ರೌಡಿ ಮನೋಜ್‌ ಕೊಲೆ ಪ್ರಕರಣ: ಮಂಗಳಮುಖಿ ಸೇರಿ ಇಬ್ಬರ ಬಂಧನ

ಬೆಂಗಳೂರು: ಹೆಗ್ಗನಹಳ್ಳಿ ಕ್ರಾಸ್‌ ಕಾಲೇಜು ಬಳಿ ಅ.24ರಂದು ನಡೆದಿದ್ದ ರೌಡಿ ಮನೋಜ್‌ ಕೊಲೆ ಪ್ರಕರಣ ಸಂಬಂಧ ಸೇರಿ ಇಬ್ಬರು ಆರೋಪಿ ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟೆಯ ರೋಝಿ ಮತ್ತು ಈಕೆಯ ಪ್ರಿಯಕರ ಶಿವಕುಮಾರ್‌ ಬಂಧಿತರು. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಂಕದಕಟ್ಟೆಯಲ್ಲಿ ವಾಸವಿದ್ದ ಮನೋಜ್‌ ಮತ್ತು ರೋಝಿ ಜೊತೆಯಾಗಿ ಸುತ್ತಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮನೋಜ್‌, ತನ್ನ ಊರಿಗೆ ಹೋಗಿದ್ದ. ಈ ಅವಧಿಯಲ್ಲಿ ರೋಝಿ, ಮತ್ತೊಬ್ಬ ಗೆಳೆಯ ಶಿವಕುಮಾರ್‌ ಜತೆ ಓಡಾಡುತ್ತಿದ್ದಳು. ಅಲ್ಲದೇ ಆತನ ಹೆಸರನ್ನು ಕೈ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಳು. ಇತ್ತೀಚೆಗೆ ಊರಿನಿಂದ ಮನೋಜ್‌ ವಾಪಸ್‌ ಬಂದಾಗ ರೋಝಿ ಭೇಟಿಯಾಗಿರಲಿಲ್ಲ. ಆಕೆ ಮತ್ತೊಬ್ಬ ಹುಡುಗನ ಜತೆ ಓಡಾಡುತ್ತಿರುವ ವಿಷಯ ತಿಳಿದ ಮನೋಜ್‌, ಕುಪಿತಗೊಂಡು ಶಿವಕುಮಾರ್‌ ಜೊತೆ ಸುತ್ತಾಡದಂತೆ ಜೋರು ಮಾಡಿದ್ದ. ಅಲ್ಲದೇ, ಕೈ ಮೇಲಿನ ಟ್ಯಾಟು ಅಳಿಸುವಂತೆ ಸೂಚಿಸಿದ್ದ. ಇದರಿಂದ ಆಕ್ರೋಶಗೊಂಡ ರೋಝಿ, ತನ್ನ ಸ್ನೇಹಿತರ ಜತೆಗೆ ಸೇರಿ ಮನೋಜ್‌ ಕೊಲೆಗೆ ಸಂಚು ರೂಪಿಸಿದ್ದಳು. ಅ.24ರ ರಾತ್ರಿ ಮಾತನಾಡಬೇಕೆಂದು ಕರೆಸಿ ಮನೋಜ್‌ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.


from India & World News in Kannada | VK Polls https://ift.tt/2BNTvto

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...