ಬೈ ಎಲೆಕ್ಷನ್‌ನಲ್ಲಿ ಬಿಎಸ್‌ವೈ ಮಾತೇ ಫೈನಲ್! ಆರ್‌ಎಸ್‌ಎಸ್‌ ಹಿಡಿತ ಸಡಿಲ ಮಾಡಿದೆ ಬಿಜೆಪಿ ಹೈಕಮಾಂಡ್

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ‘ನಿರ್ಣಾಯಕ’ ಎನಿಸಿರುವ ಉಪ ಚುನಾವಣೆಗೆ ರಣತಂತ್ರ ರೂಪಿಸುವ ಜವಾಬ್ದಾರಿ ಸಿಎಂ ಹೆಗಲೇರಿದೆ. ಈ ಚುನಾವಣೆಯಲ್ಲಿ ಬಿಜೆಪಿ ಸೋಲಲಿ, ಗೆಲ್ಲಲಿ ಯಡಿಯೂರಪ್ಪ ಅವರೇ ಜವಾಬ್ದಾರಿಯಾಗಿರುತ್ತಾರೆ ಅನ್ನೋ ಮಾಹಿತಿ ಹೈಕಮಾಂಡ್ ವಲಯದಲ್ಲಿ ಕೇಳಿ ಬರ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಹಾಗೂ ಸಿಎಂ ಯಡಿಯೂರಪ್ಪ ಅವರ ಮೇಲೆ ಹಿಡಿತವನ್ನು ಕಡಿಮೆ ಮಾಡಿರುವ ಬಿಜೆಪಿ ಹೈಕಮಾಂಡ್, ಬಿಎಸ್‌ವೈಗೆ ಸ್ವಾತಂತ್ರ್ಯ ನೀಡಿದೆ. ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಅಧಿನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋದು ಗಮನಾರ್ಹ ವಿಚಾರ. ಯಡಿಯೂರಪ್ಪಗೆ ಆರ್‌ಎಸ್‌ಎಸ್‌ ಹಿಡಿತ ಕಡಿಮೆಯಾಯ್ತು ಅಂದ್ರೆ, ಬಿ. ಎಲ್. ಸಂತೋಷ್‌ ಹಿಡಿತವೂ ಕಡಿಮೆಯಾದಂತೆಯೇ! ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಆರ್‌ಎಸ್‌ಎಸ್ ಹಿನ್ನೆಲೆಯ ಸಂತೋಷ್‌ ಜೊತೆಗೆ ಯಡಿಯೂರಪ್ಪ ಅವರ ಮುಸುಕಿನ ಗುದ್ದಾಟ ಇಂದು-ನಿನ್ನೆಯದಲ್ಲ. ಹೀಗಾಗಿ, ಯಡಿಯೂರಪ್ಪಗೆ ಇದು ಶುಭ ಸುದ್ದಿಯ ಜೊತೆಯಲ್ಲೇ ದೊಡ್ಡದೊಂದು ಜವಾಬ್ದಾರಿ ಎಂದೇ ವಿಶ್ಲೇಷಿಸಲಾಗ್ತಿದೆ. ದೋಸ್ತಿ ಸರ್ಕಾರಕ್ಕೆ ಕೈಕೊಟ್ಟು ರಾಜೀನಾಮೆ ನೀಡಿದ 15 ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಇದೀಗ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕಾಗಿ ಯಡಿಯೂರಪ್ಪ ಭಾರೀ ರಣತಂತ್ರವನ್ನೇ ರೂಪಿಸಿದ್ದಾರೆ. ನವೆಂಬರ್ 3ರಿಂದ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಎಸ್‌ವೈ ಪ್ರವಾಸ ಕೈಗೊಳ್ಳಲಿದ್ಧಾರೆ. ಬೈ ಎಲೆಕ್ಷನ್‌ನಲ್ಲಿ 8 ಸೀಟು ಗೆಲ್ಲದಿದ್ದರೆ ಸರ್ಕಾರ ಉರುಳುವ ಭೀತಿ ಇರುವ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಕೊಂಚ ಆತಂಕದಲ್ಲೇ ಈ ಚುನಾವಣೆಯನ್ನು ಎದುರಿಸಬೇಕಿದೆ.


from India & World News in Kannada | VK Polls https://ift.tt/2C0aHfv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...