ಕೊಲಂಬೊ: ಭಾರತೀಯ ಕಿರಿಯರ ಮಹಿಳಾ ತಂಡವು ಮಹಿಳಾ ಎಮರ್ಜಿಂಗ್ 2019 ಕಿರೀಟವನ್ನು ಎತ್ತಿ ಹಿಡಿದಿದೆ. ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಡಕ್ವರ್ತ್ ಲೂವಿಸ್ ನಿಮಯದಡಿಯಲ್ಲಿ 14 ರನ್ಗಳ ಅಂತರದ ಗೆಲುವು ದಾಖಲಿಸಿದೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 50 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಭಾರತದ ನಿಖರ ದಾಳಿಗೆ ತತ್ತರಿಸಿದ 34.3 ಓವರ್ಗಳಲ್ಲಿ 135 ರನ್ಗಳಿಗೆ ಸರ್ವಪತನವನ್ನು ಕಂಡಿತು. ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ದೇವಿಕ ವೈದ್ಯ ಹಾಗೂ ತನುಜ ಕನ್ವಾರ್ ತಲಾ ನಾಲ್ಕು ವಿಕೆಟುಗಳನ್ನು ಕಬಳಿಸಿ ಮಿಂಚಿದರು. ಲಂಕಾ ಪರ ಬ್ಯಾಟಿಂಗ್ನಲ್ಲಿ ಹರ್ಷಿತ ಸಮರವಿಕ್ರಮ 64 ಎಸೆತಗಳಲ್ಲಿ 39 ರನ್ ಗಳಿಸಿ ದರೆ ಕವೀಶ ದಿಲ್ಹಾರಿ 27 ರನ್ ತೆತ್ತು ಮೂರು ವಿಕೆಟ್ ಪಡೆದರೂ ತಂಡವನ್ನು ಗೆಲುವಿನ ಗೆರೆ ದಾಟಿಸಲಾಗಲಿಲ್ಲ. ಭಾರತೀಯ ತಂಡವು ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರೂ ದೇವಿಕ ಹಾಗೂ ತನುಜ ಮಾರಕ ದಾಳಿ ನೆರವಿನಿಂದ ಕಿರೀಟ ಎತ್ತಿ ಹಿಡಿಯುವಲ್ಲಿ ಸಾಧ್ಯವಾಗಿದೆ. ಈ ಮೂಲಕ ಉಜ್ವಲ ಭವಿಷ್ಯವನ್ನು ಸಾರಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3207OWB