' ಮುರಳಿಧರನ್‌ ಸ್ಪಿನ್‌ಗೆ ಆಡಲಾಗುತ್ತಿಲ್ಲ ಅವರ ಬೆರಳು ಮುರಿದು ಹಾಕಿ' : ಯೂಸಫ್‌ ಹೇಳಿದ್ದ ಮಾತನ್ನು ಸ್ಮರಿಸಿದ ಅಖ್ತರ್!

ಹೊಸದಿಲ್ಲಿ: ಕಂಡ ಶ್ರೇಷ್ಠ ವೇಗಿಗಳಲ್ಲಿ ಕೂಡ ಒಬ್ಬರು. ತಮ್ಮ ವೇಗದ ಬೌಲಿಂಗ್‌ನಿಂದ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗಳನ್ನು ಕೆಡವಬಲ್ಲ ಸಾಮರ್ಥ್ಯ ಅವರಲ್ಲಿತ್ತು. ಲೈನ್‌ ಅಂಡ್‌ ಲೆನ್ತ್‌ ಮೂಲಕ ಅಖ್ತರ್ ಬೌನ್ಸರ್‌ ಹಾಕಿದರೆ, ಬ್ಯಾಟ್ಸ್‌ಮನ್‌ಗಳು ತಮ್ಮಲ್ಲಿ ಮೂಡುತ್ತಿದ್ದ ಭಾವನೆಗಳನ್ನು ಹೊರ ಹಾಕುತ್ತಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಅಖ್ತರ್ ಅವರನ್ನು ಬೌಲಿಂಗ್‌ನಲ್ಲಿ ಹೊಡೆಯಬೇಡಿ ಎಂದು ಕೇಳುವ ಯಾವುದೇ ಆಟಗಾರರಿದ್ದಾರೆಯೇ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅಖ್ತರ್, ಮುತ್ತಯ್ಯ ಮುರಳೀಧರನ್ ತಮ್ಮ ಹಾದಿಯಲ್ಲಿ ಬೌನ್ಸರ್‌ಗಳನ್ನು ಹಾಕದಂತೆ ಮನವಿ ಮಾಡಿದ್ದನ್ನು ನೆನಪಿಸಿಕೊಂಡರು. "ಸವೇರಾ ಪಾಷ ಅವರೊಂದಿಗೆ ಯೂಟ್ಯೂಬ್‌ ಚಾಟ್‌ ಶೋ 'ಕ್ರಿಕ್‌ ಕಾಸ್ಟ್‌' ನಲ್ಲಿ ಮಾತನಾಡಿದ ಅಖ್ತರ್, "ಸಾಕಷ್ಟು ಆಟಗಾರರು ಚೆಂಡಿನಲ್ಲಿ ನಮಗೆ ಹೊಡೆಯಬೇಡಿ ಎಂದು ಕೇಳಿಕೊಂಡಿದ್ದಾರೆ. ಅದರಲ್ಲಿ ಕೂಡ ಒಬ್ಬರಾಗಿದ್ದಾರೆ. ಭಾರತದ ಟೈಲ್‌ ಎಂಡರ್ಸ್ ಕೂಡ ನನ್ನಲ್ಲಿ ಇದೇ ರೀತಿ ಮನವಿ ಮಾಡಿಕೊಂಡಿದ್ದರು," ಎಂದು ಅಖ್ತರ್ ಹೇಳಿದರು. ಮುರಳಿಧರನ್‌ಗೆ ಬೌನ್ಸರ್‌ ಹಾಕುವಂತೆ ಹೇಳಿದ್ದ ಮಾತನ್ನು ರಾವಲ್ಪಿಂಡಿ ಎಕ್ಸ್‌ಪ್ರಸ್‌ ಬಹಿರಂಗಪಡಿಸಿದರು. "ಮುತ್ತಯ್ಯ ಮುರಳಿಧರನ್‌ ಸ್ಪಿನ್‌ಗೆ ನಾನು ಆಡಲು