ತಿರುಚಿ: ನೀರು ಬಾರದೇ ಪಾಳು ಬಿದ್ದಿದ್ದ ಕೊಳವೆ ಬಾವಿಯೊಳಗೆ 2 ವರ್ಷದ ಗಂಡು ಮಗು ಬಿದ್ದು ಅರ್ಧದಲ್ಲೇ ಸಿಲುಕಿಕೊಂಡಿದೆ. ತಮಿಳುನಾಡಿನ ಜಿಲ್ಲೆಯ ಮಣಪ್ಪರೈ ಬಳಿಯ ನಡುಕಟ್ಟುಪಟ್ಟಿಯಲ್ಲಿ ಈ ಘಟನೆ ನಡೆದಿದೆ. ಸುಜಿತ್ ವಿಲ್ಸನ್ ಹೆಸರಿನ ಈ ಮಗು ಶುಕ್ರವಾರ ಸಂಜೆ ಆಟವಾಡುತ್ತಿದ್ದಾಗ, ಮನೆಯ ಮುಂದೆಯೇ ಇದ್ದ ಪಾಳು ಬಿದ್ದಿದ್ದ 7 ವರ್ಷ ಹಳೆಯದಾದ ಕೊಳವೆ ಬಾವಿಕೆ ಬಿದ್ದಿದೆ. ಮಗು ಉಸಿರಾಡಲೂ ಕಷ್ಟವಾಗುವ ಪರಿಸ್ಥಿತಿ ತಲುಪಿದೆ. ವಿಶೇಷ ಉಪಕರಣವನ್ನು ಬಳಸಿ ಮಗುವಿಗೆ ಉಸಿರಾಡಲು ಅನುಕೂಲ ಮಾಡಿಕೊಡಲಾಗಿದೆ. ಕೂಡಲೇ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವಿನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕೊಳವೆ ಬಾವಿಯೊಳಗೆ ಮಗುವಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ವಿಶೇಷ ಉಪಕರಣ ಬಳಕೆ (ಪರಿಷ್ಕರಿಸಲಾಗುತ್ತದೆ)
from India & World News in Kannada | VK Polls https://ift.tt/31SxPHr