ದುಷ್ಯಂತ ಚೌಟಾಲಾ ಬೆಂಬಲ ಕನ್‌ಫರ್ಮ್‌; ಭಾನುವಾರ ಖಟ್ಟರ್‌ ಪ್ರಮಾಣಕ್ಕೆ ಅಣಿ

ಹರಿಯಾಣದಲ್ಲಿ ಸರಕಾರ ರಚನೆ ಸರ್ಕಸ್ಸು ಅಂತಿಮ ಹಂತ ತಲುಪಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ , ಅವರೊಂದಿಗೆ ಕೂಡಿಕೊಂಡು ಸರಕಾರ ರಚನೆಗೆ ಮುಂದಾಗಿದೆ. ಕಿಂಗ್‌ ಮೇಕರ್‌ ದುಷ್ಯಂತ್‌ ತಮ್ಮ ಆರು ಮಂದಿ ಶಾಸಕರ ಬೆಂಬಲವನ್ನು ಬಿಜೆಪಿಗೆ ನೀಡುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ. ಈ ಎಲ್ಲ ರಾಜಕೀಯ ಬೆಳವಣಿಗೆಯ ಬಳಿಕ ಸಿಎಂ ಎಂ ಎಲ್‌ ಖಟ್ಟರ್‌ 2ನೇ ಬಾರಿಗೆ ಹರಿಯಾಣದ ಮುಖ್ಯಮಂತ್ರಿಯಾಗಿ ಭಾನುವಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ನೀತಿ, ಪಕ್ಷದ ಆದ್ಯತೆಗಳಿಗೆ ಮನ್ನಣೆ ನೀಡುವ ಪಕ್ಷಕ್ಕೆ ನಾವು ಬೆಂಬಲ ನೀಡುವುದಾಗಿ ಶುಕ್ರವಾರ ಜೆಜೆಪಿ ಮುಖ್ಯಸ್ಥ ದುಷ್ಯಂತ್‌ ಚೌಟಾಲಾ ಹೇಳಿಕೆ ನೀಡಿದ್ದರು. ಇದೀಗ ಅವರು ತಮ್ಮ ಐವರು ಶಾಸಕರ ಬೆಂಬಲವನ್ನು ಬಿಜೆಪಿಗೆ ನೀಡುವುದಾಗಿ ತಿಳಿಸಿದ್ದಾರೆ. ಶನಿವಾರವೇ ಎಂಎಲ್‌ ಖಟ್ಟರ್‌ ಹಾಗೂ ಶಾಸಕರು ಸರಕಾರ ರಚನೆಗೆ ಅನುಮತಿ ಕೋರಿ, ರಾಜ್ಯಪಾಲರ ಅನುಮತಿ ಕೇಳಲಿದ್ದಾರೆ ಎಂದು ತಿಳಿದು ಬಂದಿದೆ. ಏತನ್ಮಧ್ಯೆ ಸಾಕಷ್ಟು ಚರ್ಚೆಗೆ ಗುರಿಯಾಗಿರುವ ಗೋಪಾಲ್‌ ಕಾಂಡಾ ಅವರ ಬೆಂಬಲ ಬಿಜೆಪಿಗೆ ಅಗತ್ಯವಿಲ್ಲ ಎಂದು ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅನಿಲ್‌ ವಿಜ್‌ ಹೇಳಿಕೆ ನೀಡಿದ್ದಾರೆ. ಗೋಪಾಲ್‌ ಕಾಂಡಾ ಅವರಿಂದ ಬೆಂಬಲ ಪಡೆಯುವುದು ಹಾಗೂ ಸರಕಾರದಲ್ಲಿ ಅವರನ್ನು ಭಾಗವಾಗಿಸುವ ಕುರಿತು ಬಿಜೆಪಿಯ ಅನೇಕ ನಾಯಕರಲ್ಲಿ ಅಸಮಾಧಾನ ಏರ್ಪಟ್ಟಿತ್ತು. ಅನೇಕ ನಾಯಕರು ಗೋಪಾಲ್‌ ಕಾಂಡಾ ಅವರ ಬೆಂಬಲ ಪಡೆಯಕೂಡದು ಎಂದು ತಾಕೀತು ಮಾಡಿದ್ದರು. ಅಲ್ಲದೆ ಫಲಿತಾಂಶದ ಬಳಿಕ ಕಾಂಡಾ ಅವರೇ ಬಿಜೆಪಿ ನಾಯಕರ ಭೇಟಿಗೆ ಮುಂದಾಗಿದ್ದರು. 2009 ರಿಂದ ಸತತ ಶಾಸಕರಾಗಿ ಆಯ್ಕೆಯಾದ ಕಾಂಡಾ ವಿರುದ್ಧ ಭಾರತೀಯ ದಂಡ ಸಂಹಿತೆ 306 ಸೇರಿದಂತೆ ಇನ್ನಿತರ ಪ್ರಕರಣಗಳು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅವರ ಬೆಂಬಲವನ್ನು ಬಿಜೆಪಿ ಪಡೆಯಬಾರದು ಎಂದು ಅನೇಕರು ಆಗ್ರಹಿಸಿದ್ದರು. ಚಂಡೀಗಡದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿರುವ ಅನಿಲ್‌ ವಿಜ್‌, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವೇಳೆ ಅವರು ಬಿಜೆಪಿಯನ್ನು ಬೆಂಬಲಿಸುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಬಿಜೆಪಿಗೆ ಅವರ ಬೆಂಬಲ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.


from India & World News in Kannada | VK Polls https://ift.tt/2MQ2Qr3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...