ಮಲಪ್ರಭಾ ನದಿ ಬಿಟ್ಟು ಗ್ರಾಮಕ್ಕೆ ನುಸುಳಿದ ಮೊಸಳೆ : ಕಟ್ಟಿ ಹಾಕಿದ ಗ್ರಾಮಸ್ಥರು

ಬಾಗಲಕೋಟೆ: ಉಕ್ಕಿ ಹರಿಯುತ್ತಿದ್ದ ನೀರು ಸ್ವಲ್ಪ ಮಟ್ಟಿಗೆ ತಗ್ಗಿದೆ. ಈ ಹಿನ್ನೆಲೆಯಲ್ಲಿ ನದಿಯಿಂದ ಹೊರಟ ದೈತ್ಯ ಮೊಸಳೆಯೊಂದು ಗ್ರಾಮದತ್ತ ನುಗ್ಗಲು ಮುಂದಾಗಿದೆ. ಮೊಸಳೆಯನ್ನು ಕಂಡ ಗ್ರಾಮದ ಜನತೆಯ ಒಮ್ಮೆ ಕಂಗಾಲಾಗಿದ್ದಾರೆ. ಜಿಲ್ಲೆಯ ಮಲಪ್ರಭಾ ನದಿ ತೀರದ ಹಿರೇಮಾಗಿ ಗ್ರಾಮದಲ್ಲಿ 6 ಅಡಿ ಉದ್ದದ ಪ್ರತ್ಯಕ್ಷವಾಗಿದೆ. ನದಿಯಲ್ಲಿ ನೀರು ತಗ್ಗಿದ ಹಿನ್ನೆಲೆ ಮೊಸಳೆ ಗ್ರಾಮದತ್ತ ತೆರಳಿದೆ. ಮೊಸಳೆಯನ್ನು ಕಂಡೊಡನೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ನಂತರ ಸ್ಥಳೀಯರೆಲ್ಲ ಸೇರಿ ಕಾರ್ಯಾಚರಣೆ ಮಾಡಿ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೂ ಹಗ್ಗದಿಂದ ಮೊಸಳೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿರುವ ಗ್ರಾಮಸ್ಥರು ಅದನ್ನು ಟ್ರ್ಯಾಕ್ಟರ್ ನಲ್ಲಿ ಊರಿಗೆ ತಂದು ಕಟ್ಟಿ ಹಾಕಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೊಸಳೆಯನ್ನು ಮುಂದೆ ಎಲ್ಲಿಗೆ ಸಾಗಿಸಬೇಕೆಂದು ನಿರ್ಧರಿಸಲಿದ್ದಾರೆ. ಗ್ರಾಮಸ್ಥರು ನದಿಯಲ್ಲಿ ಇನ್ನೊಂದು ಮೊಸಳೆ ಇರುವ ಅನುಮಾನ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/32OrXA7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...