ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಮನೆ ಕುಸಿದು ಮಗು ಮೃತಪಟ್ಟಿದೆ. ಗುರುವಾರ ಬೆಳಗ್ಗೆ ಭುಜಬಲಿ ನಂದೆಪ್ಪನವರ ಎಂಬುವರ ಮಣ್ಣಿನ ಮನೆ ಕುಸಿದ ಪರಿಣಾಮ 11ತಿಂಗಳ ಕೂಸು ಸ್ಥಳದಲ್ಲಿಯೇ ಉಸಿರು ಗಟ್ಟಿ ಸಾವನ್ನಪ್ಪಿದೆ. ಮನುವಿನ ತಾಯಿಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ತೇರದಾಳ ಖಾಸಗಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಕಳೆದುಕೊಂಡು ಹೋಗಲಾಗಿದೆ. ಮನೆಯಲ್ಲಿ ನಾಲ್ಕು ಜನ ಮಲಗಿದ್ದರು. ಇಬ್ಬರು ಅದೇ ವೇಳೆಗೆ ಎದ್ದು ಹೊರಗೆ ಹೋಗಿದ್ದಾರೆ. ಅಷ್ಟೊತ್ತಿಗೆ ಚಾವಣಿ ಕುಸಿದು ಬಿದ್ದಿದೆ. ಇದರಿಂದ ಎದ್ದು ಹೋಗಿದ್ದ ಇಬ್ಬರು ಅದೃಷ್ಟವಶಾತ್ ಬದುಕಿದ್ದಾರೆ. ಅಚಲ ಭುಜಬಲಿ ತಿಮ್ಮಣ್ಣವರ ಸಾವನ್ನಪ್ಪಿದ ಎಳೆಗೂಸು. ತಾಯಿ ಅಕ್ಷತಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
from India & World News in Kannada | VK Polls https://ift.tt/2WyXBiH