ಬೆಂಗಳೂರು: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2:40 ರ ವೇಳೆಗೆ ಬಂದಿಳಿದರು. ಶಿವಕುಮಾರ್ ಬಂದಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ. ಡಿಕೆಶಿಗೆ ಸ್ವಾಗತ ಕೋರಲು ಅಭಿಮಾನಿಗಳ ನೂಕುನುಗ್ಗಲಲ್ಲಿ ಮುತ್ತಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಗೆ ಬಂದೊಡನೆ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿದ್ದಾರೆ. ಅಭಿಮಾನಿಗಳು ಡಿಕೆಶಿ ಮೇಲೆ ಹೂಮಳೆಗರೆದು ಸ್ವಾಗತ ಕೋರುತ್ತಿದ್ದಾರೆ. 500 ಕೆ ಜಿ ತೂಕದ ಸೇಬಿನ ಹಾರ: ವಿಮಾನ ನಿಲ್ದಾಣದಲ್ಲಿ ಭಾರಿ ಬಿಗಿ ಭದ್ರತೆ ಏರ್ಪಡಿಸಿರುವ ಕಾರಣ ಕಾರ್ಯಕರ್ತರಿಗೆ ವಿಮಾನನಿಲ್ದಾಣದ ಬಳಿಗೆ ತೆರಳಲು ಅವಕಾಶವಿರಲಿಲ್ಲ. ಹೀಗಾಗಿ ಡಿಕೆಶಿಗೆ ಸಾದಹಳ್ಳಿ ಗೇಟ್ ಬಳಿ 500 ಕೆ ಜಿ ತೂಕದ 20 ಅಡಿ ಉದ್ದದ ಸೇಬಿನ ಹಾರ ಹಾಕಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ತೆರೆದ ವಾಹನದಲ್ಲಿ ಜೈಘೋಷ ಜೈಕಾರ, ಕಾರಿಗೂ ಸೇಬಿನ ಹಾರ ಹಾಕಲಾಗಿದೆ, ಹಾರ ತುರಾಯಿ ಸಂಭ್ರಮದೊಂದಿಗೆ ಕೆಪಿಸಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಲಿದ್ದಾರೆ ಡಿಕೆಶಿ. ಡೊಳ್ಳು ಕುಣಿತ ಮೆರವಣಿಗೆಯ ಮೆರುಗನ್ನು ಹೆಚ್ಚಿಸಲಿದೆ. ಸುಮಾರು 50 ದಿನಗಳ ಜೈಲುವಾಸದ ಬಳಿಕ ಷರತ್ತು ಬದ್ಧ ಜಾಮೀನು ಪಡೆದಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಇಂದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಶಿವಕುಮಾರ್ ಅವರು ಬೆಳಗ್ಗೆ 10 ಗಂಟೆಗೆ ದೆಹಲಿಯ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತಿರಳಿದ್ದಾರೆ. ಸ್ಪೈಸ್ ಜೆಟ್ SG8717 ವಿಮಾನ ಏರಿದ್ದರು. ಸ್ವಾಗತ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಒಕ್ಕಲಿಗ ಸಮುದಾಯದವರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದಾರೆ. ತಮ್ಮ ನಾಯಕನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿದ್ದಾರೆ. ಅವರ ಸ್ವ ಕ್ಷೇತ್ರ ಕನಕಪುರವಷ್ಟೇ ಅಲ್ಲದೆ, ರಾಮನಗರ ಚನ್ನಪಟ್ಟಣ, ಮಾಗಡಿ,ಕನಕಪುರದಿಂದಲೂ ಕಾರ್ಯಕರ್ತರು ಆಗಮಿಸಿದ್ದಾರೆ.
from India & World News in Kannada | VK Polls https://ift.tt/36cAOOj