ದೀಪಾವಳಿ ಶಾಪಿಂಗ್‌: ಸ್ವದೇಶಿ ವಸ್ತುಗಳಿಗೆ ಭಾರಿ ಡಿಮಾಂಡ್‌

ಸ್ವದೇಶಿ ಉತ್ಪನ್ನಗಳಿಗೆ ಈ ಬಾರಿಯ ದೀಪಾವಳಿಯಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ. ಜನ ಚೀನಿ ನಿರ್ಮಿತ ವಸ್ತುಗಳ ಬದಲಿಗೆ ಸ್ವದೇಶಿ ಉತ್ಪನ್ನಗಳನ್ನು ಹುಡುಕಿ ಖರೀದಿಸುವ ಟ್ರೆಂಡ್‌ ಕಂಡು ಬಂದಿದೆ. ಸ್ವದೇಶಿ ದೀಪ, ಕ್ಯಾಂಡಲ್ಸ್‌, ಫ್ಯಾನ್ಸಿ ಐಟಮ್ಸ್‌ಗೆ ಜನ ಮುಗಿಬಿದ್ದಿದ್ದಾರೆ. ಸ್ವದೇಶಿ ದೀಪಗಳು ಭರ್ಜರಿಯಾಗಿ ವ್ಯಾಪಾರವಾಗಿವೆ. ಆದರೆ ಚಿನ್ನದ ಖರೀದಿಯಲ್ಲಿ ಜನ ಸ್ವಲ್ಪ ಹಿಂದಡಿ ಇಟ್ಟಿದ್ದಾರೆ. ಈ ವರ್ಷ ಚಿನ್ನದ ದರ ಗಗನಕ್ಕೇರಿರುವುದರಿಂದ ಜನತೆ ಧನ್‌ ತೇರಾಸ್‌ ವೇಳೆ ಚಿನ್ನದ ಖರೀದಿಗೆ ಆಷ್ಟಾಗಿ ಆಸಕ್ತಿ ವಹಿಸಿಲ್ಲ. ಆದರೆ ಬೆಳ್ಳಿಯ ಜ್ಯುವೆಲ್ಲರಿ ಮಾರಾಟ ವೃದ್ಧಿಸಿದೆ. ದೀಪಾವಳಿಗೆ ಚಿನ್ನದಲ್ಲಿಹೂಡಿಕೆ ಮಾಡಲು ಕೆಲವರು ಯೋಚಿಸಬಹುದು. ಚಿನ್ನ ಖರೀದಿಸುವ ಮುನ್ನ ಅದಕ್ಕೆ ಅನ್ವಯವಾಗುವ ತೆರಿಗೆಗಳ ಬಗ್ಗೆ ಮಾಹಿತಿ ಇರಲಿ. ನೀವು ಚಿನ್ನವನ್ನು ಖರೀದಿ ಅಥವಾ ಮಾರಾಟ ಮಾಡುವ ಎರಡೂ ಸಂದರ್ಭಗಳಲ್ಲಿತೆರಿಗೆ ಅನ್ವಯವಾಗುತ್ತದೆ. ಚಿನ್ನಾಭರಣ ಖರೀದಿಸುವಾಗ... ಚಿನ್ನವನ್ನು ನಗದು ಅಥವಾ ಬ್ಯಾಂಕ್‌ಗಳ ಮೂಲಕ ಅಂದರೆ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌­ಗಳು ಇಲ್ಲವೇ ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಖರೀದಿಸ­ಬಹುದು. ನೀವು ಖರೀದಿಸುವ ಚಿನ್ನದ ಆಭರಣದ ಮೌಲ್ಯಕ್ಕೆ(ಮೇಕಿಂಗ್‌ ಶುಲ್ಕ­ಗಳೂ ಸೇರಿ) ಶೇ.3ರ ಜಿಎಸ್‌ಟಿ ಅನ್ವಯವಾಗುತ್ತದೆ. ಮಾರಾಟ ಮಾಡುವಾಗ... ಚಿನ್ನಾಭರಣ ಮಾರಾಟದಿಂದ ಬರುವ ಆದಾಯದ ಮೇಲಿನ ತೆರಿಗೆಯು ನೀವು ಅದನ್ನು ಎಷ್ಟು ಅವಧಿಯಿಂದ ಹೊಂದಿದ್ದಿರಿ ಅನ್ನುವುದನ್ನು ಅವಲಂಬಿ­ಸಿ­ರುತ್ತದೆ. ಅಲ್ಪಾವಧಿಯ ಬಂಡವಾಳ ಲಾಭ ಅಥವಾ ದೀರ್ಘಾವಧಿಯ ಬಂಡವಾಳ ಲಾಭದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಲ್ಪಾವಧಿ ಬಂಡವಾಳ ಲಾಭ(ಎಸ್‌ಟಿಸಿಜಿ) ನೀವು ಚಿನ್ನಾಭರಣ ಖರೀದಿಸಿದ ದಿನಾಂಕದಿಂದ 36 ತಿಂಗಳ(ಮೂರು ವರ್ಷ) ಮೊದಲು ಮಾರಾಟ ಮಾಡಿದರೆ, ಆದಾಯವನ್ನು ಎಸ್‌ಟಿಸಿಜಿಯಾಗಿ ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ. ಮಾರಾಟ­ದಿಂದ ಬಂದ ಲಾಭಗಳನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ಆ ಪ್ರಕಾರ ತೆರಿಗೆ ಸ್ಲಾಬ್‌ ಅನುಸಾರ ತೆರಿಗೆ ವಿಧಿಸಲಾಗುತ್ತದೆ. ದೀರ್ಘಾವಧಿ ಬಂಡವಾಳ ಲಾಭ(ಎಲ್‌ಟಿಸಿಜಿ) ಇಂಥ ಪ್ರಕರಣಗಳಲ್ಲಿ, ಅಂದರೆ ನೀವು ಚಿನ್ನ ಖರೀದಿಸಿ 36 ತಿಂಗಳಿಗೂ ಹೆಚ್ಚಿನ ಅವಧಿಯಾಗಿದ್ದರೆ ಎಲ್‌ಟಿಸಿಜಿ ಅನ್ವಯ ತೆರಿಗೆ ವಿಧಿಸಲಾಗುತ್ತದೆ. ಹಣಕಾಸು ವರ್ಷ 2017-18ರಲ್ಲಿನಿಮ್ಮ ಗಳಿಕೆಗೆ ಶೇ.20.6 ತೆರಿಗೆಯನ್ನು(ಸೆಸ್‌ ಸೇರಿ) ಹಾಕಲಾಗುತ್ತಿತ್ತು. 2018-19ರಿಂದ ಶೇ.20.8ರ ತೆರಿಗೆ ಅನ್ವಯವಾಗುತ್ತದೆ.


from India & World News in Kannada | VK Polls https://ift.tt/32Wbvhe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...