ತೆಂಗು ಬೆಳೆಗಾರರ ಬದುಕಲ್ಲಿ ಹೆಚ್ಚಿದ ಸಿಹಿ; ₹13,000 ಆಸುಪಾಸಿನಲ್ಲಿದ್ದ ದರ ದಿಢೀರನೆ ₹16,000ಕ್ಕೆ ಏರಿಕೆ

ಆರ್‌.ಸತ್ಯನಾರಾಯಣ್‌ ತುರುವೇಕೆರೆತುಮಕೂರು: ರಾಜ್ಯದ ಸಿಹಿ ಕೊಬ್ಬರಿಗೆ ಅಂತರ್‌ರಾಜ್ಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ 13 ಸಾವಿರದ ಆಜುಬಾಜಿನಲ್ಲಿದ್ದ ಕ್ವಿಂಟಾಲ್‌ ಕೊಬ್ಬರಿ ದರ ದಿಢೀರನೆ ಜಿಗಿತ ಕಂಡು 16 ಸಾವಿರ ರೂ. ತಲುಪಿ ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯದ ಕಲ್ಪತರು ನಾಡೆಂದೇ ಹೆಸರಾಗಿರುವ ತುಮಕೂರು ಜಿಲ್ಲೆ ನಂತರ ಹಾಸನ, ಮಂಡ್ಯ, ರಾಮನಗರ, ಉಡುಪಿ, ಮಂಗಳೂರು ಮತ್ತು ಭಾಗಶಃ ಚಿತ್ರದುರ್ಗ ಭಾಗಗಳಲ್ಲಿ ಶೇ. 60ರಷ್ಟು ಕೃಷಿಕರು ತೆಂಗು ಬೆಳೆ ಅವಲಂಬಿಸಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು, ಕೊಬ್ಬರಿ ಇತ್ತೀಚಿನ ದಿನಗಳಲ್ಲಿಉತ್ಪಾದನಾ ವೆಚ್ಚ ಹೆಚ್ಚಳಗೊಂಡಿದ್ದರೂ ಮಾರುಕಟ್ಟೆ ಬೆಲೆಯಲ್ಲಿ ತೀವ್ರ ಕುಸಿತಗೊಂಡು ಅವಲಂಬಿತ ರೈತರನ್ನು ಕಂಗಾಲಾಗಿಸಿತ್ತು. ಅನಿರೀಕ್ಷಿತ ಕೊರೊನಾ ಸಂದಿಗ್ಧತೆಯಿಂದ ಮತ್ತಷ್ಟು ಬೇಡಿಕೆ ಕಳೆದುಕೊಂಡ ಕೊಬ್ಬರಿ ಬೆಲೆ ಮಾರ್ಚ್‌ನಿಂದ ಜೂನ್‌ವರೆಗೆ ಕ್ವಿಂಟಾಲ್‌ ದರ 10 ಸಾವಿರ ಆಜುಬಾಜಿನಲ್ಲಿದ್ದು, ಕೊನೆ-ಕೊನೆಯಲ್ಲಿ 9200 ರೂ.ವರೆಗೂ ಕುಸಿಯಿತು. ಈ ವೇಳೆ ರಾಜ್ಯದಾದ್ಯಂತ ತೆಂಗು ಬೆಳೆಗಾರರು ಸಹಾಯಧನದೊಂದಿಗೆ ನ್ಯಾಫೆಡ್‌ ತೆರೆದು ಕೊಬ್ಬರಿ ಖರೀದಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದರು.

ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು, ಕೊಬ್ಬರಿ ಇತ್ತೀಚಿನ ದಿನಗಳಲ್ಲಿಉತ್ಪಾದನಾ ವೆಚ್ಚ ಹೆಚ್ಚಳಗೊಂಡಿದ್ದರೂ ಮಾರುಕಟ್ಟೆ ಬೆಲೆಯಲ್ಲಿ ತೀವ್ರ ಕುಸಿತಗೊಂಡು ಅವಲಂಬಿತ ರೈತರನ್ನು ಕಂಗಾಲಾಗಿಸಿತ್ತು. ಕೊರೊನಾ ಕಾಲದಲ್ಲಂತೂ ಬೇಡಿಕೆ ಕಳೆದುಕೊಂಡ ಕೊಬ್ಬರಿ ಬೆಲೆ ಮಾರ್ಚ್‌ನಿಂದ ಜೂನ್‌ವರೆಗೆ ಕ್ವಿಂಟಾಲ್‌ ದರ 9200 ರೂ.ವರೆಗೂ ಕುಸಿದಿತ್ತು. ಆದರೆ ಈಗ ಅಂತರ್‌ರಾಜ್ಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ ಕೆಲದಿನಗಳ ಹಿಂದೆ 13 ಸಾವಿರದ ಆಜುಬಾಜಿನಲ್ಲಿದ್ದ ಕ್ವಿಂಟಾಲ್‌ ಕೊಬ್ಬರಿ ದರ ದಿಢೀರನೆ ಜಿಗಿತ ಕಂಡು 16 ಸಾವಿರ ರೂ. ತಲುಪಿದೆ. ಆ ಮೂಲಕ ತೆಂಗು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.


