ರಾಷ್ಟ್ರಪತಿ ಕೋವಿಂದ್ ಮತ್ತು ಪ್ರಧಾನಿ ಮೋದಿಯಿಂದ ಗಣೇಶ ಚತುರ್ಥಿಯ ಶುಭಾಷಯ

ಹೊಸದಿಲ್ಲಿ: ಇಂದು ದೇಶದೆಲ್ಲೆಡೆ ಗೌರಿಗಣೇಶ ಹಬ್ಬವನ್ನು ಆಚರಿಸಲಾಗ್ತಿದೆ. ಪೌರಾಣಿಕ ಹಿನ್ನೆಲೆ ಮತ್ತು ಧಾರ್ಮಿಕ ಸಂಪ್ರದಾಯ ಹೊಂದಿರುವ ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬ. ಕೊರೊನಾ ಸಂಕ್ರಾಮಿಕ ರೋಗದ ಹಿನ್ನೆಲೆ ಈ ಬಾರಿ ಗಣೇಶ ಹಬ್ಬ ದೇಶದೆಲ್ಲೆಡೆ ಕಳೆಗುಂದಿದ್ದು, ಎಲ್ಲೆಡೆ ಸರಳವಾಗಿ ಹಬ್ಬವನ್ನು ಆಚರಿಸಲಾಗ್ತಿದೆ. ಗಣೇಶ ಹಬ್ಬವನ್ನು ಆಚರಿಸುತ್ತಿರುವ ದೇಶದ ಸಮಸ್ತೆ ಜನತೆಗೆ ಮತ್ತು ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್, ದೇಶದ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಷಯಗಳು. ಈ ಹಬ್ಬ ಭಾರತೀಯರ ಸಂತಸ ಮತ್ತು ಉತ್ಸಾಹದ ಸಂಕೇತವಾಗಿದೆ. ವಿಘ್ನನಿವಾರಕ ಗಣಪತಿ ಬಪ್ಪನ ಅನುಗ್ರಹದಿಂದ ದೇಶಕ್ಕೆ ಕಾಡಿರುವ ಕೊರೊನಾ ರೋಗ ಅಂತ್ಯಗೊಂಡು ದೇಶದಲ್ಲಿ ಸಂತೋಷ ಮತ್ತು ಆರೋಗ್ಯ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ದೇಶದ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಷಯ ತಿಳಿಸಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದೇಶವಾಸಿಗಳಿಗೆ ಗಣೇಶ ಚತುರ್ಥಿ ಹಬ್ಬದ ಶುಭಾಷಯಗಳು. ಭಗವಾನ್ ಶ್ರೀ ಗಣೇಶನ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ. ಎಲ್ಲೆಡೆ ಸಮೃದ್ಧಿ ಮತ್ತು ಸಂತೋಷ ನೆಲೆಸಲಿ ಎಂದು ಹಾರೈಸಿದ್ದಾರೆ.


from India & World News in Kannada | VK Polls https://ift.tt/3l1IhqN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...