ಕೆನಡಾದಲ್ಲಿ ಚೀನಾ ವಿರುದ್ಧ ಭಾರೀ ಪ್ರತಿಭಟನೆ: ಭಾರತವೂ ಸೇರಿಂದತೆ ಹಲವು ದೇಶಗಳ ನಾಗರಿಕರು ಭಾಗಿ!

ಟೋರಂಟೋ: ಚೀನಾದ ಆಕ್ರಮಣಕಾರಿ ಹಾಗೂ ದಮನಕಾಋಇ ವರ್ನೆ ಖಂಡಿಸಿ ಕೆನಡಾ ರಾಜಧಾನಿ ಟೋರಂಟೋದಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಕೆನಡಾ-ಹಾಂಕಾಂಗ್ ಲಿಂಕ್, ಬಾಂಗ್ಲಾದೇಶದ ಅಲ್ಪಸಂಖ್ಯಾತರ ಹಕ್ಕು ಗಳ ಒಕ್ಕೂಟ, ಅನಿವಾಸಿ ಭಾರತೀಯರು, ಟಿಬೆಟಿಯನ್ನರು, ವಿಯೆಟ್ನಾಂ ಹಾಗೂ ತೈವಾನ್ ಜನತೆ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಚೀನಾ ತನ್ನ ನೆರೆಯ ದೇಶಗಳೊಂದಿಗೆ ಆಕ್ರಮಣಕಾರಿ ಹಾಗೂ ದಮನಕಾರಿ ನೀತಿಗಳನ್ನು ಅನುಸರಿಸುತ್ತಿದ್ದು, ಇದು ಅತ್ಯಂತ ಖಂಡನೀಯ ಎಂದು ಪ್ರತಿಭಟನಕಾರರು ಕಿಡಿಕಾರಿದರು. ಇಷ್ಟೇ ಅಲ್ಲದೇ ಚೀನಾದ ಆಂತರಿಕ ರಾಜಕಾರಣ ಕೂಡ ದಮನಕಾರಿ ನೀತಿಗಳನ್ನು ಅನುಸರಿಸುತ್ತಿದ್ದು, ಚೀನಿಯರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಟೋರಂಟೋದಲ್ಲಿ ಭಾರೀ ಸಂಖ್ಯೆಯಲ್ಲಿದ್ದ ವಿವಿಧ ದೇಶಗಳ ಪ್ರತಿಭಟನಾಕಾರರು, ಚೀನಾ ತನ್ನ ದಮನಕಾರಿ ನೀತಿಗಳನ್ನು ತ್ಯಜಿಸಬೇಕು ಎಂದು ಆಗ್ರಹಿಸಿದ್ದಾರೆ. ತನ್ನ ಆಕ್ರಮಣಕಾರಿ ವರ್ತನೆಗಳಿಂದಲೇ ತನ್ನೆಲ್ಲಾ ನೆರೆಯ ದೇಶಗಳೊಂದಿಗೆ ಸಂಬಂಧ ಹಳಸಿಕೊಂಡಿರುವ ಚೀನಾ, ಈ ವರ್ತನೆಯನ್ನಯ ಬಿಡದಿದ್ದರೆ ಕಠಿಣ ದಿನಗಳನ್ನು ಕಾಣಲಿದೆ ಎಂದೂ ಪ್ರತಿಭಟನಾಕಾರರು ಎಚ್ಚರಿಸಿದರು. ಭಾರತದಲ್ಲಿ ನಾಗರಿಕರು ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯಗಳನ್ನು ಅನುಭವಿಸುತ್ತಿದ್ದಾರೆ,. ಆದರೆ ಚೀನಾದ ನಾಗರಿಕರಿಗೆ ಈ ಹಕ್ಕುಗಳು ಮರೀಚಿಕೆಯಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಚೀನಾದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಿದ್ದು, ಈ ನಿಟ್ಟಿನಲ್ಲಿ ಇಡೀ ವಿಶ್ವ ಒಂದಾಗಿ ಚೀನಾದ ಜಿನ್‌ಪಿಂಗ್ ಆಡಳಿತವನ್ನು ವಿರೋಧಿಸಬೇಕಿದೆ ಎಂದು ಪ್ರತಿಭಟನಾಕಾರರು ಮನವಿ ಮಾಡಿದರು. ಒಟ್ಟಿನಲ್ಲಿ ಚೀನಾದ ಆಕ್ರಮಣಕಾರಿ ವರ್ತನೆಗೆ ವಿದೇಶಗಳಲ್ಲೂ ಆಕ್ರೋಶ ಭುಗಿಲೆದ್ದಿದ್ದು, ಇಡೀ ವಿಶ್ವ ಒಂದಾಗಿ ಚೀನಾವನ್ನು ವಿರೋಧಿಸುತ್ತಿರುವುದು ಸ್ಪಷ್ಟ.


from India & World News in Kannada | VK Polls https://ift.tt/2PhuxcE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...