'ತನ್ನದು ಪಕ್ಷಾತೀತ ವೇದಿಕೆ, ನಿಯಮಗಳಿಗೆ ವಿರುದ್ಧವಾದ ಪೋಸ್ಟ್‌ಗಳನ್ನು ಕಿತ್ತೆಸೆಯುತ್ತೇವೆ' : ಫೇಸ್‌ಬುಕ್ ಸ್ಪಷ್ಟನೆ

ಹೊಸದಿಲ್ಲಿ: ಬಿಜೆಪಿ ಪಕ್ಷದ ಪರ ಮೃದು ಧೋರಣೆ ತಾಳಿದೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿರುವ ಮಧ್ಯೆಯೇ ಫೇಸ್‌ಬುಕ್ ಇಂಡಿಯಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ತನ್ನ ಮೇಲಿನ ಆರೋಪ ಭಾರತದಲ್ಲಿ ಪಡೆದುಕೊಂಡಿರುವ ಬೆನ್ನಲ್ಲೇ ಸ್ಪಷ್ಟನೆ ಫೇಸ್‌ಬುಕ್ ನೀಡಿದ್ದು, ತಾವು ಯಾವುದೇ ಪಕ್ಷದ ಪರ ಮೃಧು ಧೋರಣೆ ತಾಳುವುದಿಲ್ಲ. ತನ್ನದು ಎಂದು ಸ್ಪಷ್ಟಪಡಿಸಿದ್ದು, ಭಾರತದಲ್ಲಿ ಸಾರ್ವಜನಿಕ ಜೀವನದಲ್ಲಿರುವವರು ತನ್ನ ನಿಯಮಗಳಿಗೆ ವಿರುದ್ಧವಾದ ಪೋಸ್ಟ್‌ಗಳನ್ನು ಹಾಕಿದರೆ ಅದನ್ನು ಕಿತ್ತೆಸೆಯುವ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಹೇಳಿದೆ. ಈ ವಿಚಾರವಾಗಿ ಫೇಸ್‌ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಅವರು ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು, ನಾವು ಕಳೆದ ಕೆಲವು ದಿನಗಳಿಂದ ಪಕ್ಷಪಾತದ ಆರೋಪ ಎದುರಿಸುತ್ತಿದ್ದೇವೆ. ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಫೇಸ್‌ಬುಕ್ ಯಾವಾಗಲೂ ಮುಕ್ತ, ಪಾರದರ್ಶಕ ಮತ್ತು ಪಕ್ಷಾತೀತವಾದ ವೇದಿಕೆಯಾಗಿದೆ. ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಫೇಸ್‌ಬುಕ್‌ನಲ್ಲಿ ವ್ಯಕ್ತಪಡಿಸಬಹುದು. ಆದರೆ ಯಾವುದೇ ಸ್ವರೂಪದ ದ್ವೇಷ ಮತ್ತು ಧರ್ಮಾಂಧತೆಯನ್ನು ಫೇಸ್‌ಬುಕ್ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಯಾರದೇ ಆಗಲಿ ಅವರ ರಾಜಕೀಯ ಸ್ಥಾನಮಾನ, ಪಕ್ಷದ ಸಂಬಂಧ ಅಥವಾ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಯನ್ನು ಪರಿಗಣಿಸದೆಫೇಸ್‌ಬುಕ್ ತನ್ನ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತದೆ. ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದಾಗ ಅಂಥ ಪೋಸ್ಟ್‌ಗಳನ್ನು ರಿಮೂವ್ ಮಾಡಿದ್ದೇವೆ. ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದಿದ್ದಾರೆ. ಬಿಜೆಪಿಯ ಮುಖಂಡ ಮತ್ತು ಮೂವರ ದ್ವೇಷ ಭಾಷಣದ ಬಗ್ಗೆ ಫೇಸ್‌ಬುಕ್ ಇಂಡಿಯಾ ಮೌನ ವಹಿಸಿದೆ. ತನ್ನ ವ್ಯಾಪಾರಕ್ಕೆ ಹಾನಿ ಆಗದಿರಲಿ ಎಂದು ಬಿಜೆಪಿ ನಾಐಕರ ದ್ವೇಷ ಭಾಷಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ತನ್ನ ಸಿಬ್ಬಂದಿಗೆ ಫೇಸ್‌ಬುಕ್ ಭಾರತದ ಸಾರ್ವಜನಿಕ ಅಧಿಕಾರಿ ಅಂಕಿದಾಸ್ ಸೂಚಿಸಿದ್ದರು ಎಂದು ಇತ್ತೀಚೆಗೆ ಅಮೆರಿಕಾದ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿತ್ತು.


from India & World News in Kannada | VK Polls https://ift.tt/3j3VvS6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...