ಸಿಐಡಿ ಅಧಿಕಾರಿಗಳ ಭರ್ಜರಿ ಬೇಟೆ: ರಾಜಕಾರಣಿಯ ಮನೆಯಲ್ಲಿ ಸಿಕ್ತು 3 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಮತ್ತು ರೂ. 1 ಕೋಟಿ ನಗದು..!

ಆಂಧ್ರಪ್ರದೇಶ: ಅಧಿಕಾರಿಗಳು ದೊಡ್ಡ ಕುಳವೊಂದನ್ನು ಬೇಟೆಯಾಡಿದ್ದಾರೆ. ಆಂಧ್ರ ಪ್ರದೇಶದ ಖಾಜಿಪೇಟೆಯಲ್ಲಿ ರಾಜ್ಯ ಕೈಮಗ್ಗ ನೇಕಾರ ಸಂಘದ ಮಾಜಿ ಅಧ್ಯಕ್ಷ ಮನೆಗೆ ಶುಕ್ರವಾರ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣ ಚಿನ್ನಾಭರಣಗಳು ಮತ್ತು ನಗದು ಸಿಕ್ಕಿವೆ. ಆಂಧ್ರದ ರಾಜ್ಯ ಕೈಮಗ್ಗ ನೇಕಾರ ಸಂಘದ ಮಾಜಿ ಅಧ್ಯಕ್ಷ ಗುಜ್ಜಲಾ ಶ್ರೀನಿವಾಸುಲು ಮನೆ, ಕಚೇರಿ ಸೇರಿದಂತೆ ಅವರ ಆಪ್ತರ ಮನೆಗೆ ಏಕಕಾಲದಲ್ಲಿ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 3 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಕೋಟಿ ರೂಪಾಯಿ ನಗದು ಸಿಕ್ಕಿವೆ. ಅದರ ಜೊತೆಗೆ ಪ್ರಮುಖ ದಾಖಲೆಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಟಿಡಿಪಿ ಆಡಳಿತದ ಅವಧಿಯಲ್ಲಿ ಕೈಮಗ್ಗ ನೇಕಾರರ ಸಂಘದಲ್ಲಿ ನಡೆದ ಅಕ್ರಮಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ ತಿರುಪತಿ ಮತ್ತು ಕರ್ನೂಲ್‌ನ ಸಿಬಿಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಕಲಿ ನೇಕಾರರ ಸಹಕಾರಿ ಸಂಘಗಳ ಹೆಸರಿನಲ್ಲಿ ಶ್ರೀನಿವಾಸುಲು ಅವರು ಸರ್ಕಾರದ ಹಣವನ್ನು ಮತ್ತು ನೇಕಾರರಿಗೆ ನೀಡಬೇಕಾಗಿದ್ದ ಸಹಾಯಧನವನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಇನ್ನು ಶಾಲಾ ಮಕ್ಕಳು, ಪೊಲೀಸ್ ಮತ್ತು ನೈರ್ಮಲ್ಯ ಸಿಬ್ಬಂದಿಯ ಸಮವಸ್ತ್ರದ ಬಟ್ಟೆ ಸರಬರಾಜಿನಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಕೈಮಗ್ಗ ಬಟ್ಟೆಯ ಬದಲಿಗೆ ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ವಿದ್ಯುತ್‌ ಮಗ್ಗಗಳಿಂದ ಉತ್ಪತ್ತಿಯಾಗುವ ಪಾಲೆಯೆಸ್ಟರ್ ಬಟ್ಟೆಯನ್ನು ಸರಬರಾಜು ಮಾಡಿಸಿಕೊಂಡಿದ್ದರು ಎಂಬ ಆರೋಪ ಅವರ ಮೇಲಿದೆ.


from India & World News in Kannada | VK Polls https://ift.tt/2E6nrpD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...