ಸಾಧ್ಯವಾಗುತ್ತಿಲ್ಲ. ಅವರಿಗೆ ಚೆಂಡಿನಲ್ಲಿ ಅವರ ಬೆರಳುಗಳನ್ನು ಮುರಿಯಿರಿ ಎಂದು ಮೊಹಮ್ಮದ್‌ ಯೂಸಫ್‌ ಹೇಳಿದ್ದರು. ಅದೇ ರೀತಿ ಮುತ್ತಯ್ಯ ಮುತರಳಿಧರನ್‌ಗೆ ಹಲವು ಬೌನ್ಸರ್‌ಗಳನ್ನು ಹಾಕಿದೆ. ಆ ವೇಳೆ ಅವರು ದಯವಿಟ್ಟು ಬೌನ್ಸರ್‌ಗಳನ್ನು ಹಾಕಬೇಡಿ, ನನಗೆ ಚೆಂಡು ಬಿದ್ದರೆ ಸಾಯುತ್ತೇನೆ," ಎಂದು ಸ್ಪಿನ್‌ ದಿಗ್ಗಜ ಹೇಳಿದ್ದನ್ನು ಅಖ್ತರ್‌ ಸ್ಮರಿಸಿಕೊಂಡರು. ದಕ್ಷಿಣ ಆಫ್ರಿಕಾ ಗ್ಯಾರಿ ಕಸ್ಟ್ರನ್‌ ಅವರು ಒಮ್ಮೆ ತಮ್ಮ ಬೌಲಿಂಗ್‌ನಲ್ಲಿ ತಲೆಗೆ ತಗುಲಿಸಿಕೊಂಡಿದ್ದನ್ನು ಪಾಕಿಸ್ತಾನ ಮಾಜಿ ವೇಗಿ ಸ್ಮರಿಸಿಕೊಂಡರು. "ನನ್ನ ಬೌಲಿಂಗ್‌ನಲ್ಲಿ ಪುಲ್‌ ಮಾಡಲು ಹೋಗಬೇಡಿ ಎಂದು ಗ್ಯಾರಿ ಕಸ್ಟ್ರನ್‌ಗೆ ಮೊದಲೇ ಹೇಳಿದ್ದೆ. ವಿಶ್ವದ ಅತಿ ವೇಗದ ಬೌಲರ್‌ಗೆ ಪುಲ್‌ ಹೊಡೆಯಲು ಪ್ರಯತ್ನಿಸಬೇಡಿ ಎಂದು ಅವರಿಗೆ ಹೇಳಿದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ, ಚೆಂಡು ಸರಿಯಾಗಿ ಅವರಿಗೆ ಬಡಿಯಿತು. ನಾನು ಯಾವಾಗಲಾದರೂ ಅವರನ್ನು ಭೇಟಿಯಾದರೆ, ತಮ್ಮ ಕಣ್ಣಲ್ಲಿ ಹಳೆಯ ಘಟನೆಯನ್ನು ನೆನಪಿಸುತ್ತಾರೆ," ಎಂದು ಹೇಳಿದರು. ಶೋಯೆಬ್‌ ಅಖ್ತರ್‌ ತಮ್ಮ ವೃತ್ತಿ ಜೀವನದಲ್ಲಿ 46 ಟೆಸ್ಟ್ ಪಂದ್ಯಗಳಾಡಿದ್ದು, 178 ವಿಕೆಟ್‌ಗಳನ್ನು ಪಡೆದಿದ್ದಾರೆ ಹಾಗೂ 163 ಓಡಿಐ ಪಂದ್ಯಗಳಿಂದ 247 ವಿಕೆಟ್‌ಗಳನ್ನು ಕಿತ್ತಿದ್ದಾರೆ. 15 ಟಿ20 ಪಂದ್ಯಗಳಿಂದ 19 ವಿಕೆಟ್‌ಗಳನ್ನು ಸೇರಿಸಿಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2EmTaCI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...