ಶಕ್ತಿ ದೇವಿ ಹಾಸನಾಂಬೆ ದರ್ಶನಕ್ಕೆ ಕೊನೆ ದಿನ; ಹರಿದು ಬರುತ್ತಿರುವ ಜನಸಾಗರ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಶಕ್ತಿ ದೇವಿ ಹಾಸನಾಂಬೆ ದರ್ಶನಕ್ಕೆ ಇಂದು ಕಡೆಯ ದಿನವಾಗಿದ್ದು ಅಪಾರ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿದ್ದಾರೆ. ಮಂಗಳವಾರ (ನಾಳೆ) ಬೆಳಗ್ಗೆ 6 ಗಂಟೆವರೆಗೆ ಭಕ್ತರಿಗೆ ದರ್ಶನದ ಅವಕಾಶ ನೀಡಲಾಗಿದ್ದು, ಬಳಿಕ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ ಸುಮಾರು12 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತಿದೆ. ವರ್ಷಕ್ಕೊಮ್ಮೆ ದರುಶನ ನೀಡುವ ವಿಸ್ಮಯ ದೇವತೆ ಹಾಸನಾಂಬೆ ಕರ್ನಾಟಕದಲ್ಲಷ್ಟೇ ಅಲ್ಲ, ಅನ್ಯ ರಾಜ್ಯದಲ್ಲೂ ಅಪಾರ ಭಕ್ತ ಸಾಗರವನ್ನು ಹೊಂದಿರುವ ಹಾಸನಾಂಬೆ ದೇಗುಲದ ವಿಶೇಷತೆ ಎಂದರೆ ಈಕೆಯ ದರ್ಶನ ವರ್ಷದಲ್ಲಿ ಒಂದು ಸಾರಿ. ಅಂದರೆ ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು, ತಾಯಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡುವುದು. ಅಶ್ವಯುಜ ಮಾಸದ ಕೃಷ್ಣಪಕ್ಷ ಪೂರ್ಣಿಮೆ ನಂತರ ಬರುವ ಗುರುವಾರ ಬಾಗಿಲು ತೆಗೆದರೆ, ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುತ್ತದೆ. ನಂತರ ಒಂದು ವರ್ಷ ದೇವಿಯ ದರ್ಶನ ಇರುವುದಿಲ್ಲ. ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ದೇವಿಯ ಗರ್ಭಗುಡಿಯಲ್ಲಿ ಉರಿಯುತ್ತದೆ ಎಂಬುದು ದೇವಿಯ ಮಹಿಮೆ. ಈ ಬಾರಿ 13 ದಿನ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿತ್ತು, ಅದರಲ್ಲಿ 11 ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು 11ನೇ ದಿನವಾಗಿದ್ದು ಜನರು ಸರತಿ ಸಾಲಲ್ಲಿ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ 15ರಿಂದ 20 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದರೆ, ಶುಕ್ರವಾರ ಹಾಗೂ ಶನಿವಾರ 30ರಿಂದ 40 ಸಾವಿರ ಭಕ್ತರು ದರ್ಶನ ಪಡೆದಿದ್ದರು. ಮತ್ತಿಂದು ಆ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. 11 ದಿನಗಳಲ್ಲಿ 8ನೇ ಬಾರಿಗೆ ದರ್ಶನ ಪಡೆದ ಎಚ್ ಡಿ ರೇವಣ್ಣ ಇಂದು ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿದ ಜೆಡಿಎಸ್ ನಾಯಕ, ಮಾಜಿ ಸಚಿವ ಎಚ್. ಡಿ ರೇವಣ್ಣ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಪ್ರತಿ ವರ್ಷ ಕೂಡ ರೇವಣ್ಣ ಅವರು ಅತಿ ಹೆಚ್ಚು ಬಾರಿ ತಾಯಿಯ ದರ್ಶನ ಪಡೆದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಈ ಬಾರಿ ಕೂಡ 11 ದಿನದಲ್ಲಿ ಅವರು 8 ಬಾರಿ ಹಾಸನಾಂಬೆ ದಿವ್ಯ ದರ್ಶನ ಪಡೆದಿದ್ದಾರೆ. ಒಂದುವರೆ ಕೋಟಿಗೂ ಅಧಿಕ ಆದಾಯ ಕಾಣಿಕೆ, ಪ್ರಸಾದ ಮಾರಾಟ ಸೇರಿದಂತೆ ಕಳೆದ 11 ದಿನದಲ್ಲಿ ದೇವಸ್ಥಾನಕ್ಕೆ ಒಂದುವರೆ ಕೋಟಿಗೆ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮೂಲಗಳು ತಿಳಿಸಿದೆ.


from India & World News in Kannada | VK Polls https://ift.tt/2Poh4RF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...