ರೈತರಿಗೂ ಆನ್ಲೈನ್ ಬ್ಯಾಂಕಿಂಗ್‌: ಸಬ್ಸಿಡಿ ದುರುಪಯೋಗಕ್ಕೆ ತಡೆ, ಜ.1ರಿಂದ ಯೋಜನೆ ಜಾರಿ!

ಶಶಿಧರ್‌ ಎಸ್‌.ದೋಣಿಹಕ್ಲು ಬೆಂಗಳೂರು: 2021ರ ಜನವರಿ 1ರಿಂದ ರಸಗೊಬ್ಬರ ಖರೀದಿ ಮಾಡುವ ರೈತರು ಡಿಜಿಟಲ್‌ ಪಾವತಿ ಮಾಡುವುದು ಕಡ್ಡಾಯ-ವಾಗಲಿದೆ. ಮುಂದಿನ ದಿನಗಳಲ್ಲಿ ದುರುಪಯೋಗ ತಡೆಗಟ್ಟುವುದು ಮತ್ತು ರಸಗೊಬ್ಬರ ಮಾರಾಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಡಿಜಿಟಲ್‌ ಹಣ ವರ್ಗಾವಣೆ ವ್ಯವಸ್ಥೆ ಜಾರಿಗೊಳಿಸಿದ್ದು, ಹೊಸ ವರ್ಷದಿಂದಲೇ ಕಾರ್ಯರೂಪಕ್ಕೆ ಬರಲಿದೆ. ಕೃಷಿ ಆಯುಕ್ತಾಲಯ ಎಲ್ಲ ರಸ-ಗೊಬ್ಬರ ತಯಾರಕಾ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಎಲ್ಲಅಂಗಡಿಗಳಲ್ಲಿ ಡಿಜಿಟಲ್‌ ಪಾವತಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ನಿರ್ದೇಶಿಸಿದೆ. ರಸಗೊಬ್ಬರದಲ್ಲಿ ನೇರ ನೆರವು ವರ್ಗಾವಣೆ ಯೋಜನೆಯಡಿ 2018 ಜನವರಿ 1ರಿಂದ ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಉಪಕರಣದ ಮೂಲಕವೇ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಮಾರಾಟಗಾರು ಕೈಬರಹದ ಬಿಲ್‌ ನೀಡದೆ ಪಿಒಎಸ್‌ ಬಿಲ್‌ ನೀಡಬೇಕು. ರಾಜ್ಯದಲ್ಲಿ ಡಿಜಿಟಲ್‌ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಮೂನೆ ಮೂಲಕ ಕೇಂದ್ರ ಕಚೇರಿಗೆ ತಲುಪಿಸುವಂತೆ ಎಲ್ಲ ಜಿಲ್ಲಾ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ. ಫೋನ್‌ ಪೇ, ಗೂಗಲ್‌ ಪೇ ಮತ್ತಿತರ ವ್ಯಾಲೆಟ್‌ಗಳ ಮೂಲಕ ಯುಪಿಐ ಪೇಮೆಂಟ್‌, ಕಾರ್ಡ್‌ ಸ್ವೈಪ್‌, ಮೊಬೈಲ್‌ ಬ್ಯಾಕಿಂಗ್‌ ಮೂಲಕ ಹಣ ವರ್ಗಾವಣೆ ಮಾಡಬಹುದು. ಅಲ್ಲದೆ ರಸಗೊಬ್ಬರ ಖರೀದಿದಾರರು (ರೈತರು) ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ನೀಡಿ, ಪಿಒಎಸ್‌ ಮೂಲಕ ಬಿಲ್‌ ಪಡೆಯಬೇಕು ಎಂದು ಸೂಚಿಸಲಾಗಿದೆ.


from India & World News in Kannada | VK Polls https://ift.tt/2WKNJDu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...