ಹೊಸದಿಲ್ಲಿ: ದೇಶದ 47ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಶರದ್ ಅರವಿಂದ್ ಬೊಬ್ಡೆ ನೇಮಕವಾಗಿದ್ದಾರೆ. ನ.18 ರಂದು ಎಸ್.ಎ ಬೊಬ್ಡೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿರ್ಗಮಿತ ಮುಖ್ಯ ನ್ಯಾಯಮೂರ್ತಿ , ಎಸ್.ಎ.ಬೊಬ್ಡೆ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೇಂದ್ರ ನೀಡಿದ್ದ ಶಿಫಾರಸು ಪತ್ರಕ್ಕೆ ಅಂಕಿತ ಹಾಕಿ, ನೇಮಕಾತಿ ಆದೇಶ ನೀಡಿದ್ದಾರೆ. 2021 ಏಪ್ರಿಲ್ 23ರ ವರೆಗೆ ಅಧಿಕಾರದಲ್ಲಿರಲಿದ್ದಾರೆ. ಪ್ರಧಾನಿ ಮೋದಿ ಒಳಗೊಂಡಂತೆ ಕೇಂದ್ರದ ಸಂಪುಟ ಸಚಿವರು ಹಾಗೂ ಇನ್ನಿರ ಅನೇಕ ಮಂದಿ ಗಣ್ಯರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವ ನಿರೀಕ್ಷೆ ಇದೆ. ಕಳೆದ ಎಂಟು ವರ್ಷದಿಂದ ಸುಪ್ರೀಂ ಕೋರ್ಟ್ನಲ್ಲಿ ಬೋಬ್ಡೆ, 2 ನೇ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಅಯೋಧ್ಯೆಯ ರಾಮ ಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಪೈಕಿ ಬೋಬ್ಡೆ ಅವರೂ ಒಬ್ಬರಾಗಿದ್ದಾರೆ. 2018 ಅಕ್ಟೋಬರ್ 3 ರಂದು ರಂಜನ್ ಗೋಗಯ್ ದೇಶದ 46ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನ.17 ರಂದು ರಂಜನ್ ಗೋಗಯ್ ತಮ್ಮ ಸ್ಥಾನದಿಂದ ನಿವೃತ್ತರಾಗುತ್ತಿದ್ದು, ನ.18 ರಂದು ಬೋಬ್ಡೆ ನೂತನ ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಾಮಾನ್ಯವಾಗಿ ನಿರ್ಗಮಿತ ಸಿಜೆಐ, ಮುಂದಿನ ಮುಖ್ಯ ನ್ಯಾಯಾಧೀಶರ ಹೆಸರನ್ನು ರಾಷ್ಟ್ರಪತಿಗೆ ಶಿಫಾರಸು ಮಾಡುತ್ತಾರೆ. ಅದರಂತೆಯೇ ಗೋಗಯ್ ಅ.18 ರಂದು ಬೋಬ್ಡೆ ಹೆಸರನ್ನು ಶಿಫಾರಸು ಮಾಡಿದ್ದಾರೆ.
from India & World News in Kannada | VK Polls https://ift.tt/2JtqEPe