ಬೆಂಗಳೂರು: ರಾಜ್ಯದ ಜನತೆಯ ಅಭಿಮಾನಕಕ್ಕೆ ನಾನು ಚಿರಋಣಿ. ಹಗಲು ರಾತ್ರಿ ನನಗಾಗಿ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ ನಿಮ್ಮೆಲ್ಲರ ಋಣವನ್ನು ಹೇಗೆ ತೀರಿಸಬೇಕೋ ತಿಳಿಯುತ್ತಿಲ್ಲ.ನಂಜಾವಧೂತ ಸ್ವಾಮಿಗಳ, ನಮ್ಮ ಸಮುದಾಯದ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕಾಂಗ್ರೆಸ್ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತವು. ರಸ್ತೆಗಿಳಿದು ಹೋರಾಟ ನಡೆಸಿದ್ದೀರಿ ನಿಮ್ಮೆಲ್ಲರಿಗೂ ಋಣಿಯಾಗಿರುವುದು ನನ್ನ ಕರ್ತವ್ಯ ಎಂದು ತಮ್ಮ ಬೆಂಬಲಿಗರಿಗೆ ಕೃತಜ್ಞತೆ ತಿಳಿಸಿದ್ದಾರೆ. ಮೆರವಣಿಗೆಯಲ್ಲಿ ಡಿಕೆ ಶಿವಕುಮಾರ್ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ನಾನು ಯಾರಿಗೂ ಮೋಸ ಮಾಡಿಲ್ಲ, ಲಂಚ ತೆಗೆದುಕೊಂಡಿಲ್ಲ. 40 ವರ್ಷಗಳ ಸ್ವಚ್ಛ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಎಲ್ಲ ಅಭಿಮಾನಿಗಳಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ರುಣಿಯಾಗಿದ್ದೇನೆ. ಇಂದು ಇಂದು ಬಹಳಷ್ಟು ವಿಷಯಗಳನ್ನು ಹಂಚಿಕೊಳ್ಳಲಿದ್ದೇನೆ. ಈ ದಿನ ಅಂತ್ಯವಲ್ಲ, ಇದು ಪ್ರಾರಂಭವಷ್ಟೆ ಎಂದು ತಮ್ಮ ಮನಸಿನಲ್ಲಿರುವ ರೋಷವನ್ನು ಹೊರಹಾಕಿದ್ದಾರೆ. ನಿಲ್ದಾಣಕ್ಕೇ ತೆರಳಿ ಸ್ವಾಗತಿಸಿದ ಎಚ್ . ಡಿ. ಕುಮಾರಸ್ವಾಮಿ: ಪೂರ್ವನಿಗದಿಯಂತೆ ಸರಿಯಾದ ಸಮಯಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಸ್ವಾಗತಿಸಿದರು. ಕುಮಾರಸ್ವಾಮಿ ಅವರು ಖುದ್ದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಶಿವಕುಮಾರ್ ಅವರನ್ನು ಬರಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕುಮಾರಸ್ವಾಮಿ ಅವರು ದೆಹಲಿಗೂ ತೆರಳಿ ಶಿವಕುಮಾರ್ ಅವರ ಕುಶಲೋಪರಿ ವಿಚಾರಿಸಿದ್ದು ಇಲ್ಲಿ ಗಮನಾರ್ಹ.
from India & World News in Kannada | VK Polls https://ift.tt/2WettJr