ಬೆಳಗಾವಿ ಜಿಲ್ಲೆ ವಿಭಜಿಸುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ; ಡಿಸಿಎಂ ಸವದಿ ಸ್ಪಷ್ಟನೆ

ಬೆಳಗಾವಿ: ಸದ್ಯ ಜಿಲ್ಲೆ ವಿಭಜಿಸುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಉಪಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ಬೆಳಗಾವಿ ಜಿಲ್ಲಾ ವಿಭಜನೆಗೆ ಕಾಲ ಕೂಡಿ ಬಂದರೆ ಎಲ್ಲಾ ಗೊಂದಲಗಳನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳುತ್ತೇವೆಂದು ಹೇಳುವ ಮೂಲಕ ಜಿಲ್ಲಾ ವಿಭಜನೆ ಗೊಂದಲಕ್ಕೆ ತೆರೆ ಎಳೆದರು. ಚಿಕ್ಕೋಡಿ, ಗೋಕಾಕ ಮತ್ತು ಅಥಣಿ ಜಿಲ್ಲೆ ರಚನೆಯ ಕೂಗು ಕೇಳಿ ಬಂದಿದೆ. ಅದರಂತೆ, ಬೆಳಗಾವಿ ಅಖಂಡ ಜಿಲ್ಲೆಯಾಗಿಯೇ ಉಳಿಯಲಿ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಜನಾಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಹೇಳಿದರು. ಇದೇ ವೇಳೆ, ಪೆಬ್ರವರಿ ತಿಂಗಳಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು. ಎರಡು ದಿನಗಳ ಕಾಲ ಜಿಲ್ಲಾಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಆಗಮಿಸುತ್ತಿದ್ದಂತೆ ಅವರಿಗೆ ಜಿಲ್ಲಾವಿಭಜನೆ ಹೋರಾಟದ ಬಿಸಿ ತಟ್ಟಿತು. ವಿಮಾನ ನಿಲ್ದಾಣದಲ್ಲೇ ಸಿಎಂಗೆ ಎದುರಾದ ಗೋಕಾಕ ಜಿಲ್ಲಾಚಾಲನಾ ಸಮಿತಿ ಸದಸ್ಯರು ಬೆಳಗಾವಿ ಜಿಲ್ಲೆವಿಭಜಿಸಿ ಗೋಕಾಕ ಜಿಲ್ಲೆರಚಿಸುವಂತೆ ಸಾಂಕೇತಿಕವಾಗಿ ಮನವಿ ಪತ್ರ ಅರ್ಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ''ಬೆಳಗಾವಿ ಜಿಲ್ಲಾವಿಭಜನೆ ಸದ್ಯಕ್ಕಿಲ್ಲ. ವಿಭಜನೆ ಸಂದರ್ಭದಲ್ಲಿನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಣಯ ಕೈಗೊಳ್ಳುತ್ತೇವೆ'', ಎಂದರು.


from India & World News in Kannada | VK Polls https://ift.tt/2pMaYjl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...