50 ದಿನಗಳ ನಂತರ ಡಿಕೆಶಿ ಬೆಂಗಳೂರಿಗೆ : ಸ್ವಾಗತಕ್ಕೆ ಕಾದಿರುವ ಅಭಿಮಾನಿಗಳ ದಂಡು

ಹೊಸದಿಲ್ಲಿ: ಸುಮಾರು 50 ದಿನಗಳ ಜೈಲುವಾಸದ ಬಳಿಕ ಷರತ್ತು ಬದ್ಧ ಜಾಮೀನು ಪಡೆದಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಇಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 2:30 ರ ವೇಳಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. ಡಿಕೆಶಿ ಅಭಿಮಾನಿಗಳು ತಮ್ಮ ನಾಯಕನ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಶಿವಕುಮಾರ್‌ ಅವರು ಬೆಳಗ್ಗೆ 10 ಗಂಟೆಗೆ ದೆಹಲಿಯ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತಿರಳಿದ್ದಾರೆ. ಸ್ಪೈಸ್ ಜೆಟ್ SG8717 ವಿಮಾನದಲ್ಲಿ ಆಗಮಿಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ತಿಹಾರ್ ಜೈಲು ಸೇರಿದ್ದ ಶಿವಕುಮಾರ್ 48 ದಿನಗಳ ಕಾಲ ಜೈಲಿನಲ್ಲಿದ್ದರು. ದೆಹಲಿ ಹೈಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಒಕ್ಕಲಿಗ ಸಮುದಾಯದವರು, ಅಭಿಮಾನಿಗಳು ಸ್ವಾಗತಿಸಲು ತಯಾರಾಗಿದ್ದು, ತಮ್ಮ ನಾಯಕನ ಬರುವಿಕೆಗೆ ಕಾತರದಿಂದ ಕಾದಿದ್ದಾರೆ. ಅವರ ಸ್ವ ಕ್ಷೇತ್ರ ಕನಕಪುರವಷ್ಟೇ ಅಲ್ಲದೆ, ರಾಮನಗರ ಚನ್ನಪಟ್ಟಣ, ಮಾಗಡಿ,ಕನಕಪುರದಿಂದಲೂ ಕಾರ್ಯಕರ್ತರು ಆಗಮಿಸಿದ್ದಾರೆ. ಆದರೆ, ಏರ್ಪೋರ್ಟ್ ಟರ್ಮಿನಲ್ ಬಳಿಗೆ ತೆರಳದಂತೆ ಕಾರ್ಯಕರ್ತರಿಗೆ ನಿರ್ಬಂಧ ಹೇರಲಾಗಿದೆ. ದೇಶೀಯ ಹಾಗೂ ವಿದೇಶಿ ಪ್ರಯಾಣಿಕರಿಗೆ ತೊಂದರೆ ಆಗುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಕಾರ್ಯಕರ್ತರಿಗೆ ನಿರ್ಬಂಧ ಹೇರಲಾಗಿದೆ. ಸಾದಹಳ್ಳಿ ಟೋಲ್ ಬಳಿ ಸ್ವಾಗತಿಸಲು ಅನುಮತಿ ನೀಡಲಾಗಿದೆ. ಜತೆಗೆ ಏರ್ಪೋರ್ಟ್ ಸುತ್ತಲೂ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.


from India & World News in Kannada | VK Polls https://ift.tt/2p5uyqV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...