ಚಂಡೀಗಢ: ಬಿಜೆಪಿ ಹಿರಿಯ ನಾಯಕ ಹರಿಯಾಣ ಮುಖ್ಯಮಂತ್ರಿಯಾಗಿ ಭಾನುವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನರಕ ಚತುರ್ದಶಿಯ ಶುಭದಿನದಂದು ಮಧ್ಯಾಹ್ನ 2.15ಕ್ಕೆ ಬಿಜೆಪಿ- ಜೆಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದ ಸೂತ್ರಧಾರರಾಗಿ ಖಟ್ಟರ್ ಅಧಿಕಾರ ಸ್ವೀಕರಿಸಿದರೆ, ಜೆಜೆಪಿ ನಾಯಕ ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಿದರು. ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ ಪಿ ನಡ್ಡಾ, ಪಂಜಾಬ್ ರಾಜ್ಯಪಾಲ ವಿ ಪಿ ಸಿಂಗ್ ಬದ್ನೋರೆ, ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಕೇಂದ್ರ ಸಚಿವರಾದ ಕೃಷ್ಣನ್ ಪಾಲ್ ಗುರ್ಜರ್, ಆರ್ ಎಲ್ ಕಟಾರಿಯಾ, ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಹರಿಯಾಣಾದ ಮಾಜಿ ಮುಖ್ಯಮಂತ್ರಿ ಭೂಪೇಂದರ್ ಸಿಂಗ್ ಹೂಡಾ, ಎಸ್ಎಡಿ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಈ ಸಮಾರಂಭಕ್ಕೆ ಸಾಕ್ಷಿಯಾದರು. ಎರಡು ವಾರಗಳ ಪೆರೋಲ್ ಪಡೆದು ತಿಹಾರ್ ಜೈಲಿನಿಂದ ಹೊರ ಬಂದಿರುವ ದುಷ್ಯಂತ ಚೌಟಾಲಾ ತಂದೆ ಅಜಯ್ ಚೌಟಾಲಾ, ಅವರ ಪತ್ನಿ, ದುಷ್ಯಂತ್ ತಾಯಿ, ಎರಡನೇ ಅವಧಿಗೆ ಆಯ್ಕೆಯಾಗಿರುವ ಶಾಸಕಿ ನೈನಾ ಚೌಟಾಲಾ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ಕೇವಲ ಆರು ಮತಗಳಿಂದ ಬಹುಮತದಿಂದ ವಂಚಿತವಾಗಿದ್ದ ಬಿಜೆಪಿ ಜೆಜೆಪಿ ಜತೆ ಸೇರಿ ಸರಕಾರ ರಚಿಸಿದೆ. ತಮ್ಮ ಪಕ್ಷದ 40 ಶಾಸಕರು, 10 ಮಂದಿ ಜೆಜೆಪಿ ಶಾಸಕರು ಹಾಗೂ 7 ಪಕ್ಷೇತರ ಶಾಸಕರ ನೆರವಿಂದ ಖಟ್ಟರ್ ಸರಕಾರ ರಚಿಸಿದ್ದಾರೆ.
from India & World News in Kannada | VK Polls https://ift.tt/36a4KdF