ಹೊಸದಿಲ್ಲಿ: ತನ್ನ ವಾಯುಮಾರ್ಗಕ್ಕೆ ನಿರ್ಬಂಧ ಹೇರಿರುವುದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಶ್ನಿಸಲು ಭಾರತ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಅವರ ವಿಶೇಷ ವಿಮಾನವು ಪಾಕಿಸ್ತಾನದ ಮೇಲೆ ಬಳಸಲು ಭಾನುವಾರ ನಿರಾಕರಿಸಿತ್ತು. ಪಾಕ್ನ ಈ ನಡೆಯನ್ನು 'ಅಂತಾರಾಷ್ಟ್ರೀಯ ವಾಯುಯಾನ ಸಂಸ್ಥೆ ( ಐಸಿಎಒ) ಮುಂದೆ ಭಾರತ ಪ್ರಶ್ನೆ ಮಾಡಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ವಾಯುಯಾನ ಸಂಸ್ಥೆ ನೀಡಿರುವ ಮಾರ್ಗಸೂಚಿಯಂತೆ ಇತರೆ ದೇಶಗಳಕು ಯಾವುದೇ ದೇಶದ ಮೇಲೆ ವಾಯುಮಾರ್ಗವನ್ನು ಬಳಸಲು ಅನುಮತಿ ಕೇಳಬಹುದು ಮತ್ತು ಅನುಮತಿ ನೀಡಬಹುದಾಗಿದೆ. ಆದರೆ, ಪಾಕಿಸ್ತಾನ ಈ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದಂತಾಗಿದ್ದು, ಭಾರತವು ಪ್ರಶ್ನೆ ಮಾಡಲಿದೆ. ಪಾಕಿಸ್ತಾನ ತನ್ನ ವಾಯುಮಾರ್ಗದ ಮೇಲೆ ಮೋದಿ ವಿಶೇಷ ವಿಮಾನಕ್ಕೆ ಭಾನುವಾರ ನಿರ್ಬಂಧ ಹೇರಿತ್ತು. ಈ ಹಿನ್ನೆಲೆಯಲ್ಲಿ, ದಿಲ್ಲಿಯಿಂದ ಮುಂಬಯಿ ಮೂಲಕ ಅರೇಬಿಯನ್ ಸಮುದ್ರವನ್ನು ದಾಟಿ ರಿಯಾದ್ಗೆ ಪ್ರಯಾಣ ಬೆಳೆಸಬೇಕಿದೆ. ಬೋಯಿಂಗ್ 747 ವಿಮಾನದಲ್ಲಿ ಪ್ರಧಾನಿ ಮೋದಿ ಸೌದಿಗೆ ತೆರಳಲಿದ್ದಾರೆ. ರಿಯಾದ್ನಲ್ಲಿ ಪ್ರಧಾನಿ ಮೋದಿ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮನ್ ಅಲ್ ಸೌದ್ ಅವರನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ. ಸೌದಿ ಅರೇಬಿಯಾದ ಸಾವರಿನ್ ವೆಲ್ತ್ ಫಂಡ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭವಿಷ್ಯದ ಹೂಡಿಕೆಗಳ ಬಗ್ಗೆ ಪಿಎಂ ಮೋದಿ ಮಾತನಾಡಲಿದ್ದಾರೆ.
from India & World News in Kannada | VK Polls https://ift.tt/36enKrp