ತೆಂಗು ಬೆಳೆಗಾರರ ಬದುಕಲ್ಲಿ ಹೆಚ್ಚಿದ ಸಿಹಿ; ₹13,000 ಆಸುಪಾಸಿನಲ್ಲಿದ್ದ ದರ ದಿಢೀರನೆ ₹16,000ಕ್ಕೆ ಏರಿಕೆ

ಆರ್‌.ಸತ್ಯನಾರಾಯಣ್‌ ತುರುವೇಕೆರೆ

ತುಮಕೂರು:

ರಾಜ್ಯದ ಸಿಹಿ ಕೊಬ್ಬರಿಗೆ ಅಂತರ್‌ರಾಜ್ಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ 13 ಸಾವಿರದ ಆಜುಬಾಜಿನಲ್ಲಿದ್ದ ಕ್ವಿಂಟಾಲ್‌ ಕೊಬ್ಬರಿ ದರ ದಿಢೀರನೆ ಜಿಗಿತ ಕಂಡು 16 ಸಾವಿರ ರೂ. ತಲುಪಿ ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯದ ಕಲ್ಪತರು ನಾಡೆಂದೇ ಹೆಸರಾಗಿರುವ ತುಮಕೂರು ಜಿಲ್ಲೆ ನಂತರ ಹಾಸನ, ಮಂಡ್ಯ, ರಾಮನಗರ, ಉಡುಪಿ, ಮಂಗಳೂರು ಮತ್ತು ಭಾಗಶಃ ಚಿತ್ರದುರ್ಗ ಭಾಗಗಳಲ್ಲಿ ಶೇ. 60ರಷ್ಟು ಕೃಷಿಕರು ತೆಂಗು ಬೆಳೆ ಅವಲಂಬಿಸಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು, ಕೊಬ್ಬರಿ ಇತ್ತೀಚಿನ ದಿನಗಳಲ್ಲಿಉತ್ಪಾದನಾ ವೆಚ್ಚ ಹೆಚ್ಚಳಗೊಂಡಿದ್ದರೂ ಮಾರುಕಟ್ಟೆ ಬೆಲೆಯಲ್ಲಿ ತೀವ್ರ ಕುಸಿತಗೊಂಡು ಅವಲಂಬಿತ ರೈತರನ್ನು ಕಂಗಾಲಾಗಿಸಿತ್ತು. ಅನಿರೀಕ್ಷಿತ ಕೊರೊನಾ ಸಂದಿಗ್ಧತೆಯಿಂದ ಮತ್ತಷ್ಟು ಬೇಡಿಕೆ ಕಳೆದುಕೊಂಡ ಕೊಬ್ಬರಿ ಬೆಲೆ ಮಾರ್ಚ್‌ನಿಂದ ಜೂನ್‌ವರೆಗೆ ಕ್ವಿಂಟಾಲ್‌ ದರ 10 ಸಾವಿರ ಆಜುಬಾಜಿನಲ್ಲಿದ್ದು, ಕೊನೆ-ಕೊನೆಯಲ್ಲಿ 9200 ರೂ.ವರೆಗೂ ಕುಸಿಯಿತು. ಈ ವೇಳೆ ರಾಜ್ಯದಾದ್ಯಂತ ತೆಂಗು ಬೆಳೆಗಾರರು ಸಹಾಯಧನದೊಂದಿಗೆ ನ್ಯಾಫೆಡ್‌ ತೆರೆದು ಕೊಬ್ಬರಿ ಖರೀದಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದರು.



ನ್ಯಾಫೆಡ್‌ ಕೇಂದ್ರ(NAFED)
ನ್ಯಾಫೆಡ್‌ ಕೇಂದ್ರ(NAFED)

ತೆಂಗು ಬೆಳೆಗಾರರ ಆಗ್ರಹದ ಮೇರೆಗೆ ಜುಲೈನಲ್ಲಿ ನ್ಯಾಫೆಡ್‌ ಕೇಂದ್ರ ತೆರೆಯಲು ಹಸಿರು ನಿಶಾನೆ ತೋರಿಸಿದ ಕೇಂದ್ರ ಸರಕಾರ ಆಗಸ್ಟ್‌ 8ರಿಂದ ಸೆಪ್ಟೆಂಬರ್‌ 15ರ ವರೆಗೆ ನೋಂದಣಿ ಆರಂಭಿಸಿ, ಕ್ವಿಂಟಾಲ್‌ ದರ 10,300 ದರದಲ್ಲಿ ಖರೀದಿಸಿತು. ಆನಂತರ 15 ದಿನಗಳ ಅಂತರದಲ್ಲಿ ಮಾರುಕಟ್ಟೆ ಬೆಲೆಯೂ ನ್ಯಾಫೆಡ್‌ ದರ ಮೀರಿದಂತೆ 10,800ಕ್ಕೆ ತಲುಪಿತು. ಈ ವೇಳೆ ರಾಜ್ಯ ಸರಕಾರ ಕ್ವಿಂಟಾಲ್‌ಗೆ 1 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ 11,300ಕ್ಕೆ ಖರೀದಿ ಘೋಷಿಸಿತು. ಇಷ್ಟೆಲ್ಲದರ ನಡುವೆ ಸತತ ಏರಿಕೆ ಕಂಡ ತೆರೆದ ಮಾರುಕಟ್ಟೆಯ ಕೊಬ್ಬರಿ ಬೆಲೆಯಿಂದಾಗಿ ಅಕ್ಟೋಬರ್‌ ಮೊದಲವಾರಕ್ಕೆ ನ್ಯಾಫೆಡ್‌ ಖರೀದಿ ತೆರೆದು ಪ್ರಯೋಜನವಿಲ್ಲದಂತಾಯಿತು.



ದಿಢೀರ್‌ ಬೆಲೆ ಏರಿಕೆ
ದಿಢೀರ್‌ ಬೆಲೆ ಏರಿಕೆ

ಏಪ್ರಿಲ್‌ನಿಂದ ಅಕ್ಟೋಬರ್‌ನ ದೀಪಾವಳಿ ವರೆಗೆ ಕೊಬ್ಬರಿ ವಹಿವಾಟಿಗೆ ಸಕಾಲವೆನ್ನಲಾಗಿದೆ. ಈ ವೇಳೆ ಶ್ರಾವಣ ಮಾಸದಿಂದ ಸಾಲು - ಸಾಲು ಹಬ್ಬಗಳು ಆರಂಭಗೊಂಡು ಹೋಳಿ, ಆಯುಧಪೂಜೆ, ದೀಪಾವಳಿ ಹಬ್ಬಗಳಿಂದಾಗಿ ಮಾರುಕಟ್ಟೆ ದರ ಸಹಜವಾಗಿ ಹೆಚ್ಚಳ ಕಂಡಿದೆ. ಆದರೆ ಈ ಭಾರಿ ಕೊರೊನಾ ಸಂದಿಗ್ಧತೆಯಿಂದಾಗಿ ಮಾರುಕಟ್ಟೆ ಬೇಡಿಕೆ ರವಾನೆ ಪರವಾನಗಿ ಇಲ್ಲದಂತಾಗಿ ಕುಸಿತ ಕಂಡಿದ್ದ ಕೊಬ್ಬರಿ ದರ ದಿಢೀರನೆ ದೀಪಾವಳಿ ನಂತರ 15 ದಿನಗಳ ಅಂತರದಲ್ಲಿ ಕ್ವಿಂಟಾಲ್‌ ದರ 3 ಸಾವಿರ ಹೆಚ್ಚಳ ಕಂಡಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ12 ಆಜುಬಾಜಿನಲ್ಲಿದ್ದ ದರ ನಿರಂತರ ಏರಿಕೆಯೊಂದಿಗೆ 14, 15 ಸಾವಿರ ದಾಟಿ ಇದೀಗ 16 ಸಾವಿರಕ್ಕೆ ಬಂದು ತಲುಪಿದೆ.



ದರ ಹೆಚ್ಚಳಕ್ಕೆ ಕಾರಣ ಏನು ಗೊತ್ತಾ?
ದರ ಹೆಚ್ಚಳಕ್ಕೆ ಕಾರಣ ಏನು ಗೊತ್ತಾ?

ಚಳಿಗಾಲಕ್ಕೆ ಮುನ್ನ ಕೊಬ್ಬರಿ ದಾಸ್ತಾನು ಇರಿಸಿದ್ದ ದೆಹಲಿ, ಮಹಾರಾಷ್ಟ್ರ, ಪುಣೆ, ಉತ್ತರ ಭಾರತದ ಹಲವು ರಾಜ್ಯಗಳು ಕೊರೊನಾದಿಂದ ಈವರೆಗೆ ಕೊಬ್ಬರಿ ತರಿಸಿಕೊಳ್ಳಲಾಗದೆ ಈಗ ದಿಢೀರನೆ ಬೇಡಿಕೆ ಸಲ್ಲಿಸಿವೆ. ಇದರೊಂದಿಗೆ ತಮಿಳುನಾಡಿನಲ್ಲಿ ಸಹ ತೈಲ ಬೆಲೆ 170 -180ರ ಆಜುಬಾಜಿನಲ್ಲಿ ಲೀಟರ್‌ ದರ 250ಕ್ಕೆ ಏರಿಕೆ ಕಂಡಿದೆ. ಕೊರೆವ ಚಳಿಯ ತೀವ್ರತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೊಬ್ಬರಿ ಎಣ್ಣೆ, ಕೊಬ್ಬರಿ ತಿನಿಸುಗಳಿಗೆ ಬೇಡಿಕೆ ಹೆಚ್ಚಳಗೊಂಡಿದೆ. ಹೀಗಾಗಿ ಒಟ್ಟಾರೆ ಕೊಬ್ಬರಿ ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ಕ್ವಿಂಟಾಲ್‌ ಕೊಬ್ಬರಿ ದರ 16,000 ರೂ. ತಲುಪುವುದರೊಂದಿಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.





from India & World News in Kannada | VK Polls https://ift.tt/3mAnvPo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...