ಮಮತಾಗೆ ಉಗ್ರರ ಮೇಲೆ ಮಮತೆಯೇ?: ಕಾರ್ಮಿಕರ ಹತ್ಯೆಗೆ ಕೇಂದ್ರವನ್ನು ದೂಷಿಸಿದ ಪ. ಬಂ ಸಿಎಂಗೆ ಬಿಜೆಪಿ ಪ್ರಶ್ನೆ

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಭಯೋತ್ಪಾದಕರನ್ನು ಬೆಂಬಲಿಸುತ್ತಾರಾ, ಎಂದು ಬಿಜೆಪಿ ನಾಯಕ ರಾಹುಲ್ ಸಿನ್ಹಾ ಪ್ರಶ್ನಿಸಿದ್ದಾರೆ. ಜಮ್ಮು-ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಮಂಗಳವಾರ ಉಗ್ರರು ಐವರು ಕಾರ್ಮಿಕರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರವನ್ನು ಟೀಕಿಸಿರುವ ಮಮತಾರವರಿಗೆ ಸಿನ್ಹಾ ಈ ರೀತಿಯಲ್ಲಿ ಟಾಂಗ್ ನೀಡಿದ್ದಾರೆ. ಮಮತಾರಿಗೆ ಮೃತ ದೇಹಗಳ ಮೇಲೂ ರಾಜಕೀಯದಾಟವಾಡುವ ಚಟವಿದೆ. ಉಗ್ರರ ಕೃತ್ಯವನ್ನು ಖಂಡಿಸುವ ಬದಲು ಅವರು ಕೇಂದ್ರ ಸರಕಾರವನ್ನು ದೂಷಿಸುತ್ತಿದ್ದಾರೆ. ಅವರು ಯಾರನ್ನು ಬೆಂಬಲಿಸುತ್ತಾರೆ ಎಂಬುದು ಈ ಮೂಲಕ ಸ್ಪಷ್ಟವಾಗುತ್ತದೆ. ಪಾಕಿಸ್ತಾನ ಮತ್ತು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರಾ? ನಾನವರಲ್ಲಿ ಈ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ, ಎಂದು ಸಿನ್ಹಾ ಹೇಳಿದ್ದಾರೆ. ಬುಧವಾರ ಸರಣಿ ಟ್ವೀಟ್ ಮಾಡಿದ್ದ ಮಮತಾ, ಕಾಶ್ಮೀರದಲ್ಲಿ ನಿನ್ನೆ ಬಹಳ ದುರದೃಷ್ಟಕರ ಘಟನೆ ನಡೆದಿದೆ. ಐವರು ಮುಗ್ಧ ಕಾರ್ಮಿಕರನ್ನು ಪೂರ್ವ ಯೋಜಿತ ರೀತಿಯಲ್ಲಿ ಕ್ರೂರವಾಗಿ ಕೊಲ್ಲಲಾಗಿದೆ. ನಮಗೆ ಆಘಾತವಾಗಿದೆ. ಪ್ರಸ್ತುತ ಕಾಶ್ಮೀರದಲ್ಲಿ ಯಾವುದೇ ರಾಜಕೀಯ ಚಟುವಟಿಕೆ ಇಲ್ಲ ಮತ್ತು ಸಂಪೂರ್ಣ ಕಾನೂನು ಸುವ್ಯವಸ್ಥೆ ಹಿಡಿತ ಕೇಂದ್ರ ಸರಕಾರದ ಅಡಿಯಲ್ಲಿದೆ. ವಾಸ್ತವ ಏನೆಂದು ಬಹಿರಂಗವಾಗಬೇಕೆಂದರೆ ಕಠಿಣ ತನಿಖೆಯಾಗಬೇಕೆಂಬುದು ನಮ್ಮ ಡಿಮ್ಯಾಂಡ್ ಎಂದಿದ್ದರು. ಮೃತ ಕುಟುಂಬದವರನ್ನು ಭೇಟಿಯಾಗಲು ನಮ್ಮ ಪಕ್ಷದ ಸಂಸದರು ಮತ್ತು ಶಾಸಕರು ಮುರ್ಷಿದಾಬಾದ್‌ಗೆ ಪಯಣ ಬೆಳೆಸಿದ್ದಾರೆ. ಅವರ ಕುಟುಂಬಗಳಿಗೆ ನಮ್ಮ ಸರಕಾರದ ವತಿಯಿಂದ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದೇವೆ, ಎಂದಿದ್ದಾರೆ ಮಮತಾ. ಯುರೋಪ್‌ ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಉಗ್ರರು ಅಟ್ಟಹಾಸ ಮೆರೆದಿದ್ದು, ಜಮ್ಮು-ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ದಾಳಿ ನಡೆಸಿ ಐವರು ಕಾರ್ಮಿಕರನ್ನು ಗುಂಡಿಕ್ಕಿ ಕೊಂದಿದ್ದರು. ಒಬ್ಬ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲರೂ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಮೂಲದವರಾಗಿದ್ದಾರೆ.


from India & World News in Kannada | VK Polls https://ift.tt/34lI7B9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...