಸಂಭ್ರಮಾಚರಣೆ ಆರಂಭವಾಗಿದೆ. ಕೊರೊನಾ ಸೋಂಕು ಇರುವುದರಿಂದ ವಿವಿಧೆಡೆ ಸಾರ್ವಜನಿಕ ಪೂಜೆ ರದ್ದಾಗಿದ್ದರು, ಜನರು ಗಣೇಶನ ವಿಗ್ರಹ ಮನೆಗೆ ತಂದು ಪ್ರತಿಷ್ಠಾಪನೆ ಮಾಡಿ ವಿಘ್ನಗಳನ್ನು ನಿವಾರಿಸು ಎಂದು ಪ್ರಾರ್ಥಿಸುತ್ತಿದ್ದಾರೆ. ವಿವಿಧೆಡೆ ವಿಧ ವಿಧವಾದ ಗಣೇಶ ಪ್ರತ್ಯಕ್ಷವಾಗುತ್ತಿದ್ದಾನೆ. ಹಾಗಾದರೆ ಗಣೇಶನ ಹಬ್ಬದ ಸಂಭ್ರಮ ದೇಶದಾದ್ಯಂತ ಹೇಗಿದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ. ಗಣೇಶನ ದೇವಾಲಯಕ್ಕೆ ಹೆಸರುವಾಸಿಯಾಗಿರುವ ಮಹಾರಾಷ್ಟ್ರದ ಸಿದ್ದಿವಿನಾಯಕನ ದೇವಾಲಯದಲ್ಲಿ ಮುಂಜಾನೆಯೆ ಗಣೇಶನ ಮಹಾ ಮಂಗಳಾರತಿ ಆರಂಭವಾಯಿತು. ಗುಜರಾತ್‌ನಲ್ಲಿ ಒಣ ಹಣ್ಣುಗಳನ್ನ ಬಳಸಿ ಡಾ. ಅದಿತಿ ಮಿಥಲ್‌ ಎನ್ನುವವರು ಗಣೇಶನನ್ನ ನಿರ್ಮಿಸಿದ್ದಾರೆ.ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೂಷಿಕ ವಾಹನನ ಕೃಪೆಗೆ ಪಾತ್ರರಾಗಿದ್ದಾರೆ. ಇನ್ನು ದೆಹಲಿಯ ದ್ವಾರಕದಲ್ಲಿರುವ ಸಿದ್ದಿವಿನಾಯಕ ಮಂದಿರದಲ್ಲೂ ವಿಶೇಷ ಆರತಿ ಮಾಡಲಾಯಿತು. ಗಣೇಶನ ಹಬ್ಬಕ್ಕೆ ಪ್ರಸಿದ್ದಿಯಾಗಿರುವ ಮಹಾರಾಷ್ಟ್ರದ ನಾಗಪುರದಲ್ಲೂ ಗಣೇಶನ ದೇವಾಲಯದಲ್ಲಿ ವಿಶೇಷ ಪೂಜನೆ ಸಂದವು.


from India & World News in Kannada | VK Polls https://ift.tt/3l75sjs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...