ಟೋಕಿಯೊ ಒಲಿಂಪಿಕ್ಸ್‌ಗೂ ಅರ್ಹತೆ ಪಡೆಯದ ಪಾಕಿಸ್ತಾನ

ಆಮ್ಸ್‌ಸ್ಟರ್ಡ್ಯಾಮ್‌: ಮುಂದಿನ ವರ್ಷ ಜಪಾನ್‌ ಆತಿಥ್ಯದಲ್ಲಿ ನಡೆಯಲಿರು ಕ್ರೀಡಾಕೂಟಕ್ಕೆ ಪುರುಷರ ಹಾಕಿಯಲ್ಲಿ ಮೂರು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ತಂಡ ಅರ್ಹತೆ ಗಿಟ್ಟಿಸಲು ವಿಫಲಗೊಂಡಿದೆ. ಭಾನುವಾರ ನಡೆದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಾಕಿಸ್ತಾನ 1-6 ಅಂತರದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಸೋಲುಂಡು ಒಲಿಂಪಿಕ್ಸ್‌ ಅರ್ಹತೆಯ ರೇಸ್‌ನಿಂದ ಹೊರಬಿದ್ದಿದೆ. ಶನಿವಾರ ನಡೆದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ 4-4ರ ಸಮಬಾಲ ಸಾಧಿಸಿದ್ದ ನೆದರ್ಲೆಂಡ್ಸ್‌ ತಂಡ, ಭಾನುವಾರ ಅದ್ಭುತವಾಗಿ ತಿರುಗೇಟು ನೀಡಿ 6-1ಗೆ ಜಯದೊಂದಿಗೆ ಒಟ್ಟು 10-5 ಸರಾಸರಿ ಗೋಲ್‌ಗಳ ಆಧಾರದ ಮೇರೆಗೆ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಪಂದ್ಯದಲಲ್ಇ ನೋಡ ನೋಡುತ್ತಿದ್ದಂತೆಯೇ ಡಚ್‌ ಪಡೆ 4-0 ಅಂತರದ ಭರ್ಜರಿ ಮುನ್ನಡೆ ತನ್ನದಾಗಿಸಿಕೊಂಡಿತು. ಪ್ರಥಮಾರ್ಧದ ಅಂತ್ಯಕ್ಕೆ ಮಿಂಕ್‌ ವ್ಯಾನ್‌ ಡೆರ್‌ ವೀರ್ಡನ್‌ ಎರಡು ಗೋಲ್‌ ಮತ್ತು ಯೊರ್ನ್‌ ಕೆಲರ್ಮನ್‌ ಮತ್ತು ಮಿರ್ಕೊ ಪ್ರುಯೆಸರ್‌ ತಲಾ ಒಂದು ಗೋಲ್‌ಗಳ ಮೂಲಕ ತಂಡಕ್ಕೆ ಭರ್ಜರಿ ಮೇಲುಗೈ ಒದಗಿಸಿದರು. ಮೂರಣೆ ಕ್ವಾರ್ಟರ್‌ನಲ್ಲಿ ಟೆರಾನ್ಸ್‌ ಪೀಟರ್ಸ್‌ ಮತ್ತು ಜಿಪ್‌ ಜೆನ್ಸನ್‌ ದಾಖಲಿಸಿದ ಗೋಲ್‌ಗಳ ಮೂಲಕ ನೆದರ್ಲೆಂಡ್ಸ್‌ ಒಟ್ಟು 6-0 ಗೋಲ್‌ಗಳ ಮುನ್ನಡೆ ಪಡೆದು ಪಂದ್ಯವನ್ನು ಬಹುತೇಕ ತನ್ನದಾಗಿಸಿಕೊಂಡಿತು. ಈ ಹಂತದಲ್ಲಿ ಪಾಕಿಸ್ತಾನದ ರಿಜ್ವಾನ್‌ ಅಲಿ 53ನೇ ನಿಮಿಷದಲ್ಲಿ ಏಕೈಕ ಗೋಲ್‌ ದಾಖಲಿಸಿದರೂ ಅದು ಫಲಿತಾಂಶದ ಮೇಲೆ ಕಿಂಚಿತ್ತೂ ಪ್ರಭಾವ ಬೀರದೇ ಹೋಯಿತು. "ಇದೊಂದು ಕೆಟ್ಟ ದಿನ. ಏಕೆಂದರೆ ಒಲಿಂಪಿಕ್ಸ್‌ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದೇವೆ. ಎರಡನೇ ಬಾರಿ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದೇವೆ. ಡಚ್‌ ತಂಡದ ರಕ್ಷಣೆ ಅದ್ಭುತವಾಗಿತ್ತು. ಜೊತೆಗೆ ನಮ್ಮ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಬಹಲಷ್ಟು ತಪ್ಪುಗಳನ್ನು ಮಾಡಿದೆವು. ಪ್ರಥಮಾರ್ಧದಲ್ಲಿ ನಮ್ಮ ತಪ್ಪುಗಳ ಸಂಪೂರ್ಣ ಲಾಭ ಪಡೆಯುವಲ್ಲಿ ಎದುರಾಳಿ ತಂಡ ಯಶಸ್ವಿಯಾಯಿತು. ಅವರ ಆಟಕ್ಕೆ ಸರಿದೂಗುವ ಆಟವನ್ನು ತರುವಲ್ಲಿ ವಿಫಲರಾದೆವು," ಪಾಕಿಸ್ತಾನ ತಂಡದ ಆಟಗಾರ ರಶೀದ್‌ ಮಹ್ಮೂದ್‌ ಹೇಳಿದ್ದಾರೆ. ಪಾಕಿಸ್ತಾನ ತಂಡ 1960, 1968 ಮತ್ತು 1984ರಲ್ಲಿ ಒಲಿಂಪಿಕ್ಸ್‌ ಚಿನ್ನ ಗೆದ್ದ ಸಾಧನೆ ಮಾಡಿದೆ. ಆದರೆ ಅಂದಿನಿಂದ ಇಂದಿನವರೆಗೆ ಪಾಕಿಸ್ತಾನ ತಂಡದ ಪ್ರದರ್ಶನ ಮಟ್ಟ ಗಣನೀಯವಾಗಿ ಕುಸಿತ ಕಂಡಿದೆ. ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನ ಕೊನೆಯ ಬಾರಿ ಪದಕ ಗೆದ್ದಿರುವುದು 1992ರಲ್ಲಿ. ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪಾಕ್‌ ಕಂಚಿನ ಸಾಧನೆ ಮಾಡಿತ್ತು. 2016ರ ರಿಯೊ ಒಲಿಂಪಿಕ್ಸ್‌ಗೂ ಪಾಕ್‌ ಅರ್ಹತೆ ಪಡೆಯಲು ವಿಫಲಗೊಂಡಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2BSdNlq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...