ಅಯೋಧ್ಯಾ ತೀರ್ಪಿನ ವೇಳೆ `ಪ್ರಬುದ್ಧತೆ'ಯಿಂದ ವರ್ತಿಸಿ': ಮನ್ ಕಿ ಬಾತ್‌ನಲ್ಲಿ ಮೋದಿ ಮನವಿ

ಹೊಸ ದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ಕಾರ್ಯಕ್ರಮದಲ್ಲಿ ಅಯೋಧ್ಯಾ ತೀರ್ಪಿನ ಕುರಿತು ಪ್ರಸ್ತಾಪಿಸಿದ್ದಾರೆ. ನವೆಂಬರ್ ಮಧ್ಯಭಾಗದ ವೇಳೆಗೆ ಸುಪ್ರೀಂ ಕೋರ್ಟ್‌ ಪ್ರಕಟಿಸಲಿದ್ದು, ಈ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ‘ಮಾತಿನ ಮಲ್ಲ’ರು ತಮ್ಮ ಹೇಳಿಕೆಗಳ ಮೇಲೆ ಕಡಿವಾಣ ಹಾಕಿಕೊಳ್ಳುವಂತೆ ಪ್ರಧಾನಿ ಮೋದಿ ತಾಕೀತು ಮಾಡಿದ್ದಾರೆ. 2010ರ ಅಲಹಾಬಾದ್ ಹೈಕೋರ್ಟ್‌ ತೀರ್ಪು ನೆನಪಿಸಿಕೊಂಡ ಪ್ರಧಾನಿ ಮೋದಿ, ಆ ದಿನ ಅಲಹಾಬಾದ್ ಕೋರ್ಟ್ ತೀರ್ಪು ನೀಡಿದಾಗ ದೇಶದ ಜನರು ಶಾಂತಿ, ಸಂಯಮದಿಂದ ವರ್ತಿಸಿದರು ಎಂದು ಶ್ಲಾಘಿಸಿದರು. ತೀರ್ಪು ಬರುವ ಮುನ್ನ ಮನಬಂದಂತೆ ಹೇಳಿಕೆ ನೀಡಿದ್ದವರೂ ಕೂಡಾ ತೀರ್ಪಿನ ಬಳಿಕ ಜವಾಬ್ದಾರಿಯುತವಾಗಿ ವರ್ತಿಸಿದರು ಎಂದು ನೆನಪಿಸಿಕೊಂಡ ಪ್ರಧಾನಿ ಮೋದಿ, ಮುಂದಿನ ದಿನಗಳಲ್ಲೂ ಇದೇ ರೀತಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ದೇಶದ ಜನರಲ್ಲಿ ವಿನಂತಿಸಿಕೊಂಡಿದ್ದಾರೆ. ಸ್ವಹಿತಾಸಕ್ತಿಗೆ ಅಯೋಧ್ಯಾ ತೀರ್ಪನ್ನು ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ ಪ್ರಧಾನಿ ಮೋದಿ, ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸದಂತೆ ತಾಕೀತು ಮಾಡಿದ್ದಾರೆ. ಅಲಹಾಬಾದ್ ಹೈಕೋರ್ಟ್ ನೀಡಿದ್ದ ಅಯೋಧ್ಯಾ ತೀರ್ಪು ಸ್ಮರಿಸಿದ ಪ್ರಧಾನಿ ಅಯೋಧ್ಯಾ ವಿವಾದ ಸಂಬಂಧ 2010ರಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, ತನ್ನ ತೀರ್ಪಿನಲ್ಲಿ ವಿವಾದಿತ ಭೂಮಿಯನ್ನು 3 ಭಾಗಗಳಾಗಿ ವಿಭಜಿಸಿತ್ತು. ವಿವಾದಿತ ರಾಮಜನ್ಮಭೂಮಿಯನ್ನು 3 ಭಾಗಗಳಾಗಿ ವಿಭಜಿಸಿತ್ತು. ಒಂದು ಭಾಗ ರಾಮಲಲ್ಲಾ ದೇಗುಲಕ್ಕೆ, ಮತ್ತೊಂದು ಭಾಗ ನಿರ್ಮೋಹಿ ಅಖಾಡಕ್ಕೆ ಹಾಗೂ ಇನ್ನೊಂದು ಭಾಗವನ್ನು ಸುನ್ನಿ ಮುಸ್ಲಿಂ ವಕ್ಫ್‌ ಬೋರ್ಡ್‌ಗೆ ನೀಡಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಆದ್ರೆ, ಈ ತೀರ್ಪನ್ನು ಪ್ರಶ್ನಿಸಿ ಹಿಂದೂ ಹಾಗೂ ಮುಸ್ಲಿಂ ಅರ್ಜಿದಾರರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸಾರಥ್ಯದ ಸಾಂವಿಧಾನಿಕ ಪೀಠ, ಪ್ರತಿದಿನ ವಿಚಾರಣೆ ನಡೆಸಿ, ಇದೀಗ ತೀರ್ಪು ಕಾಯ್ದಿಟ್ಟಿದೆ. ಸುಪ್ರೀಂ ತೀರ್ಪಿಗಾಗಿ ಇಡೀ ದೇಶವೇ ಕಾದು ನೋಡುತ್ತಿದೆ. ಹತ್ಯೆ ಸ್ಮರಿಸಿದ ಪ್ರಧಾನಿ ಮೋದಿ ಪ್ರಧಾನಿ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ಇಂದಿರಾ ಗಾಂಧಿ ಅವರನ್ನು ಸ್ಮರಿಸಿದ್ದಾರೆ. ಅಕ್ಟೋಬರ್ 31ರಂದು ಇಂದಿರಾಗಾಂಧಿ ಅವರ ಹತ್ಯೆಯಾಗಿತ್ತು ಎಂದು ಸ್ಮರಿಸಿಕೊಂಡ ಪ್ರಧಾನಿ, ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರು. ಆ ದಿನ ದೇಶದಲ್ಲಿ ಆಘಾತಕಾರಿ ಸನ್ನಿವೇಶ ಆವರಿಸಿತ್ತು ಎಂದು ಮೋದಿ ನೆನಪಿಸಿಕೊಂಡರು. ದೇಶದ ಜನತೆಗೆ ಶುಭಾಶಯ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ, ದೇಶದ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ದೀಪಾವಳಿ ವೇಳೆ ಅನುಸರಿಸುವ ವಿವಿಧ ಸಂಪ್ರದಾಯಗಳನ್ನು ನಮೋ ವಿವರಿಸಿದ್ದಾರೆ. ಭಾರತ ಮಾತ್ರವಲ್ಲ, ವಿಶ್ವಾದ್ಯಂತ ದೀಪಾವಳಿ ಆಚರಿಸಲಾಗುತ್ತೆ ಎಂದ ಮೋದಿ, ಹಬ್ಬದ ವೇಳೆ ಪ್ರವಾಸೋದ್ಯಮ ವೃದ್ಧಿಯಾಗಲಿ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/2MSnIOy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...