ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಧಾನಿ ದೀಪಾವಳಿ! ಯೋಧರಿಗೆ ಸಿಹಿ ಹಂಚಿದ ನಮೋ

ಜಮ್ಮು: ಸೇನಾಪಡೆ ಯೋಧರೊಂದಿಗೆ ಆಚರಿಸುವ ಅವರ ಪರಿಪಾಠ ಈ ವರ್ಷವೂ ಮುಂದುವರೆದಿದೆ. ಈ ವರ್ಷ, ಭಾರತ-ಪಾಕ್ ಗಡಿಯ ರಜೌರಿ ಜಿಲ್ಲೆಗೆ ಆಗಮಿಸಿದ ಪ್ರಧಾನಿ ಮೋದಿ, ಯೋಧರೊಂದಿಗೆ ದೀಪಾವಳಿ ಸಂಭ್ರಮ ಆಚರಿಸಿದರು. 1947ರಲ್ಲಿ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಕಾಲಿಟ್ಟಿದ್ದ ಭಾರತ ಸೇನೆಯ ಮೊದಲ ತುಕಡಿ, ಪಾಕಿಸ್ತಾನ ಬೆಂಬಲಿತ ಆಕ್ರಮಣಕಾರರನ್ನು ಹೊರಗಟ್ಟಿತ್ತು. ಇದರ ನೆನಪಿಗಾಗಿ ಆಚರಿಸುವ ಇನ್‌ಫ್ಯಾಂಟ್ರಿ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸಿದ್ದರು. ಹೊಸ ದಿಲ್ಲಿಯಿಂದ ನೇರವಾಗಿ ರಜೌರಿಯ ಸೇನಾ ಬ್ರಿಗೇಡ್‌ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ, ಗಡಿ ನಿಯಂತ್ರಣ ರೇಖೆಯಲ್ಲಿ ನಿಯುಕ್ತರಾಗಿರುವ ಸೇನಾಪಡೆ ಯೋಧರೊಂದಿಗೆ ಮಾತುಕತೆ ನಡೆಸಿದರು. ದೀಪಾವಳಿ ಹಬ್ಬದ ಶುಭಾಶಯ ಕೋರಿ ಸಿಹಿ ಹಂಚಿದರು. ಪ್ರಧಾನಿಯಾದ ಬಳಿಕ ದೀಪಾವಳಿ ಹಬ್ಬದಂದು ಮೂರನೇ ಬಾರಿ ಜಮ್ಮು-ಕಾಶ್ಮೀರಕ್ಕೆ ಮೋದಿ ಆಗಮಿಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ದೀಪಾವಳಿ ವೇಳೆ ಪ್ರಧಾನಿ ಮೋದಿ ಭಾರತ-ಪಾಕ್ ಗಡಿಗೆ ಆಗಮಿಸಿದ್ದರು. ಹಬ್ಬದ ವೇಳೆಯಲ್ಲೂ ಕಾರ್ಯ ನಿರ್ವಹಿಸುವ ಯೋಧರೊಂದಿಗೆ ಮಾತುಕತೆ ನಡೆಸುವ ಪ್ರಧಾನಿ, ಅವರಿಗೆ ಸಿಹಿ ಹಂಚಿ ಯೋಧರ ಜೊತೆಗೆ ತಾವೂ ಸಂಭ್ರಮಿಸುತ್ತಾರೆ. ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ಬಳಿಕ, ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ್ದಾರೆ. ಹೀಗಾಗಿ, ಮೋದಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಮೋದಿ ಪ್ರಧಾನಿಯಾದ ಬಳಿಕ 2014ರಲ್ಲಿ ಮೊದಲ ಬಾರಿಗೆ ಲಡಾಕ್‌ ಪ್ರಾಂತ್ಯದ ಸಿಯಾಚಿನ್‌ಗೆ ಆಗಮಿಸಿದ್ದ ಪ್ರಧಾನಿ ಮೋದಿ, ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಯೋಧರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು. ಬಳಿಕ, ಶ್ರೀಗರದಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿದ್ರು. 2017ರಲ್ಲಿ ಉತ್ತರ ಕಾಶ್ಮೀರದ ಗುರೇಝ್ ವಲಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ, ಈ ಭಾಗದಲ್ಲಿ ನಿಯುಕ್ತರಾಗಿದ್ದ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. 2018ರಲ್ಲಿ ಉತ್ತರಾಖಂಡದ ಭಾರತ-ಚೀನಾ ಗಡಿಯಲ್ಲಿ ನಿಯುಕ್ತರಾಗಿದ್ದ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಜೊತೆಗೆ ಪ್ರಧಾನಿ ದೀಪಾವಳಿ ಆಚರಿಸಿದ್ದರು. ಮುಂದಿನ ವರ್ಷ ಪ್ರಧಾನಿ ಮೋದಿ ಹಿಮಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿ ನಿಯುಕ್ತರಾಗಿರುವ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಜೊತೆಗೆ ದೀಪಾವಳಿ ಆಚರಿಸಲಿದ್ದಾರೆ.


from India & World News in Kannada | VK Polls https://ift.tt/2Jn1FgA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...