ಹಸಿರು ಮಾರ್ಗಕ್ಕೆ ಬಂತು 6 ಬೋಗಿಯ ಮತ್ತೆರಡು ಮೆಟ್ರೊ

ಬೆಂಗಳೂರು: ಮೆಟ್ರೊದ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಹೊಸ ಆರು ಬೋಗಿಯ ಎರಡು ರೈಲುಗಳ ಸಂಚಾರದಿಂದ ದಟ್ಟಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದುವರೆಗೆ ಒಟ್ಟು 25 ರೈಲುಗಳನ್ನು ಆರು ಬೋಗಿ ರೈಲುಗಳಾಗಿ ಪರಿವರ್ತಿಸಿ ಕಾರ್ಯಾಚರಿಸಲಾಗಿತ್ತು. ಹೊಸ ರೈಲುಗಳ ಸೇರ್ಪಡೆಯಿಂದ ಒಟ್ಟು 27 ರೈಲುಗಳು ಆರು ಬೋಗಿಯ ರೈಲುಗಳಾಗಿವೆ. ಈ ಪೈಕಿ ನಾಲ್ಕು ರೈಲುಗಳು ಹಸಿರು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಹೊಸ ರೈಲುಗಳಿಂದ ಹಸಿರು ಮಾರ್ಗದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಆರು ಬೋಗಿಯ ರೈಲಿನಲ್ಲಿ ಮೊದಲ ಬೋಗಿ ಮಹಿಳೆ ಯರಿಗೆ ಮೀಸಲಾಗಿದೆ. ಹೀಗಾಗಿ, ಈ ಮಾರ್ಗದಲ್ಲಿ ಮಹಿಳಾ ಮೀಸಲು ಬೋಗಿಗಳ ಸಂಖ್ಯೆ ಹೆಚ್ಚಾಗಿವೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವವರು ಈ ಮಾರ್ಗದ ಮೆಟ್ರೊ ಸೇವೆಯನ್ನು ಪಡೆಯುತ್ತಿದ್ದಾರೆ. ಇವರಲ್ಲಿ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಳಿದ ಎಲ್ಲ ರೈಲುಗಳು 2020ರ ಮಾರ್ಚ್‌ನೊಳಗೆ ಆರು ಬೋಗಿಯ ರೈಲುಗಳಾಗಿ ಪರಿವರ್ತನೆಯಾಗಲಿವೆ. ಹಸಿರು ಮಾರ್ಗದಲ್ಲಿ ಇಲ್ಲಿಯವರೆಗೆ ಆರು ಬೋಗಿಯ ಎರಡು ರೈಲುಗಳು ಮಾತ್ರ ಕಾರ್ಯಾಚರಿಸುತ್ತಿದ್ದವು, ಮತ್ತೀಗ ಆ ಸಂಖ್ಯೆ 4ಕ್ಕೇರಿದೆ. ಮೈಸೂರು ರಸ್ತೆ-ಬೈಯ್ಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಎಲ್ಲ ಮೂರು ಬೋಗಿಯ ರೈಲುಗಳನ್ನು ಆರು ಬೋಗಿಯ ರೈಲುಗಳಾಗಿ ಪರಿವರ್ತಿಸಲಾಗಿದೆ. ಬಿಎಂಆರ್‌ಸಿಎಲ್‌ನಲ್ಲಿ ಲಭ್ಯವಿರುವ 50 ರೈಲುಗಳ ಪೈಕಿ 25 ರೈಲುಗಳನ್ನು ಆರು ಬೋಗಿಯಾಗಿ ಪರಿವರ್ತಿಸಲಾಗಿದೆ. ಈ ಪೈಕಿ 23 ರೈಲುಗಳು ನೇರಳೆ ಮಾರ್ಗದಲ್ಲಿದ್ದರೆ, ಎರಡು ರೈಲುಗಳನ್ನು ಮಾತ್ರ ಹಸಿರು ಮಾರ್ಗಕ್ಕೆ ನೀಡಲಾಗಿತ್ತು ಹೊಸದಾಗಿ ಎರಡು ರೈಲುಗಳನ್ನು ಪರಿವರ್ತಿಸಲಿರುವುದರಿಂದ ಒಟ್ಟು 27 ರೈಲುಗಳು ಆರು ಬೋಗಿಯ ರೈಲುಗಳಾದಂತಾಗಿದೆ.


from India & World News in Kannada | VK Polls https://ift.tt/2oz85SM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...