IND vs AUS Live Score: ಟಾಸ್‌ ಗೆದ್ದು ಬ್ಯಾಟಿಂಗ್‌‌ ಆಯ್ದುಕೊಂಡ ಆಸ್ಟ್ರೇಲಿಯಾ!

ಮೆಲ್ಬೋರ್ನ್‌: ಶನಿವಾರ ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ನಡುವಿನ 100 ಟೆಸ್ಟ್ ಪಂದ್ಯದಲ್ಲಿ ಟಾಸ್‌ ಗೆದ್ದ ಟಿಮ್‌ ಪೇಯ್ನ್‌ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್‌ ವೇಳೆ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಟಿಮ್‌ ಪೇಯ್ನ್‌, "ಕ್ರಿಸ್‌ಮಸ್‌ ಸಮಯ ಇದಾಗಿರುವುದರಿಂದ ಆಸ್ಟ್ರೇಲಿಯಾದ ಅರ್ಧ ಕುಟುಂಬಗಳು ಇಲ್ಲಿಗೆ ಆಗಮಿಸಿವೆ. ನಾವು ಮೊದಲು ಬ್ಯಾಟಿಂಗ್‌ ಮಾಡುತ್ತೇವೆ. ಡೇವಿಡ್‌ ವಾರ್ನರ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮುಂದಿನ ಪಂದ್ಯಕ್ಕೆ ಅವರು ಲಭ್ಯರಾಗಲಿದ್ದಾರೆ. ವೈಯಕ್ತಿಕವಾಗಿ ಪಂದ್ಯ ಗೆಲ್ಲುವುದಕ್ಕಿಂದ ಟೆಸ್ಟ್‌ ಸರಣಿ ಗೆಲ್ಲುವುದು ಮುಖ್ಯ," ಎಂದು ಹೇಳಿದರು. ನಂತರ, ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಮಾತನಾಡಿ, "ಮೊದಲನೇಯದಾಗಿ ಭಾರತ ತಂಡವನ್ನು ಇಲ್ಲಿ ಮುನ್ನಡೆಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಹಾಗೂ ನಮ್ಮ ಹುಡುಗರು ಖಂಡಿತಾ ಕಮ್‌ಬ್ಯಾಕ್‌ ಮಾಡಲಿದ್ದಾರೆ. ಅಡಿಲೇಡ್‌ನಲ್ಲಿ ಆರಂಭಿಕ ಎರಡು ದಿನಗಳಲ್ಲಿ ಮುನ್ನಡೆಯಲ್ಲಿದ್ದ ನಮಗೆ, ಮೂರನೇ ದಿನ ಒಂದೇ ಒಂದು ಗಂಟೆ ಹಿನ್ನಡೆಯಾಯಿತು. ಯುವ ಆಟಗಾರರಾದ ಶುಭಮನ್‌ ಗಿಲ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಬಗ್ಗೆ ತುಂಬಾ ಉತ್ಸುಕತೆ ಇದೆ. ನಿಜಕ್ಕೂ ತಂಡದ ಸಂಯೋಜನೆ ಉತ್ತಮವಾಗಿದೆ," ಎಂದು ತಿಳಿಸಿದರು. ಭಾರತ ಪ್ಲೇಯಿಂಗ್‌ ‌ XI:ಅಜಿಂಕ್ಯ ರಹಾನೆ (ನಾಯಕ), ಹನುಮ ವಿಹಾರಿ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ , ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಉಮೇಶ್‌ ಯಾದವ್, ಜಸ್ಪ್ರಿತ್ ಬುಮ್ರಾ. ಆಸ್ಟ್ರೇಲಿಯಾ ಪ್ಲೇಯಿಂಗ್‌ XI : ಟಿಮ್ ಪೈನ್ (ನಾಯಕ), ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲಾಬುಶೇನ್, ಸ್ಟೀವನ್‌ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜಾಶ್‌ ಹೇಝಲ್‌ವುಡ್, ನೇಥನ್ ಲಯಾನ್. ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ವೇಳಾಪಟ್ಟಿ ಮೊದಲನೇ ಟೆಸ್ಟ್‌: ಡಿ.17 ರಿಂದ 21 (ಸ್ಥಳ: ಅಡಿಲೇಡ್‌ ಓವಲ್‌) ಎರಡನೇ ಟೆಸ್ಟ್‌: ಡಿ.26 ರಿಂದ 30 (ಸ್ಥಳ: ಎಂಸಿಜಿ) ಮೂರನೇ ಟೆಸ್ಟ್‌: ಜ. 7 ರಿಂದ 11(ಸ್ಥಳ: ಎಸ್‌ಸಿಜಿ) ನಾಲ್ಕನೇ ಟೆಸ್ಟ್: ಜ. 15 ರಿಂದ 19 (ಸ್ಥಳ: ಗಬ್ಬಾ)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KEFhTE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...