ದುಬೈ: ಒಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಇಲ್ಲಿ ನಡೆಯುತ್ತಿರುವ 2020ರ ಟಿ20 ವಿಶ್ವ ಕಪ್ ಕ್ರಿಕೆಟ್ ಅರ್ಹತಾ ಟೂರ್ನಿಯಲ್ಲಿಅನುಕ್ರಮವಾಗಿ ಹಾಂಕಾಂಗ್ ಮತ್ತು ಯುಎಇ ತಂಡಗಳನ್ನು ಮಣಿಸಿ ಟೂರ್ನಿಗೆ ಅರ್ಹತೆ ಗಳಿಸುವುದರೊಂದಿಗೆ ವಿಶ್ವ ಕಪ್ನಲ್ಲಿ ಪಾಲ್ಗೊಳ್ಳಲಿರುವ ಎಲ್ಲ ಹದಿನಾರೂ ತಂಡಗಳ ಪಟ್ಟಿ ಸಿದ್ಧವಾಗಿದೆ. ಗುರುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಒಮನ್ ತಂಡ 12 ರನ್ಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿದರೆ, ಸ್ಕಾಟ್ಲೆಂಡ್ ತಂಡ 90 ರನ್ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಮಣಿಸಿ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿವೆ. ನಮೀಬಿಯಾ, ನೆದರ್ಲೆಂಡ್ಸ್, ಪಪುವಾ ನ್ಯೂ ಗಿನಿ ಮತ್ತು ಐರ್ಲೆಂಡ್ ತಂಡಗಳು ಇದಕ್ಕೂ ಮೊದಲೇ ಅರ್ಹತೆ ಗಳಿಸಿದ್ದವು. ಆದರೆ ಯುಎಇನಲ್ಲಿನಡೆಯುತ್ತಿರುವ ಅರ್ಹತಾ ಟೂರ್ನಿಯಲ್ಲಿಅಂತಿಮವಾಗಿ ಯಾರು ಟ್ರೋಫಿಯ ಒಡೆಯರಾಗುತ್ತಾರೆ ಎಂಬ ಕುತೂಹಲ ತಾರಕಕ್ಕೇರಿದೆ. ಟಿ20 ವಿಶ್ವ ಕಪ್ ಮುಂದಿನ ವರ್ಷ ಅಕ್ಟೋಬರ್ 18ರಿಂದ ನವೆಂಬರ್ 15ರ ತನಕ ಆಸ್ಪ್ರೇಲಿಯಾದಲ್ಲಿ ನಡೆಯಲಿದೆ. 16 ತಂಡಗಳ ಪಟ್ಟಿ ಇಂತಿದೆ: ಆಸ್ಪ್ರೇಲಿಯಾ, ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ದ.ಆಫ್ರಿಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ, ಐರ್ಲೆಂಡ್, ನಮೀಬಿಯಾ, ನೆದರ್ಲೆಂಡ್ಸ್, ಒಮನ್, ಪಪುವಾ ನ್ಯೂ ಗಿನಿಯಾ, ಸ್ಕಾಟ್ಲೆಂಡ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32aIai4