ಬೆಂಗಳೂರು: ಭಾರತೀಯ ಪುರುಷ ಕ್ರಿಕೆಟ್ ತಂಡದ ಬಲಗೈ ವೇಗಿ ಮತ್ತು ಮಹಿಳಾ ಬ್ಯಾಟ್ಸ್‌ವುಮನ್ , 2019 ಮತ್ತು 2020ನೇ ಸಾಲಿನ ಅಲ್ಮನಾಕ್ ವರ್ಷದ ಕ್ರಿಕೆಟರ್ಸ್ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಈ ಭಾರಿ ಭಾರತದ ಇಬ್ಬರು ಸೇರಿ ಏಷ್ಯಾದ ಐದು ಮಂದಿ ಪ್ರಶಸ್ತಿಗೆ ಪಾತ್ರವಾಗಿದ್ದಾರೆ. ಪಾಕಿಸ್ತಾನದ ಫಖರ್ ಜಮಾನ್, ಶ್ರೀಲಂಕಾದ ದಿಮುತ್ ಕರುಣಾರತ್ನೆ ಮತ್ತು ಅಫಘಾನಿಸ್ತಾನದ ರಶೀದ್ ಖಾನ್ ಏಷ್ಯಾದಿಂದ ಪ್ರಶಸ್ತಿಗೆ ಭಾಜನರಾದ ಇತರರು. ಸ್ಮೃತಿ ಮಂಧಾನ ವರ್ಷದ ಕ್ರಿಕೆಟರ್ ಪ್ರಶಸ್ತಿಗೆ ಪಾತ್ರರಾದ ಭಾರತದ ಮೂರನೇ ಆಟಗಾರ್ತಿ. ಇದಕ್ಕೂ ಮೊದಲು ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮ ಈ ಪ್ರಶಸ್ತಿಗೆ ಭಾಜನವಾಗಿದ್ದರು. ಭಾರತೀಯ ಕ್ರಿಕೆಟ್ ದಂತಕಥೆಗಳಾದ ಜಿ.ಆರ್ ವಿಶ್ವನಾಥ್ ಮತ್ತು ಲಾಲಾ ಅಮರ್‌ನಾಥ್ 'ವಿಸ್ಡನ್ ಇಂಡಿಯಾ ಹಾಲ್ ಆಫ್ ಫೇಮ್' ಗೌರವ ಗಳಿಸಿದ್ದಾರೆ. 2019-20ನೇ ಸಾಲಿನ ಏಳನೇ ವಾರ್ಷಿಕ ಕ್ರಿಕೆಟ್ ಪ್ರಕಾಶನದಲ್ಲಿ, ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕರ್ನಾಟಕದ ಮಯಾಂಕ್ ಅಗರ್ವಾಲ್ ಬಗ್ಗೆಯೂ ಉಲ್ಲೇಖಿಸಲಾಗಿದೆ. ತದಾ ಬಳಿಕ ಮಯಾಂಕ್, ಟೀಮ್ ಇಂಡಿಯಾದಿಂದ ಚೊಚ್ಚಲ ಬುಲಾವ್ ಪಡೆದಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33Z0U56