ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಭಾರತೀಯ ಸಂಸ್ಕೃತಿ, ಆಚರಣೆ ಮತ್ತು ಹಬ್ಬ ಹರಿದಿನಗಳಿಗೆ ಹತ್ತಿರವಾಗಿರುವ ವಿವಿಧ ದೇಶದ ಸ್ಟಾರ್ ಕ್ರಿಕೆಟಿಗರು ಇದೀಗ ಹಬ್ಬದ ದಿನದಂದು ತಮ್ಮ ಭಾರತೀಯ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿ ಮನ ಗೆದ್ದಿದ್ದಾರೆ. ಕ್ರಿಕೆಟ್ ತಂಡದ ಸ್ಟಾರ್‌ಗಳಾದ ಮತ್ತು , ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಬೆಳಕಿನ ಹಬ್ಬದ ದಿನದಂದು ಭಾರತೀಯರಿಗೆ ಶುಭಾಶಯ ಸಿಡಿಸಿದ ವಿದೇಶಿ ಕ್ರಿಕೆಟಿಗರಲ್ಲಿ ಪ್ರಮುಖರಾಗಿದ್ದಾರೆ. "ಭಾರತೀಯ ಸ್ನೇಹಿತರಿಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು," ಎಂದು ಸ್ಟೀವ್ ಸ್ಮಿತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಸಂದೇಶ ರವಾನಿಸಿದ್ದಾರೆ. ಇತ್ತೀಚೆಗಷ್ಟೇ ಆಷಸ್ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದ ಸ್ಮಿತ್, ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿದ್ದಾರೆ. ಈ ಮಧ್ಯೆ ತಮ್ಮ 33ನೇ ಹುಟ್ಟು ಹಬ್ಬವನ್ನು ಚೊಚ್ಚಲ ಅಂತಾರಾಷ್ಟ್ರೀಯ ಶತಕದ ಮೂಲಕ ಆಚರಿಸಿದ ಡೇವಿಡ್ ವಾರ್ನರ್, ದೀಪಾವಳಿಯ ಸಂತಸದಲ್ಲಿ ಪಾಲ್ಗೊಳ್ಳುವುದನ್ನು ಮರೆತಿಲ್ಲ. ವಾರ್ನರ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ಹ್ಯಾಪಿ ದಿವಾಲಿ" ಎಂದು ಶುಭಾಶಯ ತಿಳಿಸಿದ್ದಾರೆ. 2019ರ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಅಬ್ಬರಿಸಿದ್ದ ವಾರ್ನರ್, 692 ರನ್‌ಗಳನ್ಉ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು. ಈ ಮಧ್ಯೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಕೂಡ ಫೋಟೊ ಒಂದನ್ನು ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ. ಭಾರತೀಯರಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೂಡ ದೀಪಾವಳಿಯ ಸಂತಸದಲ್ಲಿ ಭಾಗಿಯಾಗಿದ್ದಾರೆ. "ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು" ಎಂದು ಗೇಲ್ ಟ್ವೀಟ್ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದೀರ್ಘ ಕಾಲ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದ ಗೇಲ್, ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಮಾಜಿ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಟ್ವಿಟರ್ ಮೂಲಕ "ನನ್ನೆಲ್ಲಾ ಸೋದರ ಮತ್ತು ಸೋದರಿಯರಿಗೆ ದೀಪಾವಳಿಕ ಶುಭಾಶಯಗಳು" ಎಂದುದ್ದಾರೆ. ದೇಶಿ ಮತ್ತು ವಿದೇಶಿ ಕ್ರಿಕೆಟಿಗರು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿರುವುದು ಇಲ್ಲಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MPGc1V