ಮೈತ್ರಿ ಸರಕಾರ ಪತನಕ್ಕೆ ಕಾರಣ ಯಾರೆಂದು ಬಹಿರಂಗ ಪಡಿಸಿದ ಎಚ್‌ಡಿಡಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್‌ಗಳನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಮರ್ಥಿಸಿಕೊಂಡಿದ್ದಾರೆ. ಜೆ.ಪಿ.ಭವನದಲ್ಲಿಸುದ್ದಿಗಾರರ ಜತೆ ಮಾತನಾಡಿ,'ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಪತನ ಗೊಳ್ಳಲು ಏನಾಯಿತು ಎಂಬುದು ತಿಳಿದಿದೆ. ಬಿಜೆಪಿ ಜತೆ ಹೋದವರ ಬಗ್ಗೆಯೂ ಗೊತ್ತು. ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲಎಂದು ಸಿದ್ದರಾಮಯ್ಯ ಹೇಳಿದ್ದರು, ಅವರು ಅದೇ ರೀತಿ ಪ್ರಚಾರ ಕೂಡ ಮಾಡಿದ್ದರು. ಸಿದ್ದರಾಮಯ್ಯ ಬಾದಾಮಿಗೆ ಹೋಗಿ ಗೆಲ್ಲಬೇಕಾಯಿತು'ಎಂದು ಛೇಡಿಸಿದ್ದಾರೆ. 'ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿತ್ತು ಎಂಬ ಕಾರಣಕ್ಕಾಗಿ ಸರಕಾರ ರಚನೆಗೆ ಒಪ್ಪಿದ್ದರು, ಅವರೇ ಮನೆಗೆ ಬಂದು ಮನವಿ ಮಾಡಿದರು, ಕೊನೆಗೆ ನಮಗೇ ಶಿಕ್ಷೆ ನೀಡಿದರು. ಧರ್ಮಸ್ಥಳಕ್ಕೆ ಹೋಗಿ ಯಾರ ಯಾರ ಜತೆ ಏನೇನು ಮಾತನಾಡಿದರು ಎಂಬುದು ಗೊತ್ತು. ಅಲ್ಲಿಂದ ಬಂದ ನಂತರ ಏನು ಮಾಡಿದರು? ಮುಂದೇನಾಯಿತು ಎಂಬುದು ರಾಜ್ಯದ ಜನತೆಗೂ ತಿಳಿದಿದೆ' ಎಂದು ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣರೆಂದು ಬೊಟ್ಟು ಮಾಡಿದರು. ಪ್ರತಿಕ್ರಿಯೆ ಇಲ್ಲಉಪ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಸಿದ್ದರಾಮಯ್ಯ ಸಹವಾಸ ಸಾಕು ಎಂಬ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಇವೆಲ್ಲ ಹಳೆಯ ವಿಚಾರವಾಗಿದ್ದು ಸಾಕಷ್ಟು ಬಾರಿ ಪ್ರತಿಕ್ರಿಯಿಸಲಾಗಿದೆ. - ಸಿದ್ದರಾಮಯ್ಯ, ಮಾಜಿ ಸಿಎಂ. ಅನರ್ಹರ ವಿಚಾರದಲ್ಲಿ ಬಿಜೆಪಿ ಟೀಕೆ ಮಾಡುವ ಸಿದ್ದರಾಮಯ್ಯ ವೈಯಕ್ತಿಕವಾಗಿ ಪ್ರಶ್ನೆ ಹಾಕಿಕೊಳ್ಳಲಿ. ಅವರೇ ಒಬ್ಬ ದೊಡ್ಡ ಪಕ್ಷಾಂತರಿ. ಮೈತ್ರಿ ಸರಕಾರದಲ್ಲಿ ಇದ್ದುಕೊಂಡೇ ಸರಕಾರ ಬೀಳಿಸಿದ ಆರೋಪ ಅವರ ಮೇಲಿದೆ. - ಕೆ.ಎಸ್‌. ಈಶ್ವರಪ್ಪ, ಸಚಿವ (ಮಡಿಕೇರಿ)


from India & World News in Kannada | VK Polls https://ift.tt/2JrayG6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...