ಟಿಪ್ಪು ಜಯಂತಿ ಮಾಡಿದ್ದೇ ತಪ್ಪು, ನಾನೂ ವಿರೋಧಿಸಿದ್ದೆ: ಸಿ ಎಂ ಇಬ್ರಾಹಿಂ

ಬೆಂಗಳೂರು: ಮಾಡಿದ್ದೇ ತಪ್ಪು, ನಾನದನ್ನು ವಿರೋಧಿಸಿದ್ದೆ ಎಂದು ಕೈ ಹಿರಿಯ ನಾಯಕ, ಮಾಜಿ ಸಚಿವ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನ್ನಾಡುತ್ತಿದ್ದ ಅವರು, ಮುಸ್ಲಿಂ ಸಮುದಾಯದಲ್ಲಿ ಜಯಂತಿ ಪರಿಕಲ್ಪನೆ ಇಲ್ಲ. ನಮ್ಮಲ್ಲಿ ಮೂರ್ತಿ ಇಲ್ಲ, ಟಿಪ್ಪು ಜಯಂತಿ ಮಾಡಿದ್ದೇ ತಪ್ಪು, ಅಂದೇ ನಾನು ವಿರೋಧಿಸಿದ್ದೆ. ಬಜಾರಿನಲ್ಲಿ ಬಾಜಾ ಬಜಂತ್ರಿ ಬಾರಿಸಿದರೆ ಜಯಂತಿ ಅಲ್ಲ, ಭಾವಚಿತ್ರಕ್ಕೆ ಹಾರೋ ಹಾಕುವ, ಮೆರವಣಿಗೆ ಪದ್ಧತಿ ಮುಸ್ಲಿಂ ಸಮುದಾಯದಲ್ಲಿಲ್ಲ. ಜಯಂತಿ ಮಾಡೋ ರೀತಿಯಲ್ಲಿ ಆಚರಿಸಿ. ಜಯಂತಿ ಆಚರಣೆ ಜವಾಬ್ದಾರಿಯನ್ನು ಸಮುದಾಯಕ್ಕೆ ಕೊಡಿ, ಎಂದು ಟಿಪ್ಪು ಜಯಂತಿ ಕುರಿತ ಪ್ರಶ್ನೆಗೆ ಉತ್ತರಿಸಿದರು. ಚುನಾವಣೆ ನಂತರ ರಾಜ್ಯದಲ್ಲಿ ಮಹಾ ಚುನಾವಣೆ ನಡೆಯಲಿದೆ. ಅಂಥ ರಾಜಕೀಯ ಬೆಳವಣಿಗೆ ನಡೆದಿವೆ. ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲ್ಲ. ತಂದೆ ತಾಯಿ ಒಪ್ಪಿಗೆ ಇಲ್ಲದೆ ಮದುವೆಯಾದವರ ಸ್ಥಿತಿ ಅನರ್ಹ ಶಾಸಕರದ್ದು ಎಂದರು. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾಗಿದ್ದಾರೆ. ಪರಿಹಾರ್ಯ ಕೈಗೊಳ್ಳಲು ರಾಜ್ಯ ಸರಕಾರ ನಿಸ್ಸಾಯಕವಾಗಿದೆ. ಪ್ರಧಾನಿ ಬಂದು ಪರಿಸ್ಥಿತಿ ಅರಿಯಬಹುದಿತ್ತು. ಕೊನೆಗೆ ಮನ್ ಕೀ ಬಾತ್‌ನಲ್ಲಾದರೂ ಮಾತಾಡಬಹುದಿತ್ತು, ಎಂದು ಕಿಡಿಕಾರಿದರು. ರಿಸರ್ವ್ ಬ್ಯಾಂಕ್ ಬಿಜೆಪಿ ಶಾಖಾ ಕಚೇರಿಯಂತಾಗಿದೆ ಎಂದ ಅವರು, 2 ಸಾವಿರದ ನೋಟು ರದ್ದು ಮಾಡುತ್ತೀರ, ಇಟ್ಟುಕೊಳ್ಳುತ್ತೀರಾ ಈಗಲೇ ಸ್ಪಷ್ಟಪಡಿಸಿ, ಎಂದು ಒತ್ತಾಯಿಸಿದರು. 40 ವರ್ಷದ ಇತಿಹಾಸದಲ್ಲಿ ಇಂಥ ನಿರೋದ್ಯೋಗ ಪರಿಸ್ಥಿತಿ ಉಂಟಾಗಿಲ್ಲ. ಕೃಷಿ ಕ್ಷೇತ್ರ ಕಡೆಗಣಿಸಲ್ಪಟ್ಟಿದೆ. ನಮಗೆ ಚೀನಾ, ಪಾಕಿಸ್ತಾನ ಸಮಸ್ಯೆಯಲ್ಲ. ನಮ್ಮ ಸೇನೆ ಜಗತ್ತಿನಲ್ಲೇ ಬಲಿಷ್ಠವಾಗಿದೆ. ಆದ್ದರಿಂದ ಹಣಕಾಸು ಸಚಿವರು ದೇಶದ ಅರ್ಥಿಕ ಸ್ಥಿತಿ ಸುಧಾರಣೆಗೆ ಗಮನ ಹರಿಸಬೇಕು. ದೀಪಾವಳಿ ದೀಪಕ್ಕೆ ಎಣ್ಣೆ ಇಲ್ಲದ ಸ್ಥಿತಿ, ಅಂಗಡಿಕಾರರು ಹಣ ಇಟ್ಟು ಲಕ್ಷ್ಮಿಪೂಜೆ ಮಾಡದೆ ಕ್ರೆಡಿಟ್ ಕಾರ್ಡ್ ಇಟ್ಟು ಪೂಜೆ ಮಾಡುತ್ತಿದ್ದಾರೆ, ಎಂದವರು ಹೇಳಿದ್ದಾರೆ. ಡಿಕೆಶಿ ಬಂಧಿಸಿ ಬಿಜೆಪಿಯವರಿಗೆ ಏನು ಸಿಕ್ತು? ಬಿಜೆಪಿ ಉಳಿಸಿ, ಕಾಂಗ್ರೆಸ್ ಉಳಿಸಿ ಎನ್ನುವ ಬದಲು ದೇಶ ಉಳಿಸುವ ಕಾರ್ಯ ಮಾಡೋಣ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇರಲಿ, ವಾಜಪೇಯಿ ಇದ್ದಾಗ ಇಂಥ ಸ್ಥಿತಿ ಇರಲಿಲ್ಲ ಎಂದಿದ್ದಾರೆ ಇಬ್ರಾಹಿಂ.


from India & World News in Kannada | VK Polls https://ift.tt/36cGvLS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...