ಜಮ್ಮು: ಇಡೀ ದೇಶ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವಾಗಲೇ ಪಾಪಿ ಗಡಿಯಲ್ಲಿ ತನ್ನ ಆರ್ಭಟ ಮೆರೆಯುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ್ದ ರಜೌರಿ ಜಿಲ್ಲೆಯಲ್ಲೇ ಉಲ್ಲಂಘಿಸುವ ಮೂಲಕ, ಜೊತೆ ಕಾಲು ಕೆರೆದು ಜಗಳಕ್ಕೆ ನಿಂತಿದೆ. ರಜೌರಿ ಜಿಲ್ಲೆಯಲ್ಲಿ ಜನವಸತಿ ಇರುವ ಗ್ರಾಮಗಳನ್ನೇ ಟಾರ್ಗೆಟ್ ಮಾಡಿರುವ ಪಾಕಿಸ್ತಾನ ಸೇನೆ, ಗ್ರಾಮಸ್ಥರ ಮನೆಗಳ ಮೇಲೆ ಶೆಲ್ ದಾಳಿ ನಡೆಸುವ ಮೂಲಕ, ತನ್ನ ಕ್ರೌರ್ಯ ಮೆರೆದಿದೆ. ಜಮ್ಮು-ಕಾಶ್ಮೀರದ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಪಾಕಿಸ್ತಾನ ನಿರಂತರವಾಗಿ ದಾಳಿ ನಡೆಸಿದೆ. ಬೆಳಗ್ಗೆ 6.30ರ ಸುಮಾರಿಗೆ ಸುಂದರ್ಬನಿ ವಲಯದಲ್ಲಿ ಪಾಕ್ ಸೇನೆಯಿಂದ ಶೆಲ್ ದಾಳಿ ಆರಂಭವಾಯ್ತು. ಕೂಡಲೇ ಭಾರತೀಯ ಸೇನೆ ಕೂಡಾ ತಕ್ಕ ಪ್ರತ್ಯುತ್ತರ ನೀಡಿತು. ಗಡಿಯಾಚೆಗಿನ ಗುಂಡಿನ ದಾಳಿ ವೇಳೆ ಯಾವುದೇ ರೀತಿಯ ಹಾನಿ ಸಂಭವಿಸಿದ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ಸೇನೆಯ ಅಧಿಕೃತ ಮೂಲಗಳ ಪ್ರಕಾರ 2019ರಲ್ಲಿ ಈವರೆಗೂ 2,100 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಗಡಿಯಾಚೆಯಿಂದ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿ, ಶೆಲ್ ದಾಳಿಗೆ ಈ ವರ್ಷ ಒಟ್ಟು 29 ಭಾರತೀಯ ಪ್ರಜೆಗಳು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಈ ತಿಂಗಳಲ್ಲೇ 5 ಸೈನಿಕರು ಮೃಪಟ್ಟಿದ್ದಾರೆ.
from India & World News in Kannada | VK Polls https://ift.tt/2MTP07f