ಬೆಂಗಳೂರು: ಶನಿವಾರವಷ್ಟೇ ಹೊಸದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್, ಹೊಸ ಹುರುಪಿನಿಂದಿಗೆ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ ಎಂದಿರುವ ಡಿಕೆಶಿ, ನನ್ನಲ್ಲಿ ಈಗಲೂ ಅದೇ ಚಾರ್ಮ್ ಇದೆ ಎಂದಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ಜೈಲಿನಿಂದ ಬಂದ ನಂತರವೂ ತಮ್ಮ ಚಾರ್ಮ್ ಏನೂ ಕಮ್ಮಿಯಾಗಿಲ್ಲ ಎಂದಿದ್ದಾರೆ. ಹಿಂದಿನಂತೆ ನಾನು ಮುಂದುವರಿಯುತ್ತೇನೆ ಎಂದು ಅಭಿಮಾನಿಗಳಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಭರವಸೆ ನೀಡಿರುವ ಡಿಕೆಶಿ, ಕಾನೂನು ಹೋರಾಟ ಮಾಡಬೇಕಿದೆ, ಅದರ ದಾಖಲೆಗಳನ್ನು ಓದಬೇಕಿದೆ, ಲೀಗಲ್ ಟೀಂ ಜೊತೆ ಚರ್ಚೆ ಮಾಡಬೇಕಿದೆ ಎಂದು ತಮ್ಮ ಮುಂದಿರುವ ಸವಾಲುಗಳನ್ನು ಬಿಚ್ಚಿಟ್ಟರು. ಕೇವಲ ಚುನಾವಣೆ ಅಥವಾ ಕಾನೂನು ಹೋರಾಟವಷ್ಟೇ ಮುಖ್ಯವಲ್ಲ ಎಂದ ಡಿಕೆಶಿ, ನನಗೆ ಎಲ್ಲವೂ ಕೂಡ ಅತಿಮುಖ್ಯ. ಪಕ್ಷ ನನಗೆ ಯಾವ ಜವಾಬ್ದಾರಿ ನೀಡುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸುತ್ತೆ ಎಂದು ವಿಶ್ವಾಸದ ಮಾತುಗಳನ್ನಾಡಿದರು. ಡಿಕೆಶಿ ಆರೋಗ್ಯದ ಕಥೆಯೇನು? ನನಗೆ ಸ್ವಲ್ಪ ಬೆನ್ನು ನೋವು ಇದೆ ಎಂದು ಹೇಳಿದ ಡಿಕೆಶಿ, ಬಿಪಿ ನಿಯಂತ್ರಣಕ್ಕೆ ಬಂದಿಲ್ಲ ಎಂದಿದ್ದಾರೆ. ವೈದ್ಯರ ಬಳಿ ಚೆಕಪ್ ಮಾಡಿಸಬೇಕು. ದೆಹಲಿಯಲ್ಲೇ ಚೆಕಪ್ ಮಾಡಿಸಬೇಕು ಅಂದುಕೊಂಡಿದ್ದೆ, ಆದ್ರೆ ಆಗಲಿಲ್ಲ ಎಂದರು. ನಮ್ಮ ತಾಯಿಯವರು ಅಕ್ಟೋಬರ್ 30ಕ್ಕೆ ಕೋರ್ಟ್‌ಗೆ ಹೋಗ್ತಾರೆ, ಅನಾರೋಗ್ಯದ ನಡುವೆಯೇ ನಾನೂ ಹೋಗ್ತಿದೀನಿ ಎಂದು ಡಿಕೆಶಿ ಹೇಳಿದ್ದಾರೆ. ತಂದೆ ಕಾರ್ಯ ನೆರವೇರಿಸಲು ಆಗಲಿಲ್ಲ ಎಂದು ಡಿಕೆಶಿ ನೋವು ನನಗೆ ಮಗನಾಗಿ ತಂದೆಯ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಡಿಕೆಶಿ, ಇದರ ಬಗ್ಗೆ ನೋವಿದೆ ಎಂದರು. ಗೌರಿ ಹಬ್ಬದ ದಿನ ಡಿಕೆಶಿ ಅವರ ತಂದೆಯ ತಿಥಿ ಕಾರ್ಯವಿತ್ತು. ಆದ್ರೆ, ಅದನ್ನು ನೆರವೇರಿಸಲು ಆಗಿರಲಿಲ್ಲ. ಆದ್ರೂ ಸೋಮವಾರ ಅಮಾವಾಸ್ಯೆ ಇದೆ, ಅಂದೇ ತಂದೆಯ ಕಾರ್ಯ ನೆರವೇರಿಸ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
from India & World News in Kannada | VK Polls https://ift.tt/2NfZ49h