ವಾಷಿಂಗ್ಟನ್: ಕಳ್ಳದಾರಿಯಲ್ಲಿ ಪಡೆದುಕೊಂಡ ಎಚ್-1ಬಿ ವೀಸಾಗಳ ಮೂಲಕ ವಿದೇಶಿಯರನ್ನು ಅಮೆರಿಕದೊಳಕ್ಕೆ ಕರೆತರುತ್ತಿದ್ದ ಆರೋಪದ ಮೇಲೆ ಭಾರತೀಯ ಪ್ರಜೆಯನ್ನು ವಾಷಿಂಗ್ಟನ್‌ನಲ್ಲಿ ಬಂಧಿಸಲಾಗಿದೆ. 48 ವರ್ಷದ ಭಾರತೀಯ ಪ್ರಜೆ ಆಶಿಷ್ ಸಾಹ್ನಿಯನ್ನು ಬಂಧಿಸಲಾಗಿದ್ದು, ಈತ ಬೇರೆ ಬೇರೆ ವ್ಯಕ್ತಿಗಳಿಗೆ ವರ್ಕ್‌ವೀಸಾಗಳಿಗಾಗಿ ನಾಲ್ಕು ಸಂಸ್ಥೆಗಳ ಹೆಸರನ್ನು ಬಳಸುತ್ತಿದ್ದ ಎಂದು ತಿಳಿದು ಬಂದಿದೆ. ಹೀಗೆ ವಂಚನೆ ಎಸಗಿ ಈತ 2011 ರಿಂದ 2016ರ ನಡುವೆ ಸುಮಾರು 21 ಮಿಲಿಯನ್ ಡಾಲರ್ (ಅಂದಾಜು 157 ಕೋಟಿ ರೂ.) ಲಾಭ ಗಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಒಂದೊಮ್ಮೆ ಅಪರಾಧ ಸಾಬೀತಾದಲ್ಲಿ ವಾಷಿಂಗ್ಟನ್ ಡಿಸಿಯ ವರ್ಜೀನಿಯಾ ಹೊರವಲಯದಲ್ಲಿರುವ ಸ್ಟೆರ್ಲಿಂಗ್‌ನಲ್ಲಿ ವಾಸಿಸುತ್ತಿರುವ ಆಶಿಷ್ ಸಾಹ್ನಿ ಸುಮಾರು 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ. ಅಮೆರಿಕದಲ್ಲಿ ಕೆಲವು ಕಂಪನಿಗಳಲ್ಲಿ ನಿರ್ದಿಷ್ಟ ಹುದ್ದೆಗೆಂದು ಈತ ವಿದೇಶಿಯರ ಹೆಸರಿನಲ್ಲಿ ಎಚ್-1ಬಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿದ್ದ. ಆದರೆ ಅರ್ಜಿ ಸಲ್ಲಿಸುವ ವೇಳೆ ಅಂಥಹ ಯಾವುದೇ ಉದ್ಯೋಗವೂ ಅಸ್ತಿತ್ವದಲ್ಲಿ ಇರಲಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
from India & World News in Kannada | VK Polls https://ift.tt/3j3o167