ಗುಜರಾತ್‌: ಏಕತಾ ಪ್ರತಿಮೆ ವೀಕ್ಷಿಸಿದ ಪ್ರವಾಸಿಗರಿಂದ ಸಂಗ್ರಹಿಸಿದ್ದ ಟಿಕೆಟ್‌ ಹಣ ದುರುಪಯೋಗ, ಕೋಟಿ ಕೋಟಿ ಹಣ ಎಲ್ಲಿಗೆ ಹೋಯ್ತು?

ಅಹಮದಾಬಾದ್‌: ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯೊಂದಿಗೆ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಭಾರತದ ಉಕ್ಕಿನ ಮನುಷ್ಯ ವೀಕ್ಷಣೆಯ ಟಿಕೆಟ್‌ ಮಾರಾಟದಿಂದ ಸಂಗ್ರಹವಾದ 5.24 ಕೋಟಿ ರೂ. ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಗುಜರಾತಿನ ಕೇವಾಡಿಯಾ ಗ್ರಾಮದ ಪೊಲೀಸ್‌ ಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿದೆ. ''2018ರ ನವೆಂಬರ್‌ನಿಂದ 2020ರ ಮಾರ್ಚ್ ಅವಧಿಯಲ್ಲಿ ಟಿಕೆಟ್‌ ಮಾರಾಟದಿಂದ ಸಂಗ್ರಹವಾಗಿದ್ದ 5.24 ಕೋಟಿ ರೂ. ಹಣವನ್ನು ಟಿಕೆಟ್‌ ಕಲೆಕ್ಷನ್‌ ಏಜೆನ್ಸಿಯು, ಏಕತಾ ಪ್ರತಿಮೆ ಆಡಳಿತ ಮಂಡಳಿ ಹೊಂದಿರುವ ಬ್ಯಾಂಕ್‌ ಖಾತೆಗೆ ಸಂದಾಯ ಮಾಡದೇ, ತನ್ನ ಬ್ಯಾಂಕ್‌ ಖಾತೆಯೊಂದಕ್ಕೆ ಜಮೆ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡಿದೆ,'' ಎಂಬ ಆರೋಪ ಕೇಳಿಬಂದಿದೆ. ಪ್ರಧಾನಿ ಮೋದಿಯ ಕನಸಿನ ಏಕತಾ ಪ್ರತಿಮೆ ಇದಾಗಿದ್ದು ಜಗತ್ತಿನಲ್ಲೇ ಅತೀ ಎತ್ತರದ ಎನ್ನುವ ಹೆಗ್ಗಳಿಕೆ ಹೊಂದಿದೆ. ಇದರ ಲೋಕಾರ್ಪಣೆ ಬಳಿ ಲಕ್ಷ ಸಂಖ್ಯೆಯಲ್ಲಿ ಜನರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ದೇಶ-ವಿದೇಶದ ಜನರನ್ನು ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆ ಆಕರ್ಷಿಸುತ್ತಿದೆ. ದೇಶಕ್ಕೆ ಅವರು ನೀಡಿದ ಏಕತೆಯ ಕೊಡುಗೆ ಹಿನ್ನೆಲೆ ಇದನ್ನು ಏಕತೆಯ ಮೂರ್ತಿ ಎಂದು ಕರೆಯಲಾಗಿದೆ.


from India & World News in Kannada | VK Polls https://ift.tt/2VrdrMG